fbpx
ಸಮಾಚಾರ

ಮತ್ತೊಮ್ಮೆ ಕನ್ನಡ ಹಾಡು ಹಾಡಿ ಕನ್ನಡಿಗರ ಮನಗೆದ್ದ ಬಾಲಿವುಡ್ ಸ್ಟಾರ್ ಗೋವಿಂದ: ಹರ್ಷಿಕಾ ಜೊತೆಗಿನ ವಿಡಿಯೋ ವೈರಲ್

ಬಾಲಿವುಡ್ ನ ಖ್ಯಾತ ನಟ ಗೋವಿಂದ ಇತ್ತೀಚಿಗೆ ಅಣ್ಣಾವ್ರ ಹಾಡು ಹಾಡುವ ಮೂಲಕ ಕನ್ನಡಾಭಿಮಾನಿಗಳ ಮನಗೆದ್ದಿದ್ದಾರೆ.ಇತ್ತೀಚೆಗೆ ಹರ್ಷಿಕಾ ಪೂಣಚ್ಚ ಅವರು ಗೋವಿಂದ ಅವರನ್ನು ಭೇಟಿಯಾಗಿದ್ದರಂತೆ. ಆಗ ಅವರ ಬಳಿ ಕನ್ನಡ ಸಿನಿಮಾದ ಹಾಡನ್ನು ಹಾಡುವಂತೆ ಮನವಿ ಮಾಡಿದ್ದಾರೆ. ಆಗ ಗೋವಿಂದ ಈ ಹಾಡನ್ನು ಹಾಡಿದ್ದಾರೆ. ಸದ್ಯ ಹರ್ಷಿಕಾ ಗೋವಿಂದ ಅವರ ಈ ಹಾಡಿನ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಅದನ್ನು ಕನ್ನಡಿಗರ ಮನ ಗೆಲ್ಲುತ್ತಿದೆ.

 

 

ಡಾ.ರಾಜ್ ಕುಮಾರ್ ನಟನೆಯ ಎರಡು ಕನಸು ಸಿನಿಮಾದ ಹಾಡು ಇದಾಗಿದ್ದು, ಕನ್ನಡಿಗರ ನೆಚ್ಚಿನ ಗೀತೆಗಳಲ್ಲಿ ಇದು ಒಂದಾಗಿದೆ. ಈ ಹಾಡು ಎಂದರೆ ಬಾಲಿವುಡ್ ನಟ ಗೋವಿಂದ ಅವರಿಗೂ ತುಂಬಾ ಇಷ್ಟ. ಗೋವಿಂದ ಹಾಡಿರುವ ಹಾಡನ್ನು ನಟಿ ಹರ್ಷಿಕಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಕನ್ನಡಿಗರಿಂದ ಸಿಕ್ಕಾಪಟ್ಟೆ ಲೈಕ್ಸ್ ಹರಿದುಬರುತ್ತಿದೆ.

ಅಂದಹಾಗೆ, ಗೋವಿಂದ ಈ ಹಾಡನ್ನು ಹೇಳಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೇ ಕಿರುತೆರೆಯ ‘ಡ್ಯಾನ್ಸ್​ ಇಂಡಿಯಾ ಡ್ಯಾನ್ಸ್​ ಸೂಪರ್​ ಮಾಮ್ಸ್​’ ಕಾರ್ಯಕ್ರಮದಲ್ಲಿ ಗೋವಿಂದ ಈ ಗೀತೆಯನ್ನು ಹೇಳುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರು. ಆ ರಿಯಾಲಿಟಿ ಶೋನಲ್ಲಿ ಕರ್ನಾಟಕದ ಸೌಮ್ಯಶ್ರೀ ಭಾಗವಹಿಸಿದ್ದರು. ಅವರನ್ನು ಖುಷಿ ಪಡಿಸುವ ಸಲುವಾಗಿ ಗೋವಿಂದ ಒಂದು ಕನ್ನಡ ಹಾಡನ್ನು ಗುನುಗಿದ್ದರು. ಆ ವಿಡಿಯೋ ಕೂಡ ಸಿಕ್ಕಾಪಟ್ಟೆ ವೈರಲ್​ ಆಗಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top