fbpx
ಸಮಾಚಾರ

“ಈ ಸಲ RCBದೇ ಕಪ್” ಎಂದ ಮಂಜುಗೆ ಶಿಕ್ಷೆ ನೀಡಿದ ಬಿಗ್ ಬಾಸ್

ನೆನ್ನೆ ಬಿಗ್ ಬಾಸ್ ಮನೆಯಲ್ಲಿ ಸ್ಟೋರ್ ರೂಮ್ ನಿಂದ ಸಣ್ಣ ಕಪ್ ನೋಡಿ ಮನೆಯ ಸದಸ್ಯರು ಶಾಕ್ ಆಗಿದ್ದಾರೆ. ಕ್ಯಾಪ್ಟನ್ ಆರವಿಂದ್‌ ಈ ಕಪ್ ಏನಕ್ಕೆ ಎಂದು ಬಿಗ್ ಬಾಸ್ ಕೇಳಿದಾಗ, ಏನು ಹೇಳಬೇಕೆಂದು ಉತ್ತರ ತಿಳಿಯದ ಅರವಿಂದ್‌ ಕಂಗಾಲಾಗಿ ನಿಂತಿದ್ದರು. ಆ ನಂತರ ಮಂಜು ಅವರನ್ನು ಪ್ರಶ್ನಿಸಿದಾಗ, ‘ಈ ಸಲ ಕಪ್ ನಮ್ದೇ ಬಿಗ್ ಬಾಸ್. ಆರ್‌ಸಿಬಿ ಈ ಕಪ್ ಹೊಡೆಯಬಹುದು ಅಂತ ಮೊದಲು ಕೊಟ್ಟಿರಬಹುದು. ನಾನು ಆ ರೀತಿ ಅಂದು ಕೊಳ್ತೀನಿ ಅಥವಾ ಕ್ಯಾಪ್ಟನ್ ನನಗೆ ಕಾಫಿ ಕೊಡಲಿ ಅಂತ ಕೊಟ್ಟಿರಬಹುದು,’ ಎಂದು ಕಾಮಿಡಿ ಮಾಡುತ್ತಾರೆ.

 

 

ಇದಕ್ಕೆ ಉತ್ತರಿಸಿರುವ ಬಿಗ್​ ಬಾಸ್​, ನೀವು ಬಿಗ್​ ಬಾಸ್​ ಕಪ್​ ಮುರಿದು ಹಾಕಿದ್ದೀರಾ. ಹೀಗಾಗಿ, ಬಿಗ್​ ಬಾಸ್ ಮುಂದಿನ ಆದೇಶದವರೆಗೂ ನೀರು, ಟೀ-ಕಾಫಿ ಕುಡಿಯೋಕೆ ಇದೇ ಕಪ್ ಬಳಕೆ ಮಾಡಬೇಕು ಎಂದು ಬಿಗ್​ ಬಾಸ್​ ಆದೇಶಿಸಿದೆ. ಬಿಗ್​ ಬಾಸ್​ ನೀಡಿರೋ ಹೊಸಾ ಕಪ್​ ತುಂಬಾನೇ ಸಣ್ಣದಾಗಿದೆ. ಅದರಲ್ಲಿ ಬರೋದು ಒಂದು ಸಿಪ್​ ಮಾತ್ರ. ಇದನ್ನು ನೋಡಿ ಮಂಜು ಕಂಗಾಲಾಗಿದ್ದಾರೆ.

2ದಿನದ ಹಿಂದೆ ದಿವ್ಯ ಸುರೇಶ್ ಮತ್ತು ಮಂಜುಪಾವಗಡ ಮಾತನಾಡುತ್ತಾ ಕುಳಿತ್ತಿದ್ದರು. ಈ ವೇಳೆ ಮಂಜು ಅಲ್ಲಿಂದ ಎದ್ದು ಹೋಗುವ ವೇಳೆ ಕಾಫಿ ಕಪ್ ಕೆಳಗೆ ಬಿದ್ದು ಒಡೆದು ಹೋಗಿತ್ತು. ಇದನ್ನು ಮನೆಯವರಿಗೆ ತಿಳಿಯದಂತೆ ಮಂಜು ಕಸದ ಬುಟ್ಟಿಯಲ್ಲಿ ಅಡಗಿಸಿಟ್ಟಿದ್ದರು. ಕಪ್ ಒಡೆದಿರುವ ವಿಚಾರವಾಗಿ ಮಂಜು ಬಿಗ್‍ಬಾಸ್ ಬಳಿ ಕ್ಷಮೆಯನ್ನು ಕೇಳಿದ್ದರು. ಆದರೆ ಬಿಗ್‍ಬಾಸ್ ಪನಿಶ್ಮೆಂಟ್ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top