fbpx
ಸಮಾಚಾರ

ಮಾರ್ಚ್ 23: ಇಂದಿನ ಪಂಚಾಂಗ ಮತ್ತು ದಿನ ಭವಿಷ್ಯ

ಮಾರ್ಚ್ 23, 2021 ಮಂಗಳವಾರ
ವರ್ಷ : 1942 ಶಾರ್ವರಿ
ತಿಂಗಳು : ಫಾಲ್ಗುಣ, ಪಕ್ಷ : ಶುಕ್ಲಪಕ್ಷ

Panchangam
ತಿಥಿ : ನವಮೀ 10:06 am
ನಕ್ಷತ್ರ : ಪುನರ್ವಸು 10:45 pm
ಯೋಗ : ಶೋಭನ 12:38 pm
ಕರಣ : ಕುಲವ 10:06 am ತೈತುಲ 10:21 pm

Time to be Avoided
ರಾಹುಕಾಲ : 3:26 pm – 4:56 pm
ಯಮಗಂಡ : 9:25 am – 10:55 am
ದುರ್ಮುಹುರ್ತ : 8:49 am – 9:37 am, 11:14 pm – 12:01 am
ವಿಷ : 10:06 am – 11:47 am
ಗುಳಿಕ : 12:26 pm – 1:56 pm

Good Time to be Used
ಅಮೃತಕಾಲ : 8:13 pm – 9:54 pm
ಅಭಿಜಿತ್ : 12:02 pm – 12:50 pm

Other Data
ಸೂರ್ಯೋದಯ : 6:21 am
ಸುರ್ಯಾಸ್ತಮಯ : 6:30 pm
ರವಿರಾಶಿ : ಮೀನ
ಚಂದ್ರರಾಶಿ : ಮಿಥುನ upto 16:30

 

 

ಮೇಷ (Mesha)

 

ಇಂದು ಒಳ್ಳೆಯ ದಿನವನ್ನು ಕಳೆಯುವಿರಿ. ಕಲಾಕೌಶಲ್ಯದಲ್ಲಿ ಪ್ರಗತಿ ಹಾಗೂ ಮೆಚ್ಚುಗೆ. ಸ್ತ್ರೀಸೌಖ್ಯ, ಕೌಟುಂಬಿಕ ಜೀವನದಲ್ಲಿ ಉತ್ತಮ ಹೊಂದಾಣಿಕೆ. ಉದ್ಯೋಗದಲ್ಲಿ ಪ್ರಗತಿ. ಬೆಲೆಯುಳ್ಳ ವಸ್ತು, ಒಡವೆಗಳ ಪ್ರಾಪ್ತಿ. ಇಲ್ಲವೆ ಖರೀದಿ. ವಾಹನ ಸೌಖ್ಯವಿದೆ.

 

ವೃಷಭ (Vrushabha)

ಕಾರ್ಯಸ್ಥಳದಲ್ಲಿ ಎಚ್ಚರಿಕೆಯಿಂದ ಇರಿ. ಅತಿ ಖರ್ಚು, ಬಂಧು ಬಳಗದವರ ಭೇಟಿ. ಸ್ತ್ರೀಸೌಖ್ಯ, ಆದರೆ ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು. ನಿಮ್ಮ ನಿಷ್ಠೆಯ ಪ್ರಯತ್ನವು ಒಳ್ಳೆಯ ಫಲಿತಾಂಶ ನೀಡುವುದು.

 

ಮಿಥುನ (Mithuna)

ಹೊಸ ಸಂಬಂಧವು ಏರ್ಪಡಲಿದ್ದು, ಅದು ಪ್ರಮುಖ ಪ್ರಾಶಸ್ತ್ಯ ಪಡೆಯಲಿದೆ. ವೈವಾಹಿಕ ಜೀವನದಲ್ಲಿ ಸೌಖ್ಯ, ಕಲಾಕೌಶಲ್ಯದಲ್ಲಿ ಪ್ರಾಪ್ತಿ. ಸಂತತಿ ಸೌಖ್ಯ, ವಿದ್ಯೆಯಲ್ಲಿ ಯಶಸ್ಸು, ವ್ಯಾಪಾರ-ಉದ್ಯೋಗಗಳಲ್ಲಿ ಅನುಕೂಲತೆ, ವಾದ ಸ್ಪರ್ಧೆಯಲ್ಲಿ ಜಯ.

 

ಕರ್ಕ (Karka)

ಕೆಲಸದ ಒತ್ತಡ ಮತ್ತು ಹೊಸ ಜವಾಬ್ದಾರಿಗಳು ನಿಮಗೆ ತಲೆಬಿಸಿ ಉಂಟುಮಾಡುವ ಸಾಧ್ಯತೆ. ದ್ರವ್ಯ ಸಂಗ್ರಹ, ವಾಹನಪ್ರಾಪ್ತಿ. ಸ್ತ್ರೀಯರಿಂದ ಲಾಭ. ಕೌಟುಂಬಿಕ ಜೀವನದಲ್ಲಿ ಸಂಗಾತಿಯ ಸಕಾಲಿಕ ಎಚ್ಚರಿಕೆಯ ಮಾತುಗಳನ್ನು ಆಲಿಸುವಿರಿ.

 

ಸಿಂಹ (Simha)

ಭವಿಷ್ಯದ ಹೊಸ ಯೋಜನೆಗಳಿಗೆ ಇದು ಒಳ್ಳೆಯ ಸಮಯ. ಹಣಕಾಸು ವ್ಯವಹಾರಗಳಲ್ಲಿ ನಿಮ್ಮ ಪ್ರಯತ್ನಗಳು ಸಫಲವಾಗುತ್ತವೆ. ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸುವಿರಿ. ಬೆಲೆಬಾಳುವ ವಸ್ತುಗಳ ಪ್ರಾಪ್ತಿ. ಕೌಟುಂಬಿಕ ಸೌಖ್ಯ.

