fbpx
ಸಮಾಚಾರ

“ನಾವೇನು ರೇಪ್ ಮಾಡಿದ್ದೀವಾ” ಸಚಿವ ಸುಧಾಕರ್ ಗರಂ

ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಸಿ.ಡಿ. ಪ್ರಕರಣ ಕೊನೆಗೂ ಸದನದಲ್ಲಿ ಪ್ರಸ್ತಾಪವಾಗಿದ್ದು, ಈ ಕುರಿತು ಕಾಂಗ್ರೆಸ್‌ ಮಂಡಿಸಿದ ನಿಲುವಳಿ ಸೂಚನೆಯಿಂದ ಸೋಮವಾರ ಸದನದಲ್ಲಿ ಕೋಲಾಹಲ ಉಂಟಾಯಿತು.

ಸಿ.ಡಿ. ಪ್ರಕರಣದ ಬಗ್ಗೆ ನಿಲುವಳಿ ಸೂಚನೆ ಮಂಡಿಸಿದ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ ಸದಸ್ಯರು, ಸಿ.ಡಿ. ಪ್ರಕರಣದ ತನಿಖೆಯಲ್ಲಿನ ವೈಫಲ್ಯಗಳನ್ನು ಎಳೆ-ಎಳೆಯಾಗಿ ಬಿಡಿಸಿಟ್ಟರು. ಯಾವುದೇ ಆರೋಪಗಳು ಕೇಳಿಬರದೇ ಇದ್ದರೂ ಕೋರ್ಟ್‍ಗೆ ಹೋದ ಆರು ಸಚಿವರ ತಲೆದಂಡ ಆಗಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದರು. ಇವರು ನಿರ್ದೋಷಿಗಳು ಎಂದು ಸಾಬೀತಾಗುವವರೆಗೂ ಅಧಿಕಾರದಲ್ಲಿ ಮುಂದುವರೆಯಲು ನೈತಿಕತೆ ಇಲ್ಲ. ಹೀಗಾಗಿ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಮಾಜಿ ಸ್ಪೀಕರ್ ರಮೇಶ್‍ಕುಮಾರ್ ಮಾತನಾಡಿ, ನಿಮಗೆ ಕೋರ್ಟ್‍ಗೆ ಹೋಗಲು ಸಲಹೆ ಕೊಟ್ಟಿದ್ಯಾರು? ಅವರು ಶುದ್ಧ ದಡ್ಡರು ಅಥವಾ ನಿಮ್ಮ ಏಳಿಗೆ ಸಹಿಸದವರು ಅಂತ ಕಿಚಾಯಿಸಿದರು. ಇದಕ್ಕೆ ಗರಂ ಆದ ಸೋಮಶೇಖರ್, ಇವ್ರೇನು ಸತ್ಯಹರಿಶ್ಚಂದ್ರರಾ ಎಂದು ವಾಗ್ದಾಳಿ ನಡೆಸಿದರು. ಸುಧಾಕರ್ ಸಿಟ್ಟಾಗಿ ನಾವೇನು ತಪ್ಪು ಮಾಡಿದ್ದೇವೆ? ರೇಪ್ ಮಾಡಿದ್ದೀವಾ ಎಂದು ಪ್ರಶ್ನಿಸಿ ಕಾಂಗ್ರೆಸ್‌ ಟೀಕೆಗೆ ತಿರುಗೇಟು ನೀಡಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top