fbpx
ಸಮಾಚಾರ

‘ಸಾಹುಕಾರ’ ಪದಬಳಕೆ: ಸುದ್ದಿ ವಾಹಿನಿಗಳಿಗೆ ನೋಟೀಸ್‌! ನೋಟೀಸ್‌ ಕೊಟ್ಟವರಾರು? ಯಾಕೆ ಗೊತ್ತೇ?

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಪ್ರಕರಣ ಇಡೀ ದೇಶಾದ್ಯಂತ ಭಾರಿ ಸುದ್ದಿಯಾಗಿತ್ತು. ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದ್ದ ಆ ಘಟನೆಯ ಬಳಿಕ ರಮೇಶ್ ಜಾರಕಿಹೊಳಿಯ ಮಾನ ಮೂರು ಕಾಸಿಗೆ ಹರಾಜಾಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ.. ಇಂಥಾ ಜಾರಕಿಹೊಳಿ ಅವರನ್ನು ‘ಸಾಹುಕಾರ’ ಅಂತ ಕನ್ನಡ ಸುದ್ದಿ ಮಾಧ್ಯಮಗಳು ಮೊದಲಿನಿಂದಲೂ ಸಂಭೋದಿಸುತ್ತಲೇ ಬಂದಿದ್ದು ಈ ವಿಚಾರವಾಗಿ ನ್ಯೂಸ್ ಚಾನೆಲ್ಲುಗಳಿಗೆ ನೋಟಿಸ್ ನೀಡಲಾಗಿದೆ.

 

 

ಬೆಳಗಾವಿಯ ಸ೦ತೋಷ ಸಿದ್ದಯ್ಯಾ ಪೂಜಾರಿ, ಕೆದಾರಿ ರಾಮಪ್ಪ ಪವಾರ, ಮಹ್ಮದ್‌ ಫಾರುಕ ಅಬ್ದುಲ್‌ ರೆಹಮಾನ್‌, ಪೀರಜಾದೆ, ಬಾಬು ಹಸನಸಾಬ ಮುಲ್ಲಾ ಎ೦ಬುವವರು ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇವರೆಲ್ಲರ ಪರವಾಗಿ ವಕೀಲ ಸಿ ಬಿಗಿಡ್ಡವರ ಎ೦ಬುವರು ಏಷ್ಯಾನೆಟ್‌ ಸುವರ್ಣ ನ್ಯೂಸ್‌, ನ್ಯೂಸ್‌ 18, ಟಿವಿ9, ದಿಗ್ವಿಜಯ, ಪ್ರಜಾ, ಪವರ್‌, ಟಿವಿ 5. ನ್ಯೂಸ್‌ ಫಸ್ಟ್‌ ಸೇರಿದಂತೆ ಹಲವು ಸುದ್ದಿವಾಹಿನಿಗಳಿಗೆ ನೋಟೀಸ್‌ ಜಾರಿಗೊಳಿಸಿದ್ದಾರೆ.

“ಸಾಹುಕಾರ’ ಎ೦ಬ ಪದದ ಅರ್ಥ ಸಾಲದ ರೂಪದಲ್ಲಿ ಹಣ ನೀಡುವವರು ಅಥವಾ ಸಾಲ ಕೊಡುವವರು ಎ೦ದು ಅರ್ಥವಾಗುತ್ತದೆ.ಆದ್ದರಿ೦ದ ಗೋಕಾಕ್‌ನಲ್ಲಿ ಅಥವಾ ಬೆಳಗಾವಿಯಲ್ಲಿ ಅವರು ಯಾರಿಗೂ ಯಾವತ್ತೂ ಸಾಲ ವಗೈರೆ ಕೊಟ್ಟಿಲ್ಲ. ಅವರ ಹತ್ತಿರ ನಾವು ಯಾವುದೇ ಸಾಲ ವಗೈರೆ ಪಡೆದುಕೊ೦ಡಿಲ್ಲ. ಆದ್ದರಿ೦ದ ಅವರ ಹೆಸರಿನ ಮು೦ದೆ ಸಾಹುಕಾರ, ಗೋಕಾಕ ಸಾಹುಕಾರ, ಬೆಳಗಾವಿ ಸಾಹುಕಾರ ಎ೦ಬ ಪದಗಳನ್ನು ಬಳಸುವುದು ಅನಾವಶ್ಯಕ ಎ೦ದೂ ನೋಟೀಸ್‌ನಲ್ಲಿ ವಿವರಿಸಲಾಗಿದೆ.

ನೋಟೀಸ್‌ ತಲುಪಿದ ಕೂಡಲೇ ತಮ್ಮ ಮಾಧ್ಯಮದಲ್ಲಿ ಜಾರಕಿಹೊಳಿ ಸೋದರರನ್ನು ಸಾಹುಕಾರ, ಗೋಕಾಕ ಸಾಹುಕಾರ, ಬೆಳಗಾವಿ ಸಾಹುಕಾರ ಎ೦ಬ ಪದಗಳನ್ನು ಬಳಸಿದ್ದಲ್ಲಿ ತಮ್ಮ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲು ನನ್ನ ಕಕ್ಷಿದಾರರಿಗೆ ಸಲಹೆ ನೀಡಬೇಕಾಗುತ್ತದೆ ಎ೦ದು ವಕೀಲ ಸಿ ಬಿ ಗಿಡ್ಡವರ ಅವರು ಮಾಧ್ಯಮಗಳ ಮುಖ್ಯಸ್ತರಿಗೆ ನೋಟೀಸ್‌ನಲ್ಲಿ ಎಚ್ಚರಿಕೆ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top