 

ಕನ್ಯಾರಾಶಿ (Kanya)

ಗಟ್ಟಿ ಮನೋಭಾವ ಬೆಳೆಸಿಕೊಳ್ಳಿ. ಮನರಂಜನೆಗಾಗಿ ಯೋಚಿಸುವ ಸಮಯ ಇದು. ಷೇರು ಬಜಾರಿನಲ್ಲಿ ಹಣ ಹೂಡಿಕೆಯಿಂದ ಭವಿಷ್ಯದಲ್ಲಿ ಲಾಭದಾಯಕವಾಗಿದೆ. ಗುಪ್ತ ಶತ್ರುಗಳಿಂದ ಎಚ್ಚರಿಕೆ ಸಂಗಾತಿಯೊಡನೆ ವಿರಸ ಬೇಡ.

 

ತುಲಾ (Tula)

ಒಳ್ಳೆಯ ಸುದ್ದಿಗಳು ಇಂದು ನಿಮಗೆ ಸಂತಸ ತರುತ್ತವೆ. ನಿಮ್ಮ ಉನ್ನತಾಧಿಕಾರಿಗಳಿಂದ ಬೆಂಬಲ ದೊರೆಯುವುದು. ಉದ್ಯೋಗದಲ್ಲಿ ಲಾಭ, ಅಲ್ಪ ಪ್ರವಾಸ. ಜನಾನುಕೂಲತೆಯಿಂದ ದ್ರವ್ಯಲಾಭ. ಹೊಸ ವಸ್ತುಗಳ ಖರೀದಿ.

 

ವೃಶ್ಚಿಕ (Vrushchika)

ನ್ಯಾಯಾಲಯದ ವ್ಯವಹಾರಗಳನ್ನು ಮುಂದೂಡುವುದು ಸೂಕ್ತ. ಹಣವ್ಯಯ ಅನಿವಾರ್ಯ. ದೇವತಾ ಆರಾಧನೆಯಿಂದ ಮನಸ್ಸಿಗೆ ನೆಮ್ಮದಿ. ಬೆಲೆಬಾಳುವ ವಸ್ತುಗಳನ್ನು ಕಳೆದುಕೊಳ್ಳುವ ಭೀತಿ. ಶತ್ರು ಪ್ರಾಬಲ್ಯ. ಹಣಕಾಸಿನ ಸ್ಥಿತಿ ಉತ್ತಮ.

 

ಧನು ರಾಶಿ (Dhanu)

ವಿದ್ಯುತ್ ಉಪಕರಣಗಳಿಂದ ದೂರವಿರಿ. ವಿದ್ಯೆಯಲ್ಲಿ ಯಶಸ್ಸು, ಪ್ರತಿಷ್ಠಿತ ಹಾಗೂ ಶ್ರೀಮಂತ ವರ್ಗದವರ ಭೇಟಿ. ನಂಬಿದವರೇ ಮೋಸ ಮಾಡುವ ಸಾಧ್ಯತೆ. ಹಣದ ವಿಚಾರದಲ್ಲಿ ಜಾಗ್ರತರಾಗಿರಬೇಕು. ಮಕ್ಕಳ ಪ್ರಗತಿ ಸಂತಸ ತರುವುದು.

 

ಮಕರ (Makara)

ಸ್ಥಿರಾಸ್ಥಿಗೆ ಸಂಬಂಧಪಟ್ಟಂತೆ ಸಹೋದರರ ಸಂಗಡ ಮನಸ್ತಾಪ. ದುರ್ಜನರ ಸಹವಾಸ, ಸ್ತ್ರೀಸುಖ, ಕೌಟುಂಬಿಕ ಜೀವನದಲ್ಲಿ ನೆಮ್ಮದಿ. ಅತಿಶಯ ಖರ್ಚು. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇರುವುದು ಒಳ್ಳೆಯದು.

 

ಕುಂಭರಾಶಿ (Kumbha)

ಪರೋಪಕಾರದ ಕೆಲಸಗಳಿಂದ ಕೀರ್ತಿ. ಕೈಕೊಂಡ ಕೆಲಸಗಳು ಅರ್ಧಕ್ಕೆ ನಿಲ್ಲುವ ಸಂಭವ. ಬಂಧುಬಳಗದವರಿಂದ ಸಹಾನುಭೂತಿ. ಕೌಟುಂಬಿಕ ಜೀವನ ಉತ್ತಮ. ಇತರರ ವ್ಯಾಜ್ಯದಲ್ಲಿ ಮಧ್ಯಸ್ಥಿಕೆ ವಹಿಸದಿರಿ.

 

ಮೀನರಾಶಿ (Meena)

ವ್ಯಾಪಾರ ವ್ಯವಹಾರದಲ್ಲಿ ಯಶಸ್ಸು, ಅನೇಕ ಪದಾರ್ಥಗಳನ್ನು ಕೊಳ್ಳುವಿಕೆ. ಸ್ತ್ರೀಸೌಖ್ಯ, ಕೌಟುಂಬಿಕ ಸೌಖ್ಯ, ಪ್ರಾಪಂಚಿಕವಾಗಿ ಮನ್ನಣೆ ಗಳಿಸುವಿರಿ. ಅಲ್ಪ ಪ್ರವಾಸ, ಧನಲಾಭ, ನೂತನ ಯೋಜನೆಗಳಿಂದ ಬದುಕಿಗೆ ಹೊಸ ಉತ್ತೇಜನ ದೊರೆಯುವುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top