fbpx
ಸಮಾಚಾರ

ಮೊದಲ ಪಂದ್ಯದಲ್ಲೇ ಸಾರ್ವಕಾಲಿಕ ದಾಖಲೆ ಬರೆದ ಕನ್ನಡಿಗ ಪ್ರಸಿದ್ಧ್ ಕೃಷ್ಣ: ಕನ್ನಡಿಗನ ಅಬ್ಬರಕ್ಕೆ ಇಂಗ್ಲೆಂಡ್ ಧೂಳೀಪಟ

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಪರವಾಗಿ ಕಣಕ್ಕಿಳಿದ ಪ್ರಸಿದ್ಧ್ ಕೃಷ್ಣ ಮಿಂಚು ಹರಿಸಿದ್ದಾರೆ. ಇಂಗ್ಲೆಂಡ್‌ನ ನಾಲ್ಕು ವಿಕೆಟ್ ಪಡೆದ ಪ್ರಸಿದ್ಧ್ ಕೃಷ್ಣ ಪಂದ್ಯದ ಟಾಪ್ ವಿಕೆಟ್ ಟೇಕರ್ ಎನಿಸಿದ್ದಾರೆ. ಇಷ್ಟು ಮಾತ್ರವಲ್ಲ ಈ ಕನ್ನಡಿದ ಭಾರತದ ಪರವಾಗಿ ಚೊಚ್ಚಲ ಪಂದ್ಯದಲ್ಲಿ ಸಾರ್ವಕಾಲಿಕ ದಾಖಲೆಯನ್ನು ಬರೆದಿದ್ದಾರೆ.

ಪ್ರಸಿದ್ ಕೃಷ್ಮ ಅದ್ಭುತ ಬೌಲಿಂಗ್ ದಾಳಿಗೆ ಇಂಗ್ಲೆಂಡ್ ತತ್ತರಿಸಿತು. 4 ವಿಕೆಟ್ ಕಬಳಿಸಿದ ಕನ್ನಡಿಗ ಟೀಂ ಇಂಡಿಯಾಗೆ ಗೆಲುವಿಗೆ ಪ್ರಮುಖ ಕಾರಣರಾದರು. 8.1 ಓವರ್‌ ಎಸೆದ ಪ್ರಸಿದ್ಧ್ ಒಂದು ಮೇಡನ್ ಓವರ್ ಮಾಡಿದ್ದು 54 ರನ್‌ ನೀಡಿ 4 ವಿಕೆಟ್ ಕಿತ್ತಿದ್ದಾರೆ. ಇದು ಪದಾರ್ಪಣಾ ಪಂದ್ಯದಲಲ್ಇ ಭಾರತೀಯ ಭೌಲರ್ ಮಾಡಿದ ಅತ್ಯುತ್ಕೃಷ್ಟ ಬೌಲಿಂಗ್ ಸ್ಪೆಲ್ ಎನಿಸಿದೆ.

ಪ್ರಸಿದ್ಧ್‌ ಕೃಷ್ಣ ದಾಖಲೆ:
ಇಲ್ಲಿಯವರೆಗೆ ಭಾರತದ ತಂಡದಲ್ಲಿ ಪದಾರ್ಪಣೆಗೈದ ಪಂದ್ಯದಲ್ಲಿ ಯಾರೂ 4 ಮತ್ತು ಅದಕ್ಕಿಂತ ಹೆಚ್ಚಿನ ವಿಕೆಟ್‌ ಪಡೆದಿರಲಿಲ್ಲ. ಆದರೆ ಇಂದಿನ ಪಂದ್ಯದಲ್ಲಿ 4 ವಿಕೆಟ್‌ ಕೀಳುವ ಮೂಲಕ ಪ್ರಸಿದ್ಧ್‌ ಕೃಷ್ಣ ಭಾರತದ ಪರ ದಾಖಲೆ ನಿರ್ಮಿಸಿದ್ದಾರೆ.

ಪಂದ್ಯದ ಬಳಿಕ ಪ್ರತಿಕ್ರಿಯಿಸಿದ ಪ್ರಸಿಧ್‌ ಕೃಷ್ಣ, “ನನ್ನ ಆರಂಭ ಉತ್ತಮವಾಗಿರಲಿಲ್ಲ ಹಾಗೂ ಇಂಗ್ಲೆಂಡ್‌ ಎದುರು ದುಬಾರಿಯಾಗಿದ್ದೆ. ಆದರೆ, ಎರಡನೇ ಸ್ಪೆಲ್‌ನಲ್ಲಿ ಎರಡು ತ್ವರಿತ ವಿಕೆಟ್‌ಗಳನ್ನು ಪಡೆದುಕೊಂಡೆ. ಮೂರನೇ ಓವರ್‌ ಬಳಿಕ ನಾನು ಫುಲ್‌ ಹಾಗೂ ಗುಡ್‌ ಲೆನ್ತ್ ಹಾಕಲು ಸಾಧ್ಯವಾಗಿರಲಿಲ್ಲ. ಬೌಲಿಂಗ್‌ ವಿಭಾಗ ಇಂದು(ಮಂಗಳವಾರ) ಅಸಾಧಾರಣ ಪ್ರದರ್ಶನ ತೋರಿದೆ. ನನ್ನನ್ನು ಹಿಟ್-ದಿ-ಡೆಕ್ ಬೌಲರ್ ಎಂದು ಕರೆಯಲು ಬಯಸುತ್ತೇನೆ, ನಾನು ಅದರಲ್ಲಿ ಉತ್ತಮ ಎಂದು ಭಾವಿಸುತ್ತೇನೆ. ತರಬೇತಿಗೆ ಮರಳಿ ಲೆನ್ತ್‌ ಮೇಲೆ ಇನ್ನಷ್ಟು ಕೆಲಸ ಮಾಡಿ ಬರುತ್ತೇನೆ,” ಎಂದು ಹೇಳಿದರು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top