fbpx
ಸಮಾಚಾರ

ಮಾರ್ಚ್ 22: ಇಂದಿನ ಪಂಚಾಂಗ ಮತ್ತು ದಿನ ಭವಿಷ್ಯ

ಮಾರ್ಚ್ 22, 2021 ಸೋಮವಾರ
ವರ್ಷ : 1942 ಶಾರ್ವರಿ
ತಿಂಗಳು : ಫಾಲ್ಗುಣ, ಪಕ್ಷ : ಶುಕ್ಲಪಕ್ಷ

Panchangam
ತಿಥಿ : ಅಷ್ಟಮೀ 8:59 am
ನಕ್ಷತ್ರ : ಆರುಧ್ರ 9:27 pm
ಯೋಗ : ಸೌಭಾಗ್ಯ 12:56 pm
ಕರಣ : ಬಾವ 8:59 am ಬಾಲವ 9:39 pm

Time to be Avoided
ರಾಹುಕಾಲ : 7:56 am – 9:26 am
ಯಮಗಂಡ : 10:56 am – 12:26 pm
ದುರ್ಮುಹುರ್ತ : 12:50 pm – 1:38 pm, 3:14 pm – 4:02 pm
ವಿಷ : Nil
ಗುಳಿಕ : 1:56 pm – 3:26 pm

Good Time to be Used
ಅಮೃತಕಾಲ : 10:36 am – 12:20 pm
ಅಭಿಜಿತ್ : 12:02 pm – 12:50 pm

Other Data
ಸೂರ್ಯೋದಯ : 6:22 am
ಸುರ್ಯಾಸ್ತಮಯ : 6:30 pm
ರವಿರಾಶಿ : ಮೀನ
ಚಂದ್ರರಾಶಿ : ಮಿಥುನ

 

 

ಮೇಷ (Mesha)

 

ನಯವಾದ ಮಾತುಗಳಿಂದಲೇ ನಿಮ್ಮ ಗೆಳೆಯರು ನಿಮ್ಮನ್ನು ವಂಚಿಸುವ ಸಾಧ್ಯತೆ ಇರುತ್ತದೆ. ಆದರೆ ದೈವಕೃಪೆ ಇರುವುದರಿಂದ ಈ ಬಗ್ಗೆ ನಿಮಗೆ ಮೊದಲೇ ಸುಳಿವು ದೊರೆಯುವುದು. ಆಂಜನೇಯ ಸ್ತೋತ್ರವನ್ನು ಪಠಿಸಿ.

ವೃಷಭ (Vrushabh)


ಚಂಚಲ ಸ್ವಭಾವವು ಕೆಲಸ ಕಾರ್ಯಗಳಲ್ಲಿ ಹಿನ್ನಡೆಯನ್ನುಂಟು ಮಾಡುವುದು. ಕೆಲ ಗ್ರಹಗಳು ನಿಮ್ಮಿಂದ ಅಪಶಬ್ದಗಳನ್ನು ನುಡಿಸಿ ಸಾರ್ವಜನಿಕವಾಗಿ ಅಪಮಾನಕ್ಕೆ ಒಳಗಾಗುವ ಸಂಭವವಿರುತ್ತದೆ. ಈಶ್ವರ ದೇವರನ್ನು ಪ್ರಾರ್ಥಿಸಿ.

ಮಿಥುನ (Mithuna)


ಕೌಟುಂಬಿಕ ಜೀವನದಲ್ಲಿ ಸುಖ, ಸಂತೋಷ, ನೆಮ್ಮದಿ ಕಂಡುಬರುವುದು. ಆದರೆ ನಿಮ್ಮವರೇ ಆದ ಹತ್ತಿರದ ಜನರು ನಿಮಗೆ ತಿಳಿಯದಂತೆ ಅಡ್ಡಗಾಲು ಹಾಕುವರು. ಅಂತಹವರ ಬಗ್ಗೆ ಜಾಗ್ರತೆಯಿಂದ ಇರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.

ಕರ್ಕ (Karka)


ನಿಮ್ಮಲ್ಲಿ ಅನೇಕ ರೀತಿಯ ಯೋಜನೆಗಳಿವೆ. ಅದಕ್ಕೆ ತಕ್ಕ ಬುದ್ಧಿಶಕ್ತಿಯು ಇದೆ. ಆದರೆ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ವಿಫಲರಾಗುವಿರಿ. ಆಂಜನೇಯ ಸ್ತೋತ್ರವನ್ನು ಪಠಿಸಿ. ಹಣಕಾಸಿನ ತೊಂದರೆ ಸ್ವಲ್ಪಮಟ್ಟಿಗೆ ಕಾಡುವುದು.

ಸಿಂಹ (Simha)


ಆರ್ಥಿಕ ದೃಢತೆ ನಿಮ್ಮಲ್ಲಿ ಧೈರ್ಯ ತುಂಬುವುದು. ವಾಹನ ಖರೀದಿ ಸದ್ಯಕ್ಕೆ ಬೇಡ. ಅತ್ಯವಸರದಲ್ಲಿ ಯಾವುದೇ ಕಾರ್ಯಗಳನ್ನು ಕೈಗೊಳ್ಳಬೇಡಿ. ಮಿತ್ರರು ಸಕಾಲದಲ್ಲಿ ಕೊಡುವ ಸಲಹೆಗಳನ್ನು ಅಲಕ್ಷಿಸಬೇಡಿ.

ಕನ್ಯಾರಾಶಿ (Kanya)


ಬರಹಗಾರರಿಗೆ ಉತ್ತಮ ಪ್ರೋತ್ಸಾಹ ಸಿಗಲಿದೆ. ಕೈಗೊಂಡ ನಿರ್ಧಾರಗಳು ಅಂತಿಮ ಘಟ್ಟ ತಲುಪಲಿವೆ. ಆರ್ಥಿಕ ಭದ್ರತೆ ಕಂಡುಕೊಳ್ಳಲು ತುಂಬಾ ಹೆಣಗಾಡುವಿರಿ. ಈ ವಿಷಯದಲ್ಲಿ ಯಶಸ್ಸು ನಿಧಾನವಾಗಿ ಸಿಗಲಿದೆ. ಸೋದರರಲ್ಲಿ ವಿಶ್ವಾಸ ವೃದ್ಧಿಸಲಿದೆ. ವ್ಯವಹಾರದ ಮಾತುಕತೆಯಲ್ಲಿ ಪಾರದರ್ಶಕವಾಗಿರಿ. ಸರ್ಕಾರಿ ನೌಕರರಿಗೆ ಕೊಂಚ ವಿಶ್ರಾಂತಿ ದೊರೆಯಲಿದೆ.

ತುಲಾ (Tula)


ಮಕ್ಕಳ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ನಿಮ್ಮ ಒಳ್ಳೆಯತನ ಅಥವಾ ಹೆಸರು ದುರುಪಯೋಗವಾಗದಂತೆ ನೋಡಿಕೊಳ್ಳಿ. ಅನವಶ್ಯಕ ಖರ್ಚುಗಳ ಮೇಲೆ ಹಿಡಿತ ಸಾಧಿಸಲು ಯತ್ನಿಸಿದರೆ ಒಳಿತು.

ವೃಶ್ಚಿಕ (Vrushchika)


ವ್ಯವಹಾರದಲ್ಲಿ ಹೊಸ ಪಾಲುದಾರರನ್ನು ಸೇರ್ಪಡೆ ಮಾಡಿಕೊಳ್ಳುವ ಮುನ್ನ ಆತನ ಪೂರ್ವಾಪರಗಳನ್ನು ತಿಳಿಯಿರಿ. ಸಮಯಕ್ಕೆ ಸರಿಯಾಗಿ ಸ್ನೇಹಿತರ ಸಹಾಯ ದೊರೆಯಲಿದೆ. ಸಮಾಜ ಸೇವೆ ಮಾಡಲು ಬಯಸುವಿರಿ. ಕೈಗೊಂಡ ಕೆಲಸಗಳು ಪೂರ್ಣಗೊಳ್ಳಲು ಶಿವವನ್ನು ಧ್ಯಾನಿಸಿ.

ಧನು ರಾಶಿ (Dhanu)


ಆರ್ಥಿಕ ಪರಿಸ್ಥಿತಿಯಲ್ಲಿ ಯಾವುದೇ ವ್ಯತ್ಯಯವಿಲ್ಲ. ನೀವೆಷ್ಟು ತಾಳ್ಮೆಯಿಂದ ಇರುವಿರೋ ಅಷ್ಟು ನಿಮಗೆ ಒಳ್ಳೆಯದೇ ಆಗುವುದು. ಆದಾಯದ ಮೂಲ ಹೆಚ್ಚಲಿದೆ. ಮನೆ ಕೊಳ್ಳುವ ವಿಚಾರ ಮುಂದುವರೆಸಬಹುದು. ರಿಯಲ್‌ ಎಸ್ಟೇಟ್‌ ವ್ಯವಹಾರ ಲಾಭದಾಯಕವಾಗಲಿದೆ.

ಮಕರ (Makara)


ಅನವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕುವುದು ಒಳ್ಳೆಯದು. ಗುರುವಿನ ಅನುಗ್ರಹ ಪಡೆದು ಗುರುವಿನ ಗುಲಾಮನಾಗುವುದು ಒಳ್ಳೆಯದು.ಹಣಕಾಸಿನ ವಿಚಾರದಲ್ಲಿ ಮೋಸ ಹೋಗುವ ಸಂಭವವಿದೆ. ಲೇವಾದೇವಿ ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ

ಕುಂಭರಾಶಿ (Kumbha)


ಅಂದುಕೊಂಡ ಕಾರ್ಯಗಳು ತ್ವರಿತಗತಿಯಲ್ಲಿ ಸಾಗುವವು. ನಿಮ್ಮ ಕನಸು ನನಸಾಗುವುದು.ವ್ಯಾಪಾರ ವ್ಯವಹಾರದಲ್ಲಿ ವಿಶೇಷ ಲಾಭ ಕಂಡುಬರುವುದು.  ಹಿರಿಯರಿಂದ ಮತ್ತು ಸ್ನೇಹಿತರಿಂದ ಬರಲಿರುವ ಯಾವುದೇ ಸಹಾಯ, ಸಹಕಾರಗಳನ್ನು ತಿರಸ್ಕರಿಸಬೇಡಿ. ಅನಿರೀಕ್ಷಿತ ಆರ್ಥಿಕ ಮುಗ್ಗಟ್ಟು ನಿಮ್ಮನ್ನು ಅಧೈರ್ಯಗೊಳಿಸೀತು.

ಮೀನರಾಶಿ (Meena)


ಜೀವನದ ವಿಧಾನವನ್ನು ಸ್ವಲ್ಪ ಬದಲಿಸಿಕೊಳ್ಳಬೇಕಾಗುವುದು, ವಿವಾಹಕ್ಕೆ ಅಡ್ಡಿ ಆತಂಕಗಳಿವೆ. ವೃತ್ತಿರಂಗದಲ್ಲಿ ಹಿತಶತ್ರುಗಳು ಕಂಡುಬರುತ್ತಾರೆ. ಮಾತೃ ಸುಖದ ಕೊರತೆ ಹಾಗೂ ಪಿತ್ತಜ್ವರಾದಿ ಬಾಧೆಗಳು ಕಾಣಿಸಲಿವೆ. ದೈವಾನುಗ್ರಹ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top