fbpx
ಸಮಾಚಾರ

ಶಾಲಾ ದಿನಗಳ ಬಸ್​ ಪಾಸ್​ ಫೋಟೋ ಪ್ರತಿ ಹಂಚಿಕೊಂಡ ಶ್ರುತಿ: ಹಳೆಯ ದಿನಗಳ ನೆನೆದು ನಟಿ ಹೇಳಿದ್ದೇನು ಕೇಳಿ

ತಮ್ಮ ಸಿನಿ ಜೀವನದಲ್ಲಿ ಹೆಚ್ಚಾಗಿ ಅಳುವ ಕ್ಯಾರೆಕ್ಟರ್ ಗಳನ್ನೇ ಮಾಡಿ ಚಿತ್ರಪ್ರೇಮಿಗಳಿಂದ ಪ್ರೀತಿಯಿಂದ ‘ಅಳುಮುಂಜಿ’ ಎಂದೇ ಕರೆಸಿಕೊಳ್ಳುವ ಹಿರಿಯ ನಟಿ ಕಮ್ ರಾಜಕಾರಣಿ ಶ್ರುತಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುತ್ತಾರೆ. ವಯಕ್ತಿಕ ಜೀವನದ ಬಗ್ಗೆ ಮತ್ತು ರಾಜಕೀಯದ ಬಗ್ಗೆ ಪೋಸ್ಟ್ ಮಾಡುತ್ತಾ ಅಭಿಮಾನಿಗಳ ಜೊತೆ ಕಾಂಟ್ಯಾಕ್ಟ್ ಇಟ್ಟುಕೊಂಡಿರುವ ಶ್ರುತಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಲೆಟೆಸ್ಟ್​ ಪೋಸ್ಟ್​ ಮಾಡಿದ್ದು, ಇದು ನೆಟ್ಟಿಗರ ಗಮನ ಸೆಳೆಯುತ್ತಿದೆ. 1989ರಲ್ಲಿ ಖರೀದಿಸಿದ ಬಸ್​ ಪಾಸ್​ನ ಪ್ರತಿಯನ್ನು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದು, ಆಸಕ್ತಿಕರ ವಿಷಯವನ್ನು ಅಭಿಮಾನಿಗಳೊಂದಿಗೆ ಶೇರ್​ ಮಾಡಿದ್ದಾರೆ.

 

 

ಶಾಲೆಗೆ ಹೋದಳು ತಾವು ಬಳಸುತ್ತಿದ್ದ ಬಸ್ ಪಾಸ್ ನ ಫೋಟೋವನ್ನು ಶ್ರುತಿ ಹಂಚಿಕೊಂಡಿದ್ದಾರೆ. ಶ್ರುತಿ ಅವರು ಹಂಚಿಕೊಂಡಿರುವ ಈ ಬಸ್​ ಪಾಸ್​ 1989ರ ಜೂನ್ 16ರಂದು ವಿತರಿಸಲಾಗಿದೆ. ಆ ಕಾಲದಲ್ಲಿ ಇದರ ಬೆಲೆ ಎರಡು ರೂಪಾಯಿ. ಇದರಲ್ಲಿ ಶ್ರುತಿ ಅವರ ಶಾಲಾ ದಿನಗಳ ಅಪರೂಪದ ಭಾವಚಿತ್ರ ಸಹ ಇದೆ. ಶಾಲಾ ಸಮವಸ್ತ್ರದಲ್ಲಿ ಬಾಲಕಿ ಶ್ರುತಿ ಅವರು ಮುದ್ದಾಗಿ ಕಾಣುತ್ತಿದ್ದಾರೆ.

“ಇದು ನನ್ನ ಸ್ಕೂಲ್​ ಬಸ್​ ಪಾಸ್​. ಹಲವಾರು ಊರುಗಳಲ್ಲಿ ಓದಿ, ಕೊನೆಗೆ