fbpx
ಸಮಾಚಾರ

ಮಗನ ಹೆಸರಲ್ಲಿ ಹೊಸ ಇನ್​ಸ್ಟಾಗ್ರಾಂ ಖಾತೆ ತೆರೆದ ಮಯೂರಿ: ಮುದ್ದು ಕಂದಮ್ಮನ ಜೊತೆ ಫೋಟೋ ಹಂಚಿಕೊಂಡ ನಟಿ

ಸೆಲೆಬ್ರೆಟಿಗಳು ತಮ್ಮ ಮಕ್ಕಳ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಖಾತೆ ತೆರೆಯೋದು ಸಹಜ. ಆದರೆ ಸ್ಟಾರ್​ ಕಿಡ್ಸ್​ಗಳು ಸ್ವಲ್ಪ ದೊಡ್ಡವರಾದ ಮೇಲೆ ಪೋಷಕರು ಮಕ್ಕಳ ಹೆಸರಿನಲ್ಲಿ ಖಾತೆ ತೆರೆಯುತ್ತಾರೆ. ಆದರೆ ಕನ್ನಡದ ನಟಿ ಮಯೂರಿ ಮಗು ಹುಟ್ಟಿದ ಕೂಡಲೇ ಮಗನಿಗಾಗಿ ಇನ್​ಸ್ಟಾಗ್ರಾಂನಲ್ಲಿ ಖಾತೆ ತೆರೆದಿದ್ದಾರೆ.

 

 

ನಟಿ ಮಯೂರಿ ಹಾಗೂ ಅರುಣ್ ದಂಪತಿಗೆ ಇತ್ತೀಚೆಗಷ್ಟೆ ಗಂಡು ಮಗುವಾಗಿದೆ. ಈ ವಿಷಯವನ್ನು ಈ ಸೆಲೆಬ್ರಿಟಿ ದಂಪತಿ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಗರ್ಭಿಣಿಯಾಗಿರುವ ದಿನದಿಂದ ಮಗು ಹುಟ್ಟುವವರೆಗೂ ಕೆಲವು ವಿಚಾರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದ ಜೋಡಿ ಇದೀಗ ಮಗು ಹುಟ್ಟಿ ಕೆಲವೇ ಕ್ಷಣಗಳಲ್ಲಿ ಒಂದು ಇನ್‍ಸ್ಟಾಗ್ರಾಮ್ ಖಾತೆಯನ್ನು ಮುದ್ದು ಕಂದನಿಗಾಗಿ ತೆರೆದಿದ್ದಾರೆ.

ಸ್ಟಾರ್ ಬಾಯ್ ಹೆಸರಿನಲ್ಲಿ ಮಗನಿಗಾಗಿ ಇನ್‍ಸ್ಟಾಗ್ರಾಮ್ ಖಾತೆ ತೆರೆದಿದ್ದಾರೆ. ಸ್ಟಾರ್ ಕಿಡ್ ಖಾತೆಗೆ ಈಗಾಗಲೇ 2 ಸಾವಿರಕ್ಕೂ ಅಧಿಕ ಮಂದಿ ಹಿಂಬಾಲಕರಿದ್ದಾರೆ. ಮಯೂರಿ ಮಗನ ತುಂಟಾಟ ಕೆಲವು ವೀಡಿಯೋ, ಫೋಟೋ ಮತ್ತು ಕೆಲವು ಹೊಸ ವಿಚಾರಗಳ ಕುರಿತಾಗಿ ಮಯೂರಿ ಹೊಸ ಖಾತೆ ಮೂಲಕವಾಗಿ ಅಭಿಮಾನಿಗಳನ್ನು ತಲುಪಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top