fbpx
ಸಮಾಚಾರ

ಜಸ್ಪ್ರೀತ್ ಬುಮ್ರಾ ವಿರುದ್ಧ ಶೋಭಾ ಕರಂದ್ಲಾಜೆ ಆಕ್ರೋಶ: ಯಾರ್ಕರ್ ಕಿಂಗ್ ವಿರುದ್ಧ ಸಂಸದೆ ಕಿಡಿಕಾರಿದ್ದು ಯಾಕೆ?

ಟೀಂ ಇಂಡಿಯಾದ ಯುವ ವೇಗಿ ಜಸ್ ಪ್ರೀತ್ ಬುಮ್ರಾ ಮದುವೆ ವಿಚಾರವಾಗಿ ಇದೀಗ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಗರಂ ಆಗಿದ್ದಾರೆ. ಮಾಡೋದೆಲ್ಲಾ ಅನಾಚಾರ ಮನೆ ಮುಂದೆ ಬೃಂದಾವನ ಎಂದು ಟ್ವೀಟಿಸಿ ಲೇವಡಿ ಮಾಡಿದ್ದಾರೆ.

ಮಾರ್ಚ್ 15ರಂದು ಜಸ್ ಪ್ರೀತ್ ಬುಮ್ರಾ ಟಿವಿ ನಿರೂಪಕಿ ಸಂಜನಾ ಗಣೇಶನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇನ್ನು ಪತ್ನಿ ಸಂಜನಾ ಜೊತೆಗಿನ ಸಂಭ್ರಮದ ಫೋಟೋವನ್ನು ಬುಮ್ರಾ ಟ್ವೀಟ್ ಮಾಡಿದ್ದರು. “ಕಳೆದ ಕೆಲ ದಿನಗಳು ಅಕ್ಷರಶಃ ನನ್ನ ಪಾಲಿಗೆ ಅದ್ಭುತವಾಗಿತ್ತು. ನಮಗೆ ಸಿಕ್ಕಿರುವ ನಿಮ್ಮೆಲ್ಲರ ಶುಭ ಹಾರೈಕೆ ಮತ್ತು ಪ್ರೀತಿಯಿಂದ ಪುನೀತರಾಗಿದ್ದೇವೆ. ಧನ್ಯವಾದಗಳು.,” ಎಂದು ತಮ್ಮ ಸೋಷಿಯಲ್ ಮೀಡಿಯಾ ಗೋಡೆಯ ಮೇಲೆ ಬುಮ್ರಾ ಬರೆದುಕೊಂಡು ಎರಡು ಫೋಟೊಗಳನ್ನು ಹಂಚಿಕೊಂಡಿದ್ದರು.

 

 

ಈ ಫೋಟೋ ನೋಡಿದ ನೆಟ್ಟಿಗರು ಗರಂ ಆಗಿದ್ದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಎರಡು ಫೋಟೊಗಳಲ್ಲಿ ಒಂದು ಫೋಟೊದಲ್ಲಿ ಬುಮ್ರಾ ಮತ್ತು ಸಂಜನಾ ಹಿಂಬದಿ ನಿಂತಿರುವವರು ಪಟಾಕಿ ಸುಟ್ಟು ಸಂಭ್ರಮಿಸುತ್ತಿದ್ದಾರೆ. ಇದು ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಕೆರಳುವಂತೆ ಮಾಡಿದೆ. ನವ ವಿವಾಹಿತ ಬುಮ್ರಾ-ಸಂಜನಾ ಜೋಡಿಗೆ ಎಲ್ಲರೂ ಶುಭ ಹಾರೈಸುತ್ತಿರುವ ಸಂದರ್ಭದಲ್ಲಿ ಶೊಭಾ ಕರಂದ್ಲಾಜೆ ಟ್ವಿಟರ್‌ ಮೂಲಕ ಚಾಟಿ ಬೀಸಿದ್ದಾರೆ.

ಇದರ ಸ್ಕ್ರೀನ್ ಶಾಟ್ ಅನ್ನು ತಮ್ಮ ಟ್ವೀಟ್ ನಲ್ಲಿ ಹಾಕಿದ ಶೋಭಾ ಕರಂದ್ಲಾಜೆ, ”ದೀಪಾವಳಿ ಸಮಯದಲ್ಲಿ ಮಾತ್ರ #saynotocrackers! ನಮ್ಮ ಸೆಲೆಬ್ರಿಟಿಗಳು ಹಿಂದೂ ಹಬ್ಬಗಳಲ್ಲಿ ಮಾತ್ರ ಪರಿಸರ ಕಾರ್ಯಕರ್ತರಾಗಿ ಬದಲಾಗುತ್ತಾರೆ. ಆದರೆ ಅವರ ಸಂಭ್ರಮದ ಸಮಯದಲ್ಲಿ ಅವರ ಕ್ರಿಯಾಶೀಲತೆ ಮರೆಯಾಗುತ್ತದೆ. ಪ್ರೀತಿಯ ಜಸ್‌ಪ್ರೀತ್‌ ಬುಮ್ರಾ, ನೀವು ಬೋಧಿಸುವದನ್ನು ಅಭ್ಯಾಸ ಮಾಡಿ ಎಂದು ಕುಟುಕಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top