fbpx
ಸಮಾಚಾರ

ರಾಬರ್ಟ್​ ಸಿನಿಮಾವನ್ನ ಹಾಡಿ ಹೊಗಳಿದ ಮಂಗಳಮುಖಿ ‘ಪದ್ಮಶ್ರೀ’ ಮಂಜಮ್ಮ ಜೋಗತಿ: ಹೇಳಿದ್ದೇನು ನೋಡಿ

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ರಾಬರ್ಟ್‌ ಚಿತ್ರವು ಕರ್ನಾಟಕ ಮತ್ತು ನೆರೆ ರಾಜ್ಯವಾದ ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ರಾಬರ್ಟ್ ಸಿನಿಮಾ ಬಿಡುಗಡೆಯಾಗಿ 10 ದಿನದಲ್ಲಿ 70 ಕೋಟಿ ಕಲೆಕ್ಷನ್ ಮಾಡಿದೆ. ಈ ಮಧ್ಯೆ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಜಾನಪದ ಅಕಾಡೆಮಿ ಅಧ್ಯಕ್ಷೆ ಹಾಗೂ ಮಂಗಳಮುಖಿ ಮಾತಾ ಬಿ. ಮಂಜಮ್ಮ ಜೋಗತಿ ರಾಬರ್ಟ್​ ಚಿತ್ರವನ್ನು ಹಾಡಿ ಹೊಗಳಿದ್ದಾರೆ.

ರಾಬರ್ಟ್ ಸಿನಿಮಾದಲ್ಲಿ ವಿಶೇಷವಾಗಿ ಮಂಗಳಮುಖಿ ಬಾಬಿ ಪಾತ್ರ ಪ್ರೇಕ್ಷಕರ ಮನಗೆದ್ದಿದೆ. ಬಾಬಿಯಾಗಿ ಶಿವರಾಜ್ ಕೆ.ಆರ್ ಪೇಟೆ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಮಂಗಳಮುಖಿಯರೂ ನಮ್ಮಂತೆ ಸಮಾಜದಲ್ಲಿ ಒಬ್ಬರು ಎಂಬುದನ್ನು ತೋರಿಸುವ ಕೆಲಸ ಮಾಡಲಾಗಿದೆ.ಮಂಗಳಮುಖಿಯರ ಬಗ್ಗೆ ತೋರಿಸಿರುವ ಪ್ರೀತಿ ಮತ್ತು ಗೌರವದ ಬಗ್ಗೆ ಮಂಗಳಮುಖಿ ಸಮುದಾಯ ಧನ್ಯವಾದ ತಿಳಿಸುತ್ತಿದೆ. ಇದು ಮಾತಾ ಬಿ. ಮಂಜಮ್ಮ ಜೋಗತಿ ಅವರ ಮನ ಗೆದ್ದಿದೆ. ಹೀಗಾಗಿ, ರಾಬರ್ಟ್​ ಸಿನಿಮಾ ಪ್ರಯತ್ನದ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ.

ರಾಬರ್ಟ್​ ಸಿನಿಮಾ ತೆರೆಕಂಡ ತುಂಬಾ ಜನರು ನನಗೆ ಕರೆ ಮಾಡಿ ಸಿನಿಮಾ ನೋಡಿ ಎಂದಿದ್ದರು. ಅಂಥ ವಿಶೇಷತೆ ಏನಿದೆ ಎಂದು ನಾನು ಕೇಳಿದ್ದೆ. ದರ್ಶನ್​ ಅವರು ಚೆನ್ನಾಗಿ ಮಾಡಿದ್ದಾರೆ. ಮಂಗಳಮುಖಿಯರು ಬಗ್ಗೆ ಮೆಚ್ಚುಗೆ ಬರುವಂತೆ ತೋರಿಸಲಾಗಿದೆ ಎಂದಿದ್ದರು. ಹೀಗಾಗಿ, ನಾನು ಕೂಡ ಚಿತ್ರಮಂದಿರಕ್ಕೆ ತೆರಳಿ ಸಿನಿಮಾ ನೋಡಿದೆ ಎಂದಿದ್ದಾರೆ ಮಾತಾ ಬಿ. ಮಂಜಮ್ಮ ಜೋಗತಿ.

ತುಂಬಾ ವರ್ಷಗಳಾಗಿತ್ತು ಚಿತ್ರಮಂದಿರಗಳಲ್ಲಿ ಸಿನಿಮಾ ನೋಡದೆ. ಅಕಾಡೆಮಿಯ ಸಿಬ್ಬಂದಿ ಜೊತೆ ಸಿನಿಮಾ ನೋಡಿದೆ. ಅಲ್ಲಿ ಶ್ರೀರಾಮ ಮಂದಿರ ನೋಡಿದಷ್ಟು ಆಯೋಧ್ಯಾ ನೋಡಿದಷ್ಟು ಸಂತೋಷವಾಯಿತು. ನಮ್ಮ ಸಮುದಾಯದ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದ್ದಾರೆ. ನಮ್ಮ ಸಮುದಾಯವನ್ನು ಗೌರವಿಸುವಂತ ಮಾತುಗಳು ತುಂಬಾ ಖುಷಿಯಾಯಿತು ಎಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top