fbpx
ಸಮಾಚಾರ

ಸಿನಿಮಾ ಆಗುತ್ತಾ ಜಾರಕಿಹೊಳಿಯ ರಾಸಲೀಲೆ ಪ್ರಕರಣ: ಫಿಲಂ ಚೇಂಬರ್‌ನಲ್ಲಿ ‘ಸಿಡಿ ಲೇಡಿ’ ಸಿನಿಮಾ ಟೈಟಲ್ ರಿಜಿಸ್ಟರ್

ಕರ್ನಾಟಕದ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಸಿ.ಡಿ ಪ್ರಕರಣಕ್ಕೆ ದಿನ ಕಳೆದಂತೆ ತಿರುವುಗಳ ಮೇಲೆ ತಿರುವು ಸಿಗುತ್ತಿದೆ.. ಭಾರೀ ಸದ್ದು ಮಾಡುತ್ತಿರುವ ರಾಸಲೀಲೆ ಸಿಡಿ ಪ್ರಕರಣ ಇದೀಗ ಸಿನಿಮಾ ಆಗುತ್ತಿದೆ ಎನ್ನಲಾಗಿದ್ದು, ಕನ್ನಡ ಫಿಲ್ಮ್ ಚೇಂಬರ್ ನಲ್ಲಿ ಸಿಡಿ ಲೇಡಿ’ ಸಿನಿಮಾ ಟೈಟಲ್​ ರಿಜಿಸ್ಟರ್ ಆಗಿದೆ.

ಖ್ಯಾತ ನಿರ್ಮಾಪಕ ಸಂದೇಶ್ ನಾಗರಾಜ್ ಬ್ಯಾನರ್ ಅಡಿಯಿಂದ ವಾಣಿಜ್ಯ ಮಂಡಳಿಯಲ್ಲಿ “ಸಿಡಿ ಲೇಡಿ” ಹೆಸರು ನೊಂದಣಿಯಾಗಿದೆ. ಆದರೆ ಈ ಸಿನಿಮಾ ಕಥೆ ಸಿಡಿ ಪ್ರಕರಣದ ಮೂಲದ್ದು ಹೌದೆ? ನಟ-ನಟಿಯರು ಯಾರು? ಯಾವಾಗ ತೆರೆಗೆ ಬರುತ್ತದೆ? ಈ ಎಲ್ಲಾ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಇನ್ನು ಈ ಸಿನಿಮಾದ ಕತೆಯ ಎಳೆಯನ್ನು ರಮೇಶ್ ಜಳಕಿಹೊಳಿ ಅವರ ರಾಸಲೀಲೆ ಪ್ರಕರಣವನ್ನೇ ಆಧಾರವಾಗಿಟ್ಟು ಹೆಣೆಲಾಗಿದೆಯೇ? ಈ ಪ್ರಕರಣ ಹೊರಬಿದ್ದಾಗಿನಿಂದ ಜರುಗಿದ ಘಟನೆಗಳನ್ನ ಚಿತ್ರದಲ್ಲಿ ಸೇರಿಸಿಕೊಳ್ಳಲಾಗುತ್ತದೆಯೇ? ಎಂಬ ಹತ್ತಾರು ಪ್ರಶ್ನೆಗಳಿಗೆ ಕಾಲವೇ ಉತ್ತರಿಸಬೇಕಿದೆ.

ಅಂದಹಾಗೆ ಸಮಾಜದಲ್ಲಿ ಯಾವುದೇ ಪ್ರಮುಖ ಪಲ್ಲಟಗಳು ನಡೆದಾಗಲೂ ಆ ಸನ್ನಿವೇಶಗಳನ್ನು ಆಧಾರವಾಗಿಟ್ಟುಕೊಂಡು ಸಿನಿಮಾ ಮಾಡುವುದಾಗಿ ಘೋಷಿಸುವುದನ್ನ ಚಿತ್ರರಂಗದವರು ಮೊದಲಿನಿಂದಲೂ ರೂಡಿಸಿಕೊಂಡೆ ಬರುತ್ತಿದ್ದಾರೆ. ಆದರೆ ಹಾಗೆ ಘೋಷಿಸಲ್ಪಟ್ಟ ಸಿನಿಮಾಗಳು ಪೂರ್ಣಗೊಂಡಿರುವುದು ತೀರಾ ಕಡಿಮೆ. ಈಗ ಜಾರಕಿಹೊಳಿ ರಾಸಲೀಲೆ ಪ್ರಕರಣದ ಬಗ್ಗೆ ಸಿನಿಮಾ ಮಾಡಲು ಮುಂದಾಗಿರುವುದು ಆಶ್ಚರ್ಯಕರವೇನಲ್ಲ, ಈ ಸಿನಿಮಾ ಪೋರ್ರ್ಣಗೊಳ್ಳುತ್ತದೆಯೋ? ಅಥವಾ ಅರ್ಧಕ್ಕೆ ನಿಲ್ಲುತ್ತದೆಯೋ ಎಂಬುದನ್ನು ಕಾದು ನೋಡೋಣ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top