fbpx
ಸಮಾಚಾರ

ಶಾಲೆಗೆ ಕರೆದೊಯ್ಯುತ್ತಿದ್ದ ಬಸ್​ ಡ್ರೈವರ್​​ ಭೇಟಿಯಾಗಿ ಸರ್​ಪ್ರೈಸ್​ ಗಿಫ್ಟ್ ಕೊಟ್ಟ ಡಿ ಬಾಸ್ ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾ ಬಿಡುಗಡೆಯಾಗಿ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ರಿಲೀಸ್ ಆದ ಮೊದಲ ವಾರದಲ್ಲೇ ಕೋಟ್ಯಾಂತರ ರೂಪಾಯಿ ಗಳಿಕೆ ಮಾಡಿರುವ ‘ರಾಬರ್ಟ್’ ಬಾಕ್ಸ್‌ಆಫೀಸ್‌ನಲ್ಲಿ ಅಕ್ಷರಶಃ ಧೂಳೆಬ್ಬಿಸುತ್ತಿದೆ. ‘ರಾಬರ್ಟ್’ ಗೆಲುವಿನ ಖುಷಿಯಲ್ಲಿರುವ ‘ದಾಸ’ ದರ್ಶನ್ ಓರ್ವ ಸ್ಪೆಷಲ್ ವ್ಯಕ್ತಿಯನ್ನು ಭೇಟಿ ಮಾಡಿದ್ದಾರೆ.

 

 

‘ರಿಯಲ್​ ಸಾರಥಿ ಜೊತೆ ಸಾರಥಿಯ ಭೇಟಿ. ನಾವು ಶಾಲೆಗೆ ಹೋಗುತ್ತಿದ್ದ ಕೆಎಸ್​ಆರ್​ಟಿಸಿ ಬಸ್​ನ ಡ್ರೈವರ್​ ಇವರು. ಇಂದು ಅವರ 80ನೇ ಹುಟ್ಟುಹಬ್ಬದ ಸಲುವಾಗಿ ಭೇಟಿಯಾಗಿ ವಿಶ್​ ಮಾಡಿದ್ದೇನೆ. ಅವರ ಆಶೀರ್ವಾದ ಪಡೆದುಕೊಂಡಿದ್ದೇನೆ’ ಎಂದು ಟ್ವಿಟರ್​ನಲ್ಲಿ ದರ್ಶನ್​ ಬರೆದುಕೊಂಡಿದ್ದಾರೆ. ಈ ಫೋಟೋಗಳನ್ನು ಅಭಿಮಾನಿಗಳು ಎಲ್ಲೆಡೆ ಶೇರ್​ ಮಾಡುತ್ತಿದ್ದಾರೆ.

ಬಾಲಕ ದರ್ಶನ್‌ರನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಚಾಲಕ 80ನೇ ವರ್ಷಕ್ಕೆ ಕಾಲಿಟ್ಟ ಸಂಭ್ರಮದಲ್ಲಿದ್ದರು. ಈ ಸಂಭ್ರಮವನ್ನು ದುಪ್ಪಟ್ಟು ಮಾಡಿದ್ದು ನಟ ದರ್ಶನ್. ಜನ್ಮದಿನದಂದು ‘ರಿಯಲ್ ಸಾರಥಿ’ಯನ್ನು ಭೇಟಿ ಮಾಡಿ, ಅವರಿಗೆ ಶುಭಾಶಯ ಕೋರಿ, ಅವರ ಆಶೀರ್ವಾದವನ್ನು ಪಡೆದಿದ್ದಾರೆ ನಟ ದರ್ಶನ್. ಈ ಬಗ್ಗೆ ದರ್ಶನ್ ಟ್ವೀಟ್ ಕೂಡ ಮಾಡಿದ್ದಾರೆ.

ಕನ್ನಡ ಚಿತ್ರರಂಗದ ಬಾಕ್ಸ್‌ಆಫೀಸ್‌ ಸುಲ್ತಾನ್‌ ದರ್ಶನ್. ದೊಡ್ಡ ಸ್ಟಾರ್ ಆಗಿದ್ದರೂ ದರ್ಶನ್ ತಮ್ಮ ಕಷ್ಟದ ದಿನಗಳನ್ನು ಮರೆತಿಲ್ಲ. ತಮ್ಮ ಜೀವನದ ಪ್ರತಿ ಹಂತದಲ್ಲೂ ತಮ್ಮ ಜೊತೆಗಿದ್ದವರನ್ನು ದರ್ಶನ್ ಆತ್ಮೀಯವಾಗಿ ನೋಡುತ್ತಾರೆ. ಇದಕ್ಕೆ ‘ರಿಯಲ್ ಸಾರಥಿ’ಯನ್ನು ಭೇಟಿಯಾಗಿದ್ದಕ್ಕಿಂತ ದೊಡ್ಡ ಉದಾಹರಣೆ ಬೇಕೇ? ನೀವೇ ಹೇಳಿ…

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top