fbpx
ಸಮಾಚಾರ

ಆಟೋದಲ್ಲಿ ಹಾಸ್ಯನಟನ ಮೃತದೇಹ ಪತ್ತೆ: ಅನುಮಾನ ಹುಟ್ಟುಹಾಕಿದ ನಿಗೂಢ ಸಾವು

ತಮಿಳಿನ ಸೂಪರ್​ ಹಿಟ್​ ‘ಕಾದಲ್​’ ಸಿನಿಮಾದಲ್ಲಿ ನಟನೆ ಮಾಡಿದ್ದ ವಿ. ಬಾಬು ಅವರ ಮೃತದೇಹ ಆಟೋರಿಕ್ಷಾದಲ್ಲಿ ಪತ್ತೆ ಆಗಿದೆ. ಚೆನ್ನೈನಲ್ಲಿ ಅವರು ನಿಧನರಾಗಿದ್ದು ಮಾ.23ರ ರಾತ್ರಿಯೇ ಅವರು ಕೊನೆಯುರೆಳೆದಿದ್ದಾರೆ ಎಂದು ಖಾಸಗಿ ಸುದ್ದಿ ವಾಹಿನಿಯೊಂದು ವರದಿ ಮಾಡಿದೆ. ನಟ ಬಾಬು ಸಾವಿಗೆ ಅಸಲಿ ಕಾರಣ ಏನು ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ.

ಬಾಬು ಅವ್ರು ಬಲಹ ಕಾಲದಿಂದ ಮಾನಸಿಕವಾಗಿ ಬಹಳ ನೊಂದಿದ್ದರು ಎಂದು ಹೇಳಲಾಗಿದೆ. ಕಳೆದ ಕೆಲವು ವರ್ಷಗಳ ಹಿಂದೆ ತಮ್ಮ ಪೋಷಕರನ್ನು ಕಳೆದುಕೊಂಡಿದ್ದ ಬಾಬು ಮಾನಸಿಕವಾಗಿ ನೊಂದಿದ್ದರು ಎಂದು ಹೇಳಲಾಗಿದೆ. ಚಿತ್ರರಂಗದಲ್ಲಿ ಅವಕಾಶ ಸಿಗದೇ ಹಾಗೆಯೆ ಬೇರೆಕಡೆ ಸರಿಯಾದ ಉದ್ಯೋಗವೂ ಇಲ್ಲದೇ ಆಟೋರಿಕ್ಷಾದಲ್ಲಿ, ದೇವಸ್ಥಾನಗಳಲ್ಲಿ ಮಲಗುತ್ತಿದ್ದರು.

ತಂದೆ-ತಾಯಿ ನಿಧನದ ನಂತರ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದರು ಎಂದೆಲ್ಲ ವರದಿ ಆಗಿತ್ತು. ಕಾದಲ್​ ಸಿನಿಮಾ ಬಳಿಕ ಬಾಬು ಅವರಿಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಅದರಿಂದ ಅವರು ಆರ್ಥಿಕವಾಗಿ ತೊಂದರೆಗೆ ಸಿಲುಕಿದರು. ಅವರು ದೇವಸ್ಥಾನದಲ್ಲಿ ಕಾಣಿಸಿಕೊಂಡ ವಿಡಿಯೋ ಕೂಡ ಈ ಹಿಂದೆ ವೈರಲ್​ ಆಗಿತ್ತು. ಈಗ ಅವರು ಅನುಮಾನಾಸ್ಪದವಾಗಿ ನಿಧನರಾಗಿರುವುದು ಇಡೀ ಚಿತ್ರರಂಗಕ್ಕೆ ಶಾಕ್​ ನೀಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top