fbpx
ಸಮಾಚಾರ

ಗ್ರಾಹಕರೇ ಗಮನಿಸಿ: ನಿಮ್ಮ ಬಳಿ ಇರೋ ಚೆಕ್ ಬುಕ್, ಪಾಸ್ ಪುಸ್ತಕ ಇನ್ಮುಂದೆ ವರ್ಕ್ ಆಗಲ್ಲ! ಗ್ರಾಹಕರು ಏನು ಮಾಡಬೇಕು? ಇಲ್ಲಿದೆ ಮಾಹಿತಿ

ನೀವು ಚೆಕ್‌ ಮೂಲಕ ವ್ಯವಹಾರ ಮಾಡುತ್ತಿದ್ದರೆ ಈ ಸುದ್ದಿ ಒಮ್ಮೆ ಓದಲೇಬೇಕು, ಏಕೆಂದರೆ ಏಪ್ರಿಲ್ 1, 2021ರಿಂದ ಎಂಟು ಬ್ಯಾಂಕ್‌ಗಳ ಹಳೆ ಚೆಕ್‌ಬುಕ್, ಪಾಸ್‌ ಬುಕ್‌ ಅಮಾನ್ಯವಾಗಲಿದೆ. ಹೀಗಾಗಿ ನೀವು ಹೊಸ ಚೆಕ್‌ಬುಕ್ ಹಾಗೂ ಪಾಸ್‌ಬುಕ್‌ಗಾಗಿ ಅರ್ಜಿ ಸಲ್ಲಿಸಬೇಕಿದೆ.

ದೇನಾ ಬ್ಯಾಂಕ್, ವಿಜಯಾ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್, ಆಂಧ್ರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಅಲಹಾಬಾದ್ ಬ್ಯಾಂಕ್​ನ ಗ್ರಾಹಕರ ಬ್ಯಾಂಕ್ ಖಾತೆ ಸಂಖ್ಯೆಯು ಏಪ್ರಿಲ್ 1, 2021ರಿಂದ ಬದಲಾವಣೆ ಆಗಲಿದೆ. ಈ ಬ್ಯಾಂಕ್​ಗಳು ಇತರ ದೊಡ್ಡ ಬ್ಯಾಂಕ್ಗಳ ಜತೆಗೆ ವಿಲೀನ ಆಗಿದ್ದರಿಂದ ಈ ಬೆಳವಣಿಗೆ ಆಗಿದೆ.

ಏಪ್ರಿಲ್ 1, 2021ರಿಂದ ಮೊದಲುಗೊಂಡು ಎಂಟು ಬ್ಯಾಂಕುಗಳಲ್ಲಿ ಹಳೆ ಚೆಕ್ ಬುಕ್, ಪಾಸ್ ಬುಕ್ ಇನ್ಮುಂದೆ ವರ್ಕ್ ಆಗಲ್ಲ, ಗ್ರಾಹಕರು ಹೊಸ ಅಗತ್ಯವಿದ್ದರೆ ಹೊಸ ಚೆಕ್ ಬುಕ್, ಪಾಸ್ ಬುಕ್‌ಗಾಗಿ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದಾಗಿದೆ. ಇದರ ಜೊತೆಗೆ ಏಪ್ರಿಲ್ 1, 2021ರಿಂದ ಅನೇಕ ಬ್ಯಾಂಕುಗಳ ಐಎಫ್‌ಎಸ್‌ಸಿ ಹಾಗೂ ಎಂಐಸಿಆರ್ ಕೋಡ್ ಬದಲಾಗುತ್ತಿದ್ದು, ಈ ಬಗ್ಗೆ ಕೂಡಾ ಗ್ರಾಹಕರು ಮಾಹಿತಿ ಪಡೆದುಕೊಳ್ಳಬೇಕಾಗುತ್ತದೆ.

ಈ ಬ್ಯಾಂಕ್​ಗಳ ಗ್ರಾಹಕರು ಏನು ಮಾಡಬೇಕು?
* ನೀವು ಒಂದು ವೇಳೆ ಈ ಬ್ಯಾಂಕ್​ಗಳ ಗ್ರಾಹಕರಾಗಿದ್ದಲ್ಲಿ ಮೊಬೈಲ್ ಸಂಖ್ಯೆ, ವಿಳಾಸ, ನಾಮಿನಿ ಹೆಸರು ಮುಂತಾದವನ್ನು ಅಪ್​ಡೇಟ್ ಮಾಡಬೇಕಾಗುತ್ತದೆ. ಯಾವ ಬ್ಯಾಂಕ್ ಜತೆಗೆ ನಿಮ್ಮ ಬ್ಯಾಂಕ್ ವಿಲೀನ ಆಗಿದೆಯೋ ಆ ಬ್ಯಾಂಕ್​ನಿಂದ ಹೊಸ ಚೆಕ್ ಪುಸ್ತಕ ಮತ್ತು ಪಾಸ್​ಪುಸ್ತಕವನ್ನು ಪಡೆದುಕೊಳ್ಳಬೇಕು.
* ಹೊಸ ಚೆಕ್ ಪುಸ್ತಕ ಹಾಗೂ ಪಾಸ್ ಪುಸ್ತಕವನ್ನು ಪಡೆದ ಮೇಲೆ ವಿವಿಧ ಫೈನಾನ್ಷಿಯಲ್ ಇನ್​ಸ್ಟ್ರುಮೆಂಟ್​ನಲ್ಲಿ ದಾಖಲಾಗಿರುವ ನಿಮ್ಮ ಬ್ಯಾಂಕಿಂಗ್ ಮಾಹಿತಿಯನ್ನು ಅಪ್​​ಡೇಟ್ ಮಾಡಬೇಕಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top