fbpx
ಸಮಾಚಾರ

ಸಿ.ಟಿ.ರವಿ, ನಟ ಶಿವಣ್ಣ, ಲಲಿತಾ ನಾಯಕ್‌ಗೆ‌ ಕೊಲೆ ಬೆದರಿಕೆ: ಸ್ಫೋಟಕ ಮಾಹಿತಿ ಬಹಿರಂಗ

ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಹಾಗೂ ನನ್ನನ್ನೂ ಸೇರಿದಂತೆ ಪ್ರಮುಖರನ್ನು ಹತ್ಯೆ ಮಾಡುವ ಬೆದರಿಕೆ ಪತ್ರ ಬಂದಿದೆ ಎಂದು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಹೇಳಿದ್ದಾರೆ. ನೆನ್ನೆ ಬೆಂಗಳೂರಿನಲ್ಲಿ ಮಾಜಿ ಸಚಿವ ಎಚ್‌.ಎಂ. ರೇವಣ್ಣ ಅಭಿನಂದನಾ ಸಮಾರಂಭದಲ್ಲಿ ಈ ವಿಚಾರವನ್ನು ಸ್ವತಃ ಬಿ.ಟಿ ಲಲಿತಾ ನಾಯಕ್ ಅವರೇ ಬಹಿರಂಗ ಪಡಿಸಿದ್ದಾರೆ.

‘ಹಂತಕರು ಮೇ 1ಕ್ಕೆ ನನಗೆ ಮುಹೂರ್ತ ಇಟ್ಟಿದ್ದಾರಂತೆ. ಅದೇ ದಿನ ನಟ ಶಿವರಾಜ್‌ಕುಮಾರ್‌, ಪಬ್ಲಿಕ್‌ ಟಿವಿ ಸಂಪಾದಕ ಎಚ್‌.ಆರ್‌.ರಂಗನಾಥ್‌ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಹತ್ಯೆ ಮಾಡುತ್ತಾರಂತೆ. ಈ ಬಗ್ಗೆ ಕರೀಂ ಚಳ್ಳಕೆರೆ ಎಂಬ ವ್ಯಕ್ತಿ ನನಗೆ ಪತ್ರ ಬರೆದಿದ್ದಾರೆ. ಈ ವಿಷಯವನ್ನು ಪೊಲೀಸರ ಗಮನಕ್ಕೆ ತಂದಿದ್ದೇನೆ. ಅವರು ಭದ್ರತೆ ಒದಗಿಸಿದ್ದಾರೆ’ ಎಂದು ಲೇಖಕಿ ಬಿ.ಟಿ.ಲಲಿತಾ ನಾಯ್ಕ್‌ ಹೇಳಿದರು.

‘ಸಿ.ಟಿ.ರವಿ ಇಲ್ಲವೇ ನನ್ನನ್ನು ಕೊಲ್ಲಬೇಕು. ಇಬ್ಬರನ್ನೂ ಒಟ್ಟಿಗೆ ಕೊಲ್ತೀವಿ ಅಂತ ಬರೆದಿದ್ದಾರೆ. ಇದನ್ನು ನೋಡಿದಾಗ ಯಾರೊ ಹುಡುಗಾಟಿಕೆಗೆ ಇದನ್ನು ಬರೆದಿರಬಹುದು ಅಂತ ಅನಿಸುತ್ತಿದೆ. ಗೌರಿ ಲಂಕೇಶ್‌ ಹಾಗೂ ಎಂ.ಎಂ.ಕಲಬುರ್ಗಿ ಅವರನ್ನು ಹತ್ಯೆಗೈದ ವ್ಯಕ್ತಿಗಳಿಗೇ ಸುಫಾರಿ ಕೊಡಲಾಗಿದೆ.ಹಂತಕರು ಕೇರಳದ ಮಹಮ್ಮದ್‌ ರಸೂಲ್‌ ಹಾಗೂ ಹಾಸನದ ಮುಸ್ತಾಫ ಅಲಿಖಾನ್‌ರಿಂದ ಸುಫಾರಿ ಪಡೆದಿದ್ದಾರೆ. ಹೀಗಾಗಿ ನಾಲ್ಕು ಜನಕ್ಕೆ ಪೊಲೀಸರು ರಕ್ಷಣೆ ನೀಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ’ ಎಂದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top