fbpx
ಸಮಾಚಾರ

ಬಿಗ್​ಬಾಸ್​ ಸೀಸನ್ 08: ಈ ವಾರ ಮನೆಯಿಂದ ಹೊರಹೋಗಲು ಬರೋಬ್ಬರಿ 13 ಸದಸ್ಯರು ನಾಮಿನೇಟ್​

ಯಶಸ್ವಿ ಮೂರು ವಾರಗಳನ್ನು ಮುಗಿಸಿ ಮುನ್ನುಗ್ಗುತ್ತಿರುವ ಕನ್ನಡದ ಅತಿದೊಡ್ಡ ರಿಯಾಲಿಟಿ ಷೋ ಬಿಗ್ ಬಾಸ್ ನ 4ನೇ ವಾರದ ಚಟುವಟಿಕೆಗಳು ಆರಂಭಗೊಂಡಿವೆ. ಬಿಗ್ ಮನೆಗೆ ಎಂಟ್ರಿ ಕೊಟ್ಟಿದ್ದ ಹದಿನೇಳು ಜನರ ಪೈಕಿ ಈಗಾಗಲೇ ಮೂರು ಮಂದಿ ಸ್ಪರ್ಧಿಗಳು ಮನೆಯಿಂದ ಹೊರನಡೆದಿದ್ದು ಸದ್ಯ ಮನೆಯಲ್ಲಿ ಹದಿನಾಲ್ಕು ಜನರು ಉಳಿದುಕೊಂಡಿದ್ದಾರೆ.

 

 

ಆಟ ಬಿಗಿಯಾಗುತ್ತಿರುವ ಈ ಹಂತದಲ್ಲಿ ಮನೆಯಲ್ಲಿ ಉಳಿಯಬೇಕೆಂದರೆ ಪ್ರತಿ ಸದಸ್ಯ ಉತ್ತಮ ಆಟ ಆಡಲೇಬೇಕು. ಆದ ಕಾರಣ ಮನೆಯ ಕ್ಯಾಪ್ಟನ್ ಅರವಿಂದ್ ಹೊರತುಪಡಿಸಿ ಮನೆಯ ಎಲ್ಲ ಸದಸ್ಯರು ನಾಮಿನೇಟ್ ಆಗಿದ್ದೀರಿ ಎಂದು ಬಿಗ್ ಬಾಸ್ ಘೋಷಿಸಿದ್ದಾರೆ. ನಿಮ್ಮನ್ನು ನೀವು ಸಾಬೀತುಮಾಡಿಕೊಳ್ಳಲು ನಿಮಗಿದೊಂದು ಅವಕಾಶ ಎಂದು ಹೇಳಿದ್ದಾರೆ.

ಯಾರು ನಾಮಿನೇಟ್​ ಆಗುತ್ತಾರೆ ಎಂಬುದನ್ನು ಪ್ರತಿ ಸ್ಪರ್ಧಿಗಳ ಹೇಳಿಕೆ ಆಧಾರದ ಮೇಲೆ ಇಷ್ಟು ವಾರ ನಿರ್ಧರಿಸಲಾಗುತ್ತಿತ್ತು. ಆದರೆ ಈ ವಾರ ಬಿಗ್​ ಬಾಸ್​ ಅದಕ್ಕೆಲ್ಲ ಅವಕಾಶ ನೀಡಿಲ್ಲ. ಸದ್ಯ ಕ್ಯಾಪ್ಟನ್​ ಆಗಿರುವ ಅರವಿಂದ್​ ಕೆಪಿ ಅವರನ್ನು ಹೊರತುಪಡಿಸಿ ಮನೆಯಲ್ಲಿ ಇರುವ ಎಲ್ಲ 13 ಸರ್ಧಿಗಳನ್ನು ಬಿಗ್​ ಬಾಸ್​ ನೇರವಾಗಿ ನಾಮಿನೇಟ್​ ಮಾಡಿದ್ದಾರೆ. ಅದರಂತೆ ದಿವ್ಯಾ ಉರುಡುಗ, ಮಂಜು, ದಿವ್ಯಾ ಸುರೇಶ್​, ವಿಶ್ವನಾಥ್​, ಚಂದ್ರಕಲಾ, ರಘು, ಶಮಂತ್​, ಪ್ರಶಾಂತ್​ ಸಂಬರಗಿ, ಶಂಕರ್​ ಅಶ್ವತ್ಥ್​, ರಾಜೀವ್​, ವೈಷ್ಣವಿ, ಶುಭಾ ಪೂಂಜಾ ಹಾಗೂ ನಿಧಿ ಸುಬ್ಬಯ್ಯ ನಾಮಿನೇಟ್​ ಆಗಿದ್ದಾರೆ.

ಎಲ್ಲರೂ ನಾಮಿನೇಟ್​ ಆಗಿರುವುದರಿಂದ ತಮ್ಮ ಅಸ್ಥಿತ್ವಕ್ಕಾಗಿ ಹೋರಾಟ ನಡೆಸಬೇಕಾಗಿದೆ. ಹಾಗಾಗಿ ಈ ವಾರದ ಟಾಸ್ಕ್​ನಲ್ಲಿ ಎಲ್ಲರೂ ಮಾಡು ಇಲ್ಲವೆ ಮಡಿ ಎಂಬಂತೆ ಕಾದಾಡುವ ಸನ್ನಿವೇಶ ನಿರ್ಮಾಣ ಆಗಲಿದೆ. ಮನರಂಜನೆ ನೀಡುವಲ್ಲಿ ಹಿಂದೆ ಬಿದ್ದರೂ ಅಂಥ ಸ್ಪರ್ಧಿಗೆ ತೀವ್ರ ಹಿನ್ನಡೆ ಆಗಲಿದೆ. ಇನ್ನೂ ಆಟವನ್ನೇ ಶುರು ಮಾಡಿರದ ವೈಷ್ಣವಿ, ಶಮಂತ್​ ಮುಂತಾದವರಿಗೆ ಈ ವಾರ ಹೆಚ್ಚು ಚಾಲೆಂಜಿಂಗ್​ ಆಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top