fbpx
ಸಮಾಚಾರ

ಬಿಗ್ ಬಾಸ್ 8 : ಮೂರನೇ ವಾರ ಬಿಗ್ ಮನೆಯಿಂದ ಮತ್ತೊಬ್ಬ ಸೆಲೆಬ್ರಿಟಿ ಔಟ್

ಬಿಗ್​ ಬಾಸ್​ ಕನ್ನಡ ಸೀಸನ್​ 8ರ ಮೂರನೇ ವಾರದ ಎಲಿಮಿನೇಷನ್​ ಪ್ರಕ್ರಿಯೆ ನಡೆದಿದೆ. ಮೂಲಗಳ ಪ್ರಕಾರ ನಟಿ ಗೀತಾ ಭಾರತಿ ಭಟ್​ ಅವರು ಎಲಿಮಿನೇಟ್​ ಆಗಿದ್ದಾರೆ. ‘ಬ್ರಹ್ಮಗಂಟು’ ಧಾರಾವಾಹಿ ಮೂಲಕ ಫೇಮಸ್​ ಆಗಿದ್ದ ಗೀತಾ ಅವರು ಬಿಗ್​ ಬಾಸ್​ ಆಟ ಮುಂದುವರಿಸಲು ಸೋತಿದ್ದಾರೆ. ಡೊಡ್ಮನೆಯಲ್ಲಿ ಮೂರು ವಾರಗಳ ಕಾಲ ಅವರು ಪೈಪೋಟಿ ನೀಡಿದ್ದರು.

 

 

. ಈ ವಾರ ಗೀತಾ ಭಾರತಿ ಭಟ್ ಜೊತೆ ಶಮಂತ್ ಬ್ರೊ ಗೌಡ, ರಘು ಗೌಡ, ವಿಶ್ವನಾಥ್, ದಿವ್ಯಾ ಉರುಡುಗ ಡೇಂಜರ್ ಝೋನ್‌ನಲ್ಲಿದ್ದರು. ಅಂತಿಮವಾಗಿ ಗೀತಾ ಹೊರಬಿದ್ದಿದ್ದಾರೆ. ಗೀತಾ ಭಾರತಿ ಭಟ್ ಅವರ ವರ್ತನೆ ಮನೆಯ ಸದಸ್ಯರಿಗೆ ಅಷ್ಟಾಗಿ ಇಷ್ಟವಾಗುತ್ತಿರಲಿಲ್ಲ. ಆ ಕಾರಣಕ್ಕೆ ಅವರನ್ನು ನಾಮಿನೇಟ್ ಮಾಡಿದ್ದರು.

ಮನೆಯಿಂದ ಹೊರ ಬಂದ ಗೀತಾ ಸುದೀಪ್ ಜೊತೆ ವೇದಿಕೆ ಹಂಚಿಕೊಂಡರು. ಮನೆಯಲ್ಲಿರೋ ಎಲ್ಲರನ್ನ ತುಂಬಾನೇ ಪ್ರೀತಿಸುತ್ತೇನೆ. ಬಿಗ್‍ಬಾಸ್ ವಾಯ್ಸ್ ಮೇಲೆ ತುಂಬಾನೇ ಲವ್ ಆಗಿದೆ. ಮುಂದೆ ಹಾಡುತ್ತೇನೆ, ನಟಿಸುತ್ತೇನೆ ಜೊತೆಗೆ ಸಣ್ಣಗಾಗುತ್ತೇನೆ. ಮುಂದಿನ ವಾರ ಶಮಂತ್ ಮನೆಯಿಂದ ಹೊರ ಬರಬಹುದು ಎಂದು ಹೇಳಿದರು.

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ಒಟ್ಟು 17 ಜನರ ಪೈಕಿ ಗೀತಾ ಸೇರಿದಂತೆ ಮೂವರು ಮನೆಯಿಂದ ಹೊರ ಬಂದಿದ್ದಾರೆ. ಮೊದಲ ವಾರ ಟಿಕ್‍ಟಾಕ್ ಸ್ಟಾರ್ ಧನುಶ್ರೀ, ಎರಡನೇ ವಾರ ನಿರ್ಮಲಾ ಚೆನ್ನಪ್ಪ ಔಟ್ ಆಗಿದ್ದಾರೆ. ಮೂರನೇ ವಾರದ ಶನಿವಾರ ಗೀತಾ ಭಾರತಿ ಭಟ್ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top