fbpx
ಸಮಾಚಾರ

ವಿವಾದ ಸೃಷ್ಟಿಸಿದ ‘ಗಂಗೂಬಾಯಿ ಕಥಿಯಾವಾಡಿ’: ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ, ನಟಿ ಆಲಿಯಾಗೆ ಕೋರ್ಟ್ ಸಮ್ಮನ್ಸ್

ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರಿಗೆ ವಿವಾದಕ್ಕೂ ಅವಿನಾಭಾವ ಸಂಭಂದ ಇದೆ ಎಂದರೆ ತಪ್ಪಾಗುವುದಿಲ್ಲ. ಏಕೆಂದರೆ ಬನ್ಸಾಲಿ ಅವರ ಪ್ರತಿ ಚಿತ್ರದಲ್ಲಿಯೂ ಒಂದಲ್ಲ ಒಂದು ವಿವಾದ ಅವರನ್ನು ಕಾಡುತ್ತದೆ.. ಅವರ ಹಿಂದಿನ ಚಿತ್ರಗಳಾದ ಬಾಜಿರಾವ್ ಮಸ್ತಾನಿ, ರಾಮ್ ಲೀಲಾ, ಪದ್ಮಾವತಿ ಮುಂತಾದ ಸಿನಿಮಾಗಳ ಬಿಡುಗಡೆ ವೇಳೆ ವಿಪಾರೀತ ವಿವಾದಗಳು ಹುಟ್ಟುಕೊಂಡಿತ್ತು. ಈಗ ಬನ್ಸಾಲಿ ಅವರ ಮುಂದಿನ ಚಿತ್ರ ‘ಗಂಗೂಬಾಯಿ ಕಥಿಯಾವಾಡಿ’ ಸಿನಿಮಾಗೂ ವಿವಾದದ ಕಾವು ಬಡಿದಿದೆ.

ಗಂಗೂಬಾಯಿ ಕಥಿಯಾವಾಡಿ ಚಿತ್ರ ಎಸ್ ಹುಸೈನ್ ಜೈದಿ ಮತ್ತು ಜೇನ್ ಬೊರ್ಗ್ಸ್ ಅವರ ಕಾದಂಬರಿ ಆಧಾರಿತ ಚಿತ್ರವಾಗಿದ್ದು ಬನ್ಸಾಲಿ ಪ್ರೊಡಕ್ಷನ್ ಸಂಸ್ಥೆ ನಿರ್ಮಿಸುತ್ತಿದೆ. ವಕೀಲ ನರೇಂದ್ರ ದುಬೆ ಮೂಲಕ ಬಾಬುಜಿ ಶಾ ಎಂಬುವವರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಬಾಬುಜಿ ಶಾ ಗಂಗೂಬಾಯಿ ಕತೈವಾಡಿಯವರ ದತ್ತು ಮಗನಾಗಿದ್ದು ಕಾದಂಬರಿಯಲ್ಲಿ ತಮ್ಮ ತಾಯಿಯ ಬಗ್ಗೆ ಬರೆದಿರುವ ಅಧ್ಯಾಯವು ನಿಂದನಕಾರಿಯಾಗಿದ್ದು ಅವರ ವ್ಯಕ್ತಿತ್ವ, ಗೌರವಕ್ಕೆ ಮಸಿ ಬಳಿಯಲಾಗಿದೆ, ಅವರ ವೈಯಕ್ತಿಕ ಬದುಕು ಮತ್ತು ಆತ್ಮ ಗೌರವಕ್ಕೆ ಧಕ್ಕೆಯುಂಟಾಗಿದೆ ಎಂದು ದೂರಿನಲ್ಲಿ ಶಾ ಆರೋಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸಂಜಯ್ ಲೀಲಾ ಬನ್ಸಾಲಿ, ಕಾದಂಬರಿಯ ಲೇಖಕ ಮತ್ತು ಆಲಿಯಾ ಭಟ್ ಗೆ ಸಮ್ಮನ್ಸ್ ಜಾರಿ ಮಾಡಲಾಗಿದೆ. ಮುಂಬೈಯ ಮೆಟ್ರೊಪಾಲಿಟನ್ ನ್ಯಾಯಾಲಯ ಸಮ್ಮನ್ಸ್ ಜಾರಿ ಮಾಡಿದೆ. ಮಜ್ಗೌನ್ ನ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಕಳೆದ ವಾರ ಇವರಿಬ್ಬರಿಗೆ ಸಮ್ಮನ್ಸ್ ಜಾರಿ ಮಾಡಿದ್ದು ಕಳೆದ ಬುಧವಾರವಷ್ಟೇ ವಿಸ್ತೃತ ಆದೇಶದ ಪ್ರತಿ ಸಿಕ್ಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top