fbpx
ಸಮಾಚಾರ

“ಹಿತೇಶಾಗೆ ಮೊದಲಿನಿಂದಲೂ ಆ ಅಭ್ಯಾಸವಿತ್ತು” ರೂಮ್ ಮೇಟ್ ಬಿಚ್ಚಿಟ್ಟಳು ಕಿರಿಕ್ ಮಹಿಳೆಯ ಅಸಲಿಯತ್ತು..

ಮಹಿಳೆ ಮೇಲೆ ಹಲ್ಲೆ ಮಾಡಿದ ಆರೋಪ ಎದುರಿಸುತ್ತಿರುವ ಜೊಮ್ಯಾಟೊ ಸಂಸ್ಥೆಯಲ್ಲಿ ಡಿಲೆವರಿ ಬಾಯ್​ ಆಗಿ ಕೆಲಸ ಮಾಡುತ್ತಿದ್ದ ಕಾಮರಾಜ್​ ಪರ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಬೆಂಬಲ ವ್ಯಕ್ತವಾಗುತ್ತಿದೆ. ಈ ಘಟನೆಯಿಂದ ನೊಂದಿರುವ ವ್ಯಕ್ತಿ ಕಾಮರಾಜ್​ ಅವರಿಗೆ ನ್ಯಾಯ ಸಿಗಬೇಕೆಂದು ಸಾಕಷ್ಟು ಮಂದಿ ಸೋಶಿಯಲ್​ ಮೀಡಿಯಾದ ಮೂಲಕ ಬೆಂಬಲ ನೀಡುತ್ತಿದ್ದಾರೆ.

 

 

ಇದೀಗ ಹಿತೇಶಾ ಚಂದ್ರಾನಿ ಜೊತೆಯಲ್ಲಿದ್ದ ಮಾಜಿ ರೂಮ್‌ಮೇಟ್ ಕೂಡ ಆಕೆ ಕುರಿತ ಸ್ಫೋಟಕ ವಿಚಾರವೊಂದನ್ನ ಬಹಿರಂಗಪಡಿಸಿದ್ದಾರೆ. ಉಚಿತವಾಗಿ ಆಹಾರ ಪಡೆದುಕೊಂಡು, ಕಂಪನಿಯ ಸಿಬ್ಬಂದಿಯವರನ್ನೇ ಬಯ್ಯುವುದು ಹಿತೇಶಾ ಅಭ್ಯಾಸವೇ ಆಗಿತ್ತು ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

“ಹಿತೇಶಾ ಬೆಂಗಳೂರಿನಲ್ಲಿ ನನಗೆ ಮೂರು ವರ್ಷಗಳ ಕಾಲ ರೂಂ ಮೇಟ್ ಆಗಿದ್ದಳು. ಈ ಹಿಂದೆಯೂ ಸಾಕಷ್ಟು ಸಲ ಪಿಜ್ಜಾವನ್ನು ಹೀಗೇ ಆರ್ಡರ್ ಮಾಡಿ ತರಿಸಿಕೊಳ್ಳುತ್ತಿದ್ದಳು. ಆಗಲೂ ಡೆಲಿವರಿ ಬಾಯ್ ಗಳ ಜೊತೆ ಹೀಗೇ ಜಗಳ ಮಾಡುತ್ತಿದ್ದಳು. ಆಹಾರವನ್ನು ಉಚಿತವಾಗಿ ತೆಗೆದುಕೊಳ್ಳುವುದು ಅವಳಿಗೆ ಅಭ್ಯಾಸವಾಗಿಬಿಟ್ಟಿತ್ತು” ಎಂದು ಹಿತೇಶಾ ಚಂದ್ರಾನಿ ಸ್ನೇಹಿತೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.

ಏನಿದು ಘಟನೆ?
ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಮಾಡೆಲ್‌ ಹಿತಾಶಾ, ತನ್ನ ಮೇಲೆ ಝೊಮ್ಯಾಟೋ ಡೆಲಿವರಿ ಬಾಯ್‌ ಕಾಮರಾಜ್‌ ಮೂಗಿಗೆ ಗುದ್ದಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದರು. ಝೊಮ್ಯಾಟೋ ಕಾಮರಾಜ್‌ ಅವರನ್ನು ಕೆಲಸದಿಂದ ಕಿತ್ತು ಹಾಕಿತ್ತು. ಕಾಮರಾಜ್‌ ಬಂಧನವಾಗಿತ್ತು. ಇದೀಗ ಜಾಮೀನು ಪಡೆದು ಹೊರಬಂದಿರುವ ಕಾಮರಾಜ್‌, ತಾನು ಆಕೆಯ ಮೇಲೆ ಹಲ್ಲೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿ ಈ ಕಾರಣಕ್ಕೆ ತನ್ನ ಕೆಲಸ ಹೋಗಿದ್ದರ ಕುರಿತು ನೋವು ತೋಡಿಕೊಂಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top