fbpx
ಸಮಾಚಾರ

“ಹೆಚ್ಚು ರೇಷನ್ ಬೇಕಂದ್ರೆ 20 ಮಕ್ಕಳನ್ನು ಹೆರಬೇಕಿತ್ತು” ಸಿಎಂ ತಿರಥ್ ಸಿಂಗ್ ರಾವತ್ ವಿವಾದಾತ್ಮಕ ಹೇಳಿಕೆ

ಹರಿದ ಜೀನ್ಸ್ ಧರಿಸಿದ ಮಹಿಳೆಯರು ಸಮಾಜಕ್ಕೆ ಯಾವ ಸಂದೇಶ ನೀಡುತ್ತಾರೆ ಎಂದು ಪ್ರಶ್ನಿಸಿ ಸುದ್ದಿಯಾಗಿದ್ದ ಉತ್ತರಾಖಂಡ ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್ ಈಗ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಲ್ಲಿದ್ದಾರೆ. ಭಾನುವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾವತ್ ಹೆಚ್ಚು ದಿನಸಿ ಬೆಕೇಂದರೇ ಹೆಚ್ಚು ಮಕ್ಕಳನ್ನು ಹೇರಬೇಕು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

“ರಾಜ್ಯದಲ್ಲಿ ಪ್ರತಿಯೊಂದು ಮನೆಗೆ 5 ಕೆಜಿ ಪಡಿತರವನ್ನು ನೀಡಲಾಗುತ್ತದೆ. ಒಂದು ಕುಟುಂಬದಲ್ಲಿ ಒಂದು ವೇಳೆ 10 ಜನರಿದ್ದರೆ 50 ಕೆಜಿ ಅಕ್ಕಿಯನ್ನು ನೀಡಲಾಗುತ್ತದೆ. 20 ಜನರಿದ್ದರೆ 1 ಕ್ವಿಂಟಾಲ್ ಪಡಿತರವನ್ನು ನೀಡಲಾಗುತ್ತದೆ. 20 ಜನರ ಕುಟುಂಬಕ್ಕೆ 100 ಕೆಜಿ ಪಡಿತರ ಸಿಕ್ಕಿದ್ದನ್ನು ನೋಡಿ, 10 ಕೆಜಿ ಪಡಿತರ ಪಡೆದ ಇಬ್ಬರು ಅಸೂಯೆ ಪಟ್ಟರು. ಏಕೆ, ನೀವು ಸಮಯವಿದ್ದಾಗ ಇಬ್ಬರಿಗೆ ಮಾತ್ರ ಜನ್ಮ ನೀಡಿದ್ದೇಕೆ, 20 ಜನರು ಏಕೆ ಆಗಲಿಲ್ಲ” ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.

ಎರಡು ಮಕ್ಕಳನ್ನು ಹೆತ್ತವರು ಹೆಚ್ಚು ರೇಷನ್ ಕೇಳುತ್ತಿದ್ದಾರೆ. 20 ಮಕ್ಕಳನ್ನು ಹೆತ್ತಿದ್ದರೆ ಸರ್ಕಾರ ಹೆಚ್ಚು ರೇಷನ್ ಕೊಡುತ್ತಿರಲಿಲ್ಲವೇ ಎಂದು ರಾವತ್ ಪ್ರಶ್ನಿಸಿದ್ದಾರೆ. ಆದರೆ ಮಕ್ಕಳ ಸಂಖ್ಯೆ ಕಡಿಮೆ ಇರುವ ಮನೆಗೆ ಕಡಿಮೆ ಪ್ರಮಾಣದ ರೇಷನ್ ಬರುತ್ತಿದೆ ಎಂಬ ಆರೋಪಕ್ಕೆ ಪ್ರತಿಯಾಗಿ, 20 ಮಕ್ಕಳನ್ನು ಹೆತ್ತು ಹೆಚ್ಚು ರೇಷನ್ ಪಡೆಯಿರಿ ಎಂದು ರಾವತ್ ಸಲಹೆ ನೀಡಿ ವಿವಾದ ಸೃಷ್ಟಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top