fbpx
ಸಮಾಚಾರ

ಮತ್ತೆ ಸ್ಯಾಂಡಲ್​ವುಡ್​ಗೆ ಸನ್ನಿ ಲಿಯೋನ್

ಈ ಹಿಂದೆ ‘ಲವ್​ ಯು ಆಲಿಯಾ’ ಹಾಗೂ ‘ಡಿ.ಕೆ’ ಸಿನಿಮಾಗಳ ಐಟಂ ಹಾಡಿನಲ್ಲಿ ಕಾಣಿಸಿಕೊಂಡಿದ್ದ ಸನ್ನಿ ಲಿಯೋನ್​ ಇದೀಗ ಮತ್ತೊಂದು ಡ್ಯಾನ್ಸಿಂಗ್​ ನಂಬರ್​ಗೆ ಸ್ಯಾಂಡಲ್​ವುಡ್​ಗೆ ಬಂದಿದ್ದಾರೆ. ಕನ್ನಡದ ಮತ್ತೊಂದು ಐಟಂ ಸಾಂಗ್​ನಲ್ಲಿ ಹೆಜ್ಜೆ ಹಾಕ್ತಿದ್ದಾರೆ ಸನ್ನಿ. ಹೌದು.. ನಟಿ ಅದಿತಿ ಪ್ರಭುದೇವ ನಟಿಸ್ತಿರೋ ‘ಚಾಂಪಿಯನ್’ ಸಿನಿಮಾದಲ್ಲಿ ಸನ್ನಿ ಲಿಯೋನ್​ ಐಟಂ ಸಾಂಗ್​ವೊಂದಕ್ಕೆ ಹೆಜ್ಜೆ ಹಾಕ್ತಿದ್ದಾರೆ.

ಅದಿತಿ ಪ್ರಭುದೇವ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ‘ಚಾಂಪಿಯನ್’ ಹೆಸರಿನ ಸಿನಿಮಾದಲ್ಲಿ ಸನ್ನಿ ಲಿಯೋನ್ ವಿಶೇಷ ಹಾಡಿನಲ್ಲಿ ಕುಣಿದಿದ್ದಾರೆ. ‘ಚಾಂಪಿಯನ್’ ಸಿನಿಮಾದ ಹಾಡಿನ ಸೆಟ್‌ನಲ್ಲಿ ಸನ್ನಿ ಲಿಯೋನ್ ಸ್ಟೆಪ್ ಹಾಕಿರುವ ಕೆಲವು ಚಿತ್ರಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಈ ಚಿತ್ರ ಕ್ರೀಡೆಯ ಸುತ್ತ ಹೆಣೆದಿರುವ ಚಿತ್ರ. ಈ ಹಾಡಿನಲ್ಲಿ ಬರುವ ಐಟಂ ಸಾಂಗ್​ನಲ್ಲಿ ಸನ್ನಿ ಲಿಯೋನ್​ ಸಖತ್​ ಆಗಿ ಹೆಜ್ಜೆ ಹಾಕುತ್ತಿದ್ದಾರೆ. ಸಿನಿಮಾದ ಶೂಟಿಂಗ್​ ಈಗಾಗಲೇ ಬಹುತೇಕ ಪೂರ್ಣಗೊಂಡಿದೆ ಎನ್ನಲಾಗಿದೆ. ಸಚಿನ್​ ಧನಪಾಲ್​ ಚಿತ್ರದ ನಾಯಕ. ಅದಿತಿ ಪ್ರಭುದೇವ ಚಿತ್ರದ ನಾಯಕಿ. ಈ ಸಿನಿಮಾ ಇದೇ ವರ್ಷ ತೆರೆಗೆ ಬರುವ ನಿರೀಕ್ಷೆ ಇದೆ. ಸದ್ಯ, ಈ ಸಿನಿಮಾ ಬಹಳಷ್ಟು ನಿರೀಕ್ಷೆ ಮೂಡಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top