fbpx
ಸಮಾಚಾರ

ಮೈದಾನದಲ್ಲಿ ವಿರಾಟ್ ಕೊಹ್ಲಿ ವರ್ತನೆ ಬಗ್ಗೆ ಬೆನ್ ಸ್ಟೋಕ್ಸ್ ಟೀಕೆ

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಸರಣಿಯಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅದ್ಭುತವಾದ ಲಯದಲ್ಲಿದ್ದು ಉತ್ತಮವಾಗಿ ರನ್‌ಗಳಸಿಯತ್ತಿದ್ದಾರೆ. ಈ ಮಧ್ಯೆ ವಿರಾಟ್ ಕೊಹ್ಲಿ ಅಂಗಳದಲ್ಲಿ ಎಂದಿನಂತೆಯೇ ಎದುರಾಳಿ ತಂಡದ ವಿರುದ್ಧ ತಮ್ಮ ಆಕ್ರಮಣಕಾರಿ ಪ್ರವೃತ್ತಿಯನ್ನೂ ತೋರುವ ಮೂಲಕ ಸವಾಲಾಗಿದ್ದಾರೆ.

ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿಯ ಆಕ್ರಮಣಶೀಲತೆ ಹಾಗೂ ಮೈದಾನದಲ್ಲಿ ಅವರು ಕೆಲವೊಮ್ಮೆ ವರ್ತಿಸುವ ರೀತಿ ಬಗ್ಗೆ ಇಂಗ್ಲೆಂಡ್‌ ತಂಡದ ಆಲ್ರೌಂಡರ್‌ ಬೆನ್‌ ಸ್ಟೋಕ್ಸ್‌ ಪ್ರತಿಕ್ರಿಯಿಸಿದ್ದು ಕೊಹ್ಲಿಯ ವರ್ತನೆಯನ್ನು ಟೀಕೆ ಮಾಡಿದ್ದಾರೆ.

ಸುದ್ದಿಗೋಷ್ಠಿ ವೇಳೆ ಕೊಹ್ಲಿಯ ಆಕ್ರಮಣಶೀಲತೆ ಬಗ್ಗೆ ಎದುರಾದ ಪ್ರಶ್ನೆಗೆ ಉತ್ತರಿಸಿದ ಸ್ಟೋಕ್ಸ್‌, ‘ಪ್ರತಿ ತಂಡ ಹಾಗೂ ಪ್ರತಿ ಆಟಗಾರ ಮೈದಾನದಲ್ಲಿ ಅವರದ್ದೇ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಕೊಹ್ಲಿಯಂತೆ ವರ್ತಿಸುವುದು ನಮ್ಮ ತಂಡಕ್ಕೆ ಸರಿ ಹೊಂದುವುದಿಲ್ಲ. ಕಳೆದ ನಾಲ್ಕೈದು ವರ್ಷಗಳಲ್ಲಿ ಎದುರಾಳಿ ಆಟಗಾರನ ಮೇಲೆ ಆಕ್ರಮಣಶೀಲತೆ ತೋರಿ, ಮಾನಸಿಕ ಒತ್ತಡ ಹೇರುವಂತಹ ಆಟವಾಡಿಲ್ಲ’ ಎಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top