fbpx
ಸಮಾಚಾರ

“ನನ್ನ ತಂಗಿ ಇನ್ನೂ ವೀಲ್ ಚೇರ್ ನಲ್ಲೇ ಇದ್ದಾಳೆ” ನಟಿ ರಿಷಿಕಾ ಆರೋಗ್ಯದ ಬಗ್ಗೆ ಆದಿತ್ಯ ಭಾವುಕ ಮಾತು

ನಟ ಆದಿತ್ಯ ಖಾಸಗಿ ಸಂದರ್ಶನವೊಂದರಲ್ಲಿ ಸಹೋದರಿ ರಿಷಿಕಾ ಸಿಂಗ್ ಬಗ್ಗೆ ಮಾತನಾಡುತ್ತಾ ಭಾವುಕರಾಗಿದ್ದಾರೆ. ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಆದಿತ್ಯ ಸಹೋದರಿ ರಿಷಿಕಾ ಸಿಂಗ್ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ್ದಾರೆ. ಕೆಲವು ತಿಂಗಳ ಹಿಂದೆ ನಡೆದ ಭೀಕರ ರಸ್ತೆ ಅಪಘಾತದಿಂದ ಚೇತರಿಸಿಕೊಳ್ಳುತ್ತಿರುವ ರಿಷಿಕಾ ಪರಿಸ್ಥಿತಿ ನೆನೆದು ದಯವಿಟ್ಟು ಈ ತಪ್ಪು ಯಾರು ಮಾಡದಂತೆ ಮನವಿ ಮಾಡಿಕೊಂಡಿದ್ದಾರೆ.

ಆದಿತ್ಯ ಮಾತು:
ನನ್ನ ತಂಗಿ ರಿಷಿಕಾ ಈಗಲೂ ವೀಲ್ ಚೇರ್ ನಲ್ಲೇ ಇದ್ದಾಳೆ, ಸ್ಪೈನಲ್‌ ಕಾರ್ಡ್‌ಗೆ ಏಟಾಗಿರೋದ್ರಿಂದ ಬಹಳ ನಿಧನವಾಗಿ ಗುಣಮುಖಳಾಗುತ್ತಿದ್ದಾಳೆ. ವೀಲ್ ಚೇರ್‌ನಲ್ಲೇ ಇದ್ದಾಳೆ ನಿಧಾನವಾಗಿ ಎದ್ದೇಳಲು ಪ್ರಯತ್ನ ಮಾಡುತ್ತಿದ್ದಾಳೆ. ಸಂಪೂರ್ಣವಾಗಿ ಗುಣಮುಖಳಾಗೋಕ್ಕೆ 1 ವರ್ಷ ಬೇಕು ಎಂದಿದ್ದಾರೆ ಡಾಕ್ಟರ್ ಎಂದು ಆದಿತ್ಯ ಮಾತನಾಡಿದ್ದಾರೆ.

‘ಅಂದು ನನ್ನ ತಂಗಿ ಸೀಟ್‌ ಬೆಲ್ಟ್‌ ಹಾಕದೇ ಇದ್ದಿದ್ದಕ್ಕೆ ಆ ಆ್ಯಕ್ಸಿಡೆಂಟ್ ಆಗಿ, ಇಷ್ಟು ದೊಡ್ಡ ಮಟ್ಟದಲ್ಲಿ ಏಟು ಆಗಿರೋದು. ನನ್ನನ್ನು ಹೊರತುಪಡಿಸಿ ಇಡೀ ಫ್ಯಾಮಿಲಿ ಬರ್ತಡೇ ಪಾರ್ಟಿ ಮುಗಿಸಿಕೊಂಡು ಬರುತ್ತಿರುವಾಗ ಈ ಘಟನೆ ನಡೆದಿದೆ. ಮಳೆ ಬಂದಿದ್ದ ಕಾರಣ ರೋಡ್ ಸ್ಕಿಡ್ ಆಗಿತ್ತು. ಬಹುಶಃ ಸೀಟ್‌ ಬೆಲ್ಟ್‌ ಹಾಕಿದಿದ್ರೆ ನನ್ನ ತಂಗಿಗೆ ಈ ಪರಿಸ್ಥಿತಿ ಬರ್ತಿರಲಿಲ್ಲ,’ ಎಂದು ಹೇಳುತ್ತಾ ಆದಿತ್ಯ ಭಾವುಕರಾಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top