fbpx
ಸಮಾಚಾರ

ಖ್ಯಾತ ನಟಿ ಪ್ರಯಾಣಿಸುತ್ತಿದ್ದ ಬಸ್​ ಆ್ಯಕ್ಸಿಡೆಂಟ್: ಕೂದಲೆಳೆಯಲ್ಲಿ ಭಾರೀ ಅವಘಡದಿಂದ ಪಾರಾದ ನಟಿ

ಮಂಗಳೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ಒಂದು ಅಪಘಾತಕ್ಕೆ ತುತ್ತಾಗಿದ್ದು ತುಳು ನಟಿ ನೀಮಾ ರೇ ಭಾರೀ ಅವಘಡದಿಂದ ಪಾರಾಗಿದ್ದಾರೆ. ನಿನ್ನೆ ಮಧ್ಯರಾತ್ರಿ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75 ನೆಲ್ಯಾಡಿ ಬಳಿ ಶ್ರೀದುರ್ಗಾ ಬಸ್ ಹಾಗೂ ಟ್ಯಾಂಕರ್​​​ ನಡೆವೆ ಈ ಅಪಘಾತ ನಡೆದಿದೆ.

 

 

ನೆನ್ನೆ ರಾತ್ರಿ 11:50ರ ಸಮಯದಲ್ಲಿ ಬೆಂಗಳೂರಿನತ್ತ ಸಾಗುತ್ತಿದ್ದ ಶ್ರೀದುರ್ಗಾ ಬಸ್‌ಗೆ ವೇಗವಾಗಿ ಬಂದ ಕ್ಯಾಂಟರ್ ಗೆ ಡಿಕ್ಕಿ ಹೊಡೆದಿದೆ. ಅಪಘಾತದ ಆವೇಗಕ್ಕೆ ಶ್ರೀ ದುರ್ಗಾ ಬಸ್ ಬೆಂಕಿ ಹೊತ್ತಿಕೊಂಡು ಉರಿದಿದ್ದು ಕ್ಯಾಂಟರ್ ಚಾಲನ ಸಜೀವ ದಹನವಾಗಿದ್ದಾರೆ.. ಇನ್ನು ಬಸ್ ಚಾಲಕನಿಗೆ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ.

ಇತ್ತೀಚಿಗಷ್ಟೆ ರಾಷ್ಟ್ರ ಪ್ರಶಸ್ತಿ ಪಡೆದ ‘ಪಿಂಗಾರ’ ಸಿನಿಮಾದಲ್ಲಿ ನಟಿಸಿದ್ದ ನೀಮಾ ರೇ ಕೂಡ ಈ ಬಸ್ ನಲ್ಲಿ ಪ್ರಯಾಣಿಸಿದ್ದು ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತ ಬಳಿಕ ಬಸ್​ನಲ್ಲಿ ಹೊಗೆ ತುಂಬಿಕೊಂಡು ನಟಿ ಸೇರಿ 20ಕ್ಕೂ ಹೆಚ್ಚು ಮಂದಿ ಗಾಬರಿಯಾಗಿದ್ದು ಕೂಡಲೇ ಕಷ್ಟಪಟ್ಟು ಬಸ್​ ಡೋರ್​​ ತಗೆದು ಪ್ರಯಾಣಿಕರು ಹೊರ ಬಂದಿದ್ದಾರೆ ಹಾಗೂ ಪ್ರಯಾಣಿಕರಿಗೆ ಬೆಂಗಳೂರಿಗೆ ಬರಲು ಬೇರೊಂದು ಬಸ್​ನ ವ್ಯವಸ್ಥೆ ಮಾಡಲಾಗಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top