fbpx
ಸಮಾಚಾರ

ಕೆಜಿಎಫ್ ಚಿತ್ರಕ್ಕಾಗಿ ಡಾ.ರಾಜ್ ಟೆಕ್ನೀಕ್ ಅನುಸರಿಸಿದ ರಾಕಿಂಗ್​ ಸ್ಟಾರ್​ ಯಶ್

ಇಡೀ ಭಾರತೀಯ ಚಿತ್ರರಂಗವೇ ಕೆಜಿಎಫ್‌ ಚಾಪ್ಟರ್ 2 ಸಿನಿಮಾ ವೀಕ್ಷಿಸಲು ಕಾತುರದಿಂದ ಕಾಯುತ್ತಿದೆ. ಚಿತ್ರದ ಎಲ್ಲಾ ಕೆಲಸಗಳು ಸರಾಗವಾಗಿ ಸಾಗುತ್ತಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಆರಂಭವಾಗಿವೆ. ನಟ ಯಶ್ ಡಬ್ಬಿಂಗ್ ಶುರು ಮಾಡಿದ್ದಾರೆ, ಈ ಬಗ್ಗೆ ನಿರ್ದೇಶಕ ಪ್ರಶಾಂತ್ ನೀಲ್‌ ಟ್ಟೀಟ್ ಮಾಡಿದ್ದಾರೆ. ‘ರಾಕಿ ಜೊತೆ ಡಬ್ಬಿಂಗ್ ಸಖತ್ ರಾಕಿಂಗ್ ಆಗಿರುತ್ತದೆ,’ ಎಂಬುದಾಗಿ ಪ್ರಶಾಂತ್ ಟ್ಟೀಟ್ ಮಾಡಿದ್ದಾರೆ.

ಯಶ್ ಡಬ್ಬಿಂಗ್ ವಿಧಾನದಲ್ಲಿ ಡಾ ರಾಜ್ ಕುಮಾರ್ ಅವರನ್ನು ಅನುಸರಿಸುತ್ತಿದ್ದಾರೆ ಎಂಬ ಅಂಶ ಗಮನ ಸೆಳೆಯುತ್ತಿದೆ. ಹೌದು, ರಾಕಿ ಭಾಯ್ ಪಾತ್ರಕ್ಕಾಗಿ ಡಬ್ಬಿಂಗ್ ಆರಂಭಿಸಿರುವ ಯಶ್ ಸಮಯದ ವಿಚಾರದಲ್ಲಿ ಡಾ ರಾಜ್ ಅವರನ್ನು ಫಾಲೋ ಮಾಡ್ತಿದ್ದಾರೆ. ಯಶ್ ಡಬ್ಬಿಂಗ್ ವಿಚಾರದಲ್ಲಿ ಅಣ್ಣಾವ್ರ ಅನುಕರಣೆ ಏಕೆ ಮಾಡುತ್ತಿದ್ದಾರೆ? ಎಂಬ ಪ್ರಶ್ನೆ ಸಾಮಾನ್ಯ. ಆದರೆ ಎಲ್ಲರೂ ತಿಳಿದುಕೊಳ್ಳಲೇ ಬೇಕಾದ ವಿಚಾರವೂ ಹೌದು.

ಈ ಬಾರಿ ಯಶ್​ ಡಬ್ಬಿಂಗ್ ಮಾಡ್ತಿರೋದ್ರಲ್ಲಿ ವಿಶೇಷವೆನಪ್ಪ ಅಂದ್ರೆ ಡಬ್ಬಿಂಗ್​ ಮಾಡೋ ಸಮಯ​. ಎಲ್ಲರೂ ಹತ್ತು ಗಂಟೆಯ ನಂತರ ಸಿನಿಮಾ ಕಾರ್ಯಗಳನ್ನ ಮಾಡಿದ್ರೆ ನಟ ಯಶ್​ ಬೆಳ್ಳಂಬೆಳಗ್ಗೆಯೇ ಸ್ಟುಡಿಯೋಗೆ ಹಾಜರಾಗುತ್ತಿದ್ದಾರೆ. ಬೆಳಗ್ಗೆ 6 ಗಂಟೆಯಿಂದ ಬೆಳಗ್ಗೆ 9 ಗಂಟೆಯ ತನಕ ಮಾತ್ರ ಯಶ್​ ತಮ್ಮ ಪಾತ್ರಕ್ಕೆ ಧ್ವನಿ ನೀಡುತ್ತಿದ್ದಾರೆ. ಯಶ್​ ಬೆಳಗ್ಗೆ ಮಾತ್ರ ಡಬ್ಬಿಂಗ್​​ ಮಾಡಲು ಕಾರಣ ಫ್ರೆಶ್​ ವಾಯ್ಸ್​. ಬೆಳಗಿನ ವಾತಾವರಣದಲ್ಲಿ ಧ್ವನಿ ಅದ್ಭುತವಾಗಿ ಹೊರಬರುತ್ತೆದೆ. ಬೇಸ್​ ವಾಯ್ಸ್​ಗಳನ್ನ ಕ್ರಿಯೇಟ್​ ಮಾಡೋದಕ್ಕೂ ಬೆಳಗಿನ ಕಾಲ ಉತ್ತಮವಾದದು. ಈ ಕಾರಣಕ್ಕೆ ಯಶ್​ ಬೆಳಗ್ಗಿನ ಜಾವ ಮಾತ್ರ ಪಾತ್ರಕ್ಕೆ ಡಬ್ಬಿಂಗ್​ ಮಾಡ್ತಿದ್ದಾರಂತೆ.

ಅಂದಹಾಗೆ ಡಾ.ರಾಜ್ ಕುಮಾರ್ ಕೂಡ ಬೆಳಗಿನ ಜಾವವೇ ಹಾಡುಗಳ ರೆರ್ಕಾಡಿಂಗ್ ಹೆಚ್ಚಾಗಿ ಮಾಡ್ತಿದ್ರಂತೆ. ಹಾಗಾಗಿ, ಅಣ್ಣಾವ್ರ ಧ್ವನಿ ಈಗಲೂ ಕನ್ನಡಿಗರ ಕಿವಿ ಮತ್ತು ಮನಸ್ಸಿನಲ್ಲಿ ಉಳಿದುಕೊಂಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top