fbpx
ಸಮಾಚಾರ

ಸಚಿವ ಸುಧಾಕರ್ ಮನೆ ಮುಂದೆ ಸಿಬ್ಬಂದಿ ಮಾರಾಮಾರಿ:ಕೊರಳ ಪಟ್ಟಿ ಹಿಡಿದು ಹೊಡೆದಾಡಿಕೊಂಡ ಸಚಿವರ ಸಿಬ್ಬಂದಿಗಳು

ಸಚಿವ ಡಾ. ಕೆ ಸುಧಾಕರ್ ನಿವಾಸದ ಮುಂದೆ ಸಿಬ್ಬಂದಿ ನಡುವೆ ಮಾರಾಮಾರಿ ನಡೆದಿದೆ. ಬೆಂಗಳೂರಿನ ಸದಾಶಿವನಗರದಲ್ಲಿರುವ ಸಚಿವ ಸುಧಾಕರ್ ಮನೆಯ ಮುಂದೆ, ಗನ್‍ಮ್ಯಾನ್ ತಿಮ್ಮಯ್ಯ ಹಾಗೂ ಡ್ರೈವರ್ ಸೋಮಶೇಖರ್ ನಡು ಬೀದಿಯಲ್ಲಿ ಉರುಳಾಡಿಕೊಂಡು ಒಬ್ಬರಿಗೊಬ್ಬರು ಕಿತ್ತಾಡಿಕೊಂಡಿದ್ದಾರೆ.

 

 

ಸುಧಾಕರ್ ಗನ್​ಮ್ಯಾನ್ ಎನ್ನಲಾಗಿರುವ ತಿಮ್ಮಯ್ಯ ಅನ್ನೋರು ಸಚಿವ ಎಸ್​ಟಿ ಸೋಮಶೇಖರ್ ಮನೆಯ ಖಾಸಗಿ ಡ್ರೈವರ್​ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಇಬ್ಬರೂ, ಪರಸ್ಪರ ಕುಸ್ತಿಗೆ ಬಿದ್ದು, ಬಡಿದಾಡಿಕೊಳ್ತಿರೋದನ್ನ ಗಮನಿಸಬಹುದಾಗಿದೆ.

ನಿನ್ನೆ ಗನ್ ಮ್ಯಾನ್ ಟೀ ಮಾರುತ್ತ ಬಂದ ವ್ಯಕ್ತಿಯನ್ನು ಹೊಡೆದು ಕಳುಹಿಸಿದ್ದ. ಈ ವೇಳೆ ಚಾಲಕ ಸೋಮಶೇಖರ್ ಗನ್ ಮ್ಯಾನ್ ನನ್ನು ಬಿಡಿಸಿ ಬುದ್ಧಿ ಹೇಳಿದ್ದರು. ಈ ವಿಷಯವನ್ನು ಚಾಲಕ ಸಚಿವರಿಗೆ ಹೇಳಿರಬಹುದು ಎಂಬ ಆತಂಕದಿಂದ ಇಂದು ಮುಂಜಾನೆ ಜಗಳ ಆರಂಭಸಿದ್ದಾನೆ. ಜಗಳ ಗನ್ ಮ್ಯಾನ್ ಹಾಗೂ ಚಾಲಕನ ನಡುವಿನ ಹೊಡೆದಾಟಕ್ಕೆ ಕಾರಣವಾಗಿದೆ. ನಡುರಸ್ತೆಯಲ್ಲೇ ಪರಸ್ಪರ ಹೊಡೆದಾಡಿಕೊಂಡ ಇಬ್ಬರು ಬಟ್ಟೆ ಕಿತ್ತು ಬರುವಂತೆ ಕಿತ್ತಾಡಿಕೊಂಡಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರು ಮಧ್ಯಪ್ರವೇಶಿಸಿ ಕಿತ್ತಾಟ ನಿಲ್ಲಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top