fbpx
ಸಮಾಚಾರ

ಸಚಿವ ಸುಧಾಕರ್​ ಕೊಟ್ಟ ‘ಒಬ್ಳೇ ಹೆಂಡ್ತಿ’ ಸವಾಲಿಗೆ HD ಕುಮಾರಸ್ವಾಮಿ ಏನು ಹೇಳಿದ್ರು ನೋಡಿ…

ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರ ವಿರುದ್ಧ ಹರಿಹಾಯುತ್ತಿರುವ ಕಾಂಗ್ರೆಸ್​- ಜೆಡಿಎಸ್​ ವಿರುದ್ಧ ಆರೋಗ್ಯ ಸಚಿವ ಡಾ. ಕೆ.ಸುಧಾಕರ್​ ಅವರು ನೀಡಿರುವ ಒಬ್ಳೇ ಹೆಂಡ್ತಿ ಸವಾಲ್​ ಇದೀಗ ಭಾರಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿಬಿಟ್ಟಿದೆ. ರೆ ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರು, ಈ ವಿಷಯವನ್ನು ಸದನದಲ್ಲಿ ಪ್ರಸ್ತಾಪ ಮಾಡುವ ಅವಶ್ಯಕತೆ ಏನಿತ್ತು, ರಾಜ್ಯದಲ್ಲಿ ಬೇಕಾದಷ್ಟು ಸಮಸ್ಯೆಗಳಿಗೆ, ಅವುಗಳ ಬಗ್ಗೆ ಚರ್ಚೆಯಾಗಲಿ ಎಂದಿದ್ದಾರೆ.

ಸಚಿವ ಸುಧಾಕರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “‘ಇಲ್ಲಿ ಯಾರು ಸತ್ಯಹರಿಶ್ಚಂದ್ರರು ಅಲ್ಲ, ನನ್ನ ಹೆಸರನ್ನು ಅವರು ಯಾಕೆ ತಂದ್ರು? ಜೀವನದಲ್ಲಿ ನಾನು ಒಂದು ಬಾರಿ ತಪ್ಪು ಮಾಡಿದ್ದೇನೆ. ಅದನ್ನು ನಾನು ಧೈರ್ಯವಾಗಿ ಹೇಳಿದ್ದೇನೆ, ಭೂಮಿ ಮೇಲೆ ಇರುವ ಪ್ರತಿಯೊಂದು ಜೀವಿಗಳಿಗೆ ಸಹಜವಾದ ಪ್ರಕ್ರಿಯೆ ಇರುತ್ತದೆ. ಈ ವಿಚಾರವನ್ನು ಸದನದಲ್ಲಿ ಮಾತನಾಡುವುದು ಸರಿಯಲ್ಲ ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದ್ರಲ್ಲಿ ಹರಿಶ್ಚಂದ್ರ ಯಾರು ಅನ್ನೋದು ಚರ್ಚೆ ಮಾಡಿದ್ರೆ, ಇಲ್ಲಿ ಇರೋ ಎಲ್ಲರ ಮನೆಯ ದೋಸೆಯೂ ತೂತೇ. ರಾಜ್ಯದ ಜನರ ಮೇಲೆ ಒಂದು ದೃಷ್ಟಿ ಇರಲಿ. ಎಲ್ಲಾರ ಮನೆ ದೋಸೆ ತೂತು. ನಾನು ಜೀವನದಲ್ಲಿ ಒಂದು ಸಾರಿ ತಪ್ಪು ಮಾಡಿದ್ದೇನೆ. ಅದನ್ನು ಸದನದಲ್ಲಿ ಒಪ್ಪಿಕೊಂಡಿದ್ದೇನೆ. ನನ್ನ ಬಗ್ಗೆ ಯಾಕೆ ಹೆಸರು ಪ್ರಸ್ತಾಪ ಮಾಡಿದ್ರು ಅಂತ ಗೊತ್ತಿಲ್ಲ ಎಂದು ಹೆಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top