fbpx
ಸಮಾಚಾರ

“ಡಬ್ಬ ನನ್ ಮಕ್ಳ, ಡಬ್ಬ ಥರ ಮಾತಾಡ್ತೀರಾ” ನಟ ಆದಿತ್ಯ ಆಕ್ರೋಶ

ಕಳೆದ ಶುಕ್ರವಾರ ತೆರೆಕಂಡ ‘ಮುಂದುವರೆದ ಅಧ್ಯಾಯ’ ಸಿನಿಮಾದ ಬಗ್ಗೆ ಪ್ರೇಕ್ಷಕ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದರಲ್ಲೂ ಯೂಟ್ಯೂಬ್​ನಲ್ಲಿ ನಕಾರಾತ್ಮಕವಾಗಿ ವಿಮರ್ಶೆ ಮಾಡಲಾಗಿದೆ. ಈ ಬಗ್ಗೆ ನಟ ಆದಿತ್ಯ ಗರಂ ಆಗಿದ್ದು “ಒಂದಷ್ಟು ವಿಮರ್ಶಕರು ಯೂಟ್ಯೂಬ್​ನಲ್ಲಿ ಸಿನಿಮಾದ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡಿ ನಷ್ಟ ಉಂಟು ಮಾಡ್ತಿದ್ದಾರೆ” ಅಂತ ನಟ ಆದಿತ್ಯ ಧ್ವನಿ ಎತ್ತಿದ್ದಾರೆ.

 

 

ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿರುವ ಆದಿತ್ಯ ಯೂಟ್ಯೂಬ್ ವಿಮರ್ಶಕರ ವಿರುದ್ಧ ಕಿಡಿಕಾರಿದ್ದಾರೆ. ‘ಸಿನಿಮಾ ಬಗ್ಗೆ ನಿಮಗೇನ್ರೀ ಗೊತ್ತು? ಡೈರೆಕ್ಟರ್, ಆರ್ಟಿಸ್ಟ್ ಆಗಿ ದುಡಿದು ನೋಡಿ. ನಮ್ಮ ಕಷ್ಟ ಏನು ಅಂತ ಗೊತ್ತಾಗುತ್ತೇ? ಹಗಲು ರಾತ್ರಿ ಸಿನಿಮಾವನ್ನು ಕಷ್ಟಪಟ್ಟು ಮಾಡಿದ್ರೆ ಡಬ್ಬಾ ಥರಾ ಮಾತಾಡ್ತೀರಾ. ದುಡ್ಡು ಕೊಡದೇ ಇದ್ರೆ ಸಿನಿಮಾ ಬಗ್ಗೆ ಕೆಟ್ಟದಾಗಿ ಮಾತನಾಡ್ತೀರಿ. ದಯವಿಟ್ಟು ಕನ್ನಡ ಸಿನಿಮಾ ಬಗ್ಗೆ ಕೆಟ್ಟದಾಗಿ ವಿಮರ್ಶೆ ಮಾಡುವುದನ್ನು ನಿಲ್ಲಿಸಿ. ಇಲ್ಲದೇ ಹೋದರೆ ಅಭಿಮಾನಿಗಳು ಹುಡುಕ್ಕೊಂಡು ಬಂದು ಹೊಡೀತಾರೆ’ ಎಂದು ಆದಿತ್ಯ ಎಚ್ಚರಿಕೆ ನೀಡಿದ್ದಾರೆ.

 

 

ಆದಿತ್ಯ ದೂರು:
ಈ ಬಗ್ಗೆ ಆದಿತ್ಯ ಹಾಗೂ ‘ಮುಂದುವರೆದ ಅಧ್ಯಾಯ’ ಚಿತ್ರತಂಡ ಫಿಲ್ಮ್​​ ಚೇಂಬರ್​ಗೆ ದೂರು ನೀಡಿದ್ದಾರೆ. ಇಂದು(ಮಂಗಳವಾರ) ಬೆಳಗ್ಗೆ ಫಿಲ್ಮ್ ಚೇಂಬರ್​ಗೆ ಆಗಮಿಸಿದ ನಟ ಆದಿತ್ಯ, ನಿರ್ದೇಶಕ ಬಾಲು ಚಂದ್ರಶೇಖರ್ ಮತ್ತಿತರರು ‘ಮುಂದುವರಿದ ಅಧ್ಯಾಯ’ ಚಿತ್ರದ ಬಗ್ಗೆ ಇಲ್ಲಸಲ್ಲದ ರಿವ್ಯೂ ನೀಡಿ ಪ್ರೇಕ್ಷಕರಿಗೆ ಬ್ಯಾಡ್ ಒಪಿನೀಯನ್ ಕ್ರಿಯೇಟ್ ಮಾಡ್ತಿರೋ ಯೂಟ್ಯೂಬರ್ಸ್ ವಿರುದ್ಧ ದೂರು ನೀಡಿದರು.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆದಿತ್ಯ, ಯೂಟ್ಯೂಬ್ ನಲ್ಲಿ ಕೆಲವರು ಎಲ್ಲಾ ಸಿನಿಮಾಗಳ ಬಗ್ಗೆ ಕೆಟ್ಟದಾಗಿ ವಿಮರ್ಷೆ ನೀಡ್ತಿದ್ದಾರೆ. ಅವರ್ಯಾರು ರೆಪ್ಯೂಟೆಡ್ ಜರ್ನಲಿಸ್ಟ್ ಅಲ್ಲ. ಅವರಿಗೆ ವಿಮರ್ಶೆ ಕೊಡೋ ಹಕ್ಕು ಸಹ ಇಲ್ಲ. ಇದೊಂದು ಯೂಟ್ಯೂಬ್​ನಲ್ಲಿ ಮಾಫಿಯಾ ಆಗ್ಬಿಟ್ಟಿದೆ. ಹೀಗಾದ್ರೆ ನಿರ್ಮಾಪಕರ ಗತಿ ಏನು ಪ್ರಶ್ನಿಸಿದರು.

ಯೂಟ್ಯೂಬ್ ವಿಮರ್ಶೆ ಮಾಡೋದ್ರಿಂದ ಕನ್ನಡ‌ ಸಿನಿಮಾಗೆ ಸಮಸ್ಯೆ ಆಗಿದೆ. ನಮ್ಮ ಸಿನಿಮಾ‌ ಮಾತ್ರವಲ್ಲ ಸಾಕಷ್ಟು ಸಿನಿಮಾಗೆ ಹೀಗೆ ಆಗಿದೆ. ಸಿನಿಮಾ‌ ರಿಲೀಸ್​ಗೂ ಮುಂಚೆ ಕಾಲ್ ಮಾಡಿ ವಿಮರ್ಶೆ ಮಾಡ್ತಿವಿ ಗಿಫ್ಟ್ ಸಿಗುತ್ತಾ ಅಂತ ಕೇಳಿದ್ರು. ಆಗಲ್ಲ ಅಂದಿದ್ವಿ. ಈಗ ನೆಗೆಟಿವ್ ಮಾಡಿದ್ದಾರೆ. ಜೋಕರ್ ಮುಖ ಹಾಕೊಂಡು ವಿಮರ್ಶೆ ಮಾಡ್ತಾನೆ. ಅವನಿಗೆ ಮುಖ ತೋರಿಸೋ ಧೈರ್ಯ ಇಲ್ಲ. 5 ಜನ ಇದ್ದಾರೆ. ಅವರ ಡೀಟೈಲ್ಸ್ ಕೊಟ್ಟಿದ್ದೀವಿ ಎಂದರು ವಿವರಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top