fbpx
ಸಮಾಚಾರ

‘ಕೆಂಪೇಗೌಡ’, ‘ವರದನಾಯಕ’ ಸಿನಿಮಾಗಳ ನಿರ್ಮಾಪಕ ಅರೆಸ್ಟ್

‘ಜಸ್ಟ್ ಮಾತ್ ಮಾತಲ್ಲಿ’ ಕೆಂಪೇಗೌಡ’ ‘ವರದನಾಯಕ’ ‘ಕೆಂಪೇಗೌಡ 2’ ಸಿನಿಮಾಗಳನ್ನ ನಿರ್ಮಾಣ ಮಾಡಿದ್ದ ನಿರ್ಮಾಪಕ ಶಂಕರೇಗೌಡ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಭಂದಿಸಿದಂತೆ ಶಂಕರೇ ಗೌಡ ಅವರನ್ನು ಅರೆಸ್ಟ್ ಮಾಡಲಾಗಿದೆ ಎಂದು ಹೇಳಲಾಗಿದೆ.

ಡ್ರಗ್​ ಕೇಸ್​ನಲ್ಲಿ ಕೆಲವೊಂದು ಸಾಕ್ಷಿ ಕಲೆ ಹಾಕಿದ ಪೊಲೀಸರು ಶಂಕರೇಗೌಡ ವಿರುದ್ಧ ಸೆಕ್ಷನ್ 25,27ಎ, 29 ಎನ್​ಡಿಪಿಎಸ್​ ಆ್ಯಕ್ಟ್​ನಡಿ ಕೇಸ್ ದಾಖಲಿಸಿದ್ದಾರೆ ಎನ್ನಲಾಗಿದೆ. ಸದ್ಯ ಶಂಕರೇಗೌಡ ಅರೆಸ್ಟ್ ಆಗಿದ್ದಾರೆ. ಇತ್ತೀಚೆಗೆ ಶಂಕರೇಗೌಡ ಅವರ ಕಚೇರಿ ಮೇಲೆ ಗೋವಿಂದಪುರ ಪೊಲೀಸರು ದಾಳಿ ನಡೆಸಿ ಹುಡುಕಾಟ ನಡೆಸಿದ್ದರು.

ಶಂಕರೇಗೌಡ ಅವರ ಸಂಜಯ್​ನಗರದ ಆರ್​ಎಂವಿ ಕ್ಲಬ್ ಎದುರಿಗಿರುವ ಕಚೇರಿ ಮೇಲೆ ದಾಳಿ ನಡೆಸಲಾಗಿತ್ತು. ಸ್ಯಾಂಡಲ್​ವುಡ್ ಡ್ರಗ್ಸ್ ಲಿಂಕ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಲಾಗಿತ್ತು. ನಾಲ್ಕು ಅಂತಸ್ತಿನ ಕಟ್ಟಡದ ಮೇಲೆ ಪೊಲೀಸರು ಸರ್ಚ್ ವಾರೆಂಟ್ ಪಡೆದು ದಾಳಿ ನಡೆಸಿ ಶಂಕರೇಗೌಡರಿಗೆ ಸೇರಿದ ಕಾರುಗಳು ಹಾಗೂ ಕಚೇರಿಯನ್ನ ಅಧಿಕಾರಿಗಳು ತಪಾಸಣೆ ನಡೆಸಿದ್ದರು..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top