fbpx
ಸಮಾಚಾರ

KGF Chapter 2 ಚಿತ್ರದ ಅಪ್​ಡೇಟ್​ಗಾಗಿ ಕಾದಿದ್ದ ಎಲ್ಲರಿಗೂ ಗುಡ್ ನ್ಯೂಸ್ ನೀಡಿದ ಯಶ್​-ಪ್ರಶಾಂತ್​ ನೀಲ್​!

ಇಡೀ ಭಾರತೀಯ ಚಿತ್ರರಂಗ ಕಾತರದಿಂದ ಕಾಯ್ತಿರೋ ಕನ್ನಡ ಸಿನಿಮಾ ಕೆಜಿಎಫ್ ಚಾಪ್ಟರ್​-2. ಜುಲೈ 16ಕ್ಕೆ ಕೆಜಿಎಫ್​ ರಿಲೀಸ್​ ಪಕ್ಕಾ ಆಗಿದೆ. ರಿಲೀಸ್​ ಡೇಟ್​ ಹತ್ತಿರವಾದಂತೆಲ್ಲಾ ಪೋಸ್ಟ್​ ಪ್ರೊಡಕ್ಷನ್​ ವರ್ಕ್ ಸ್ಪೀಡ್​ ಹೆಚ್ಚಿಸಿದ್ದಾರೆ ಪ್ರಶಾಂತ್​ ನೀಲ್. ಸದ್ಯ ರಾಕಿ ಭಾಯ್ ಪಾತ್ರಕ್ಕಾಗಿ ಯಶ್​ ಡಬ್ಬಿಂಗ್​ ಶುರು ಮಾಡಿದ್ದಾರೆ.

 

 

ರಾಕಿ ಭಾಯ್ ತನ್ನ ಪಾತ್ರಕ್ಕೆ ಡಬ್ ಮಾಡುವ ಕೆಲಸ ಶುರುವಾಗಿದ್ದು, ನಿರ್ದೇಶಕ ಪ್ರಶಾಂತ್ ನೀಲ್ ಫೋಟೋ ಹಂಚಿಕೊಂಡಿದ್ದಾರೆ. ಪ್ರಶಾಂತ್ ನೀಲ್ ಹೆಗಲ ಮೇಲೆ ಕೈ ಹಾಕಿ ನಿಂತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ, ‘ರಾಕಿ ಜೊತೆ ಡಬ್ಬಿಂಗ್ ಮಾಡುವುದು ಯಾವಾಗಲೂ ರಾಕಿಂಗ್’ ಎಂದು ಬರೆದುಕೊಂಡಿದ್ದಾರೆ.

ಕೆಜಿಎಫ್-2​ ಸಿನಿಮಾ 5 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಲೆವೆಲ್​ನಲ್ಲಿ ತೆರೆಗಪ್ಪಳಿಸೋಕೆ ಸಿದ್ಧವಾಗ್ತಿದೆ.​ ಫಸ್ಟ್​ ಚಾಪ್ಟರ್​ ಸಮಯದಲ್ಲಿ ಯಶ್​, ಬೇರೆ ಭಾಷೆಯಲ್ಲೂ ತಮ್ಮ ಪಾತ್ರಕ್ಕೆ ಡಬ್​ ಮಾಡಬೇಕು ಅಂತ ಅಭಿಮಾನಿಗಳು ಕೇಳಿಕೊಂಡಿದ್ರು. ಅವ್ರೇ ರಾಕಿ ಭಾಯ್​ ಪಾತ್ರಕ್ಕೆ ತೆಲುಗು, ತಮಿಳು, ಹಿಂದಿಯಲ್ಲಿ ಡಬ್​ ಮಾಡಿದ್ರೆ, ಆ ಮಜಾನೇ ಬೇರೆ ಅಂದಿದ್ರು. ಅಂದಹಾಗೆ ಯಶ್ ಕನ್ನಡಕ್ಕೆ ಮಾತ್ರ ಡಬ್ಬಿಂಗ್ ಮಾಡುತ್ತಾರಾ ಬೇರೆ ಭಾಷೆಗೂ ಯಶ್ ಅವರೇ ಡಬ್ ಮಾಡುತ್ತಾರಾ ಎನ್ನುವುದು ಕಾದು ನೋಡಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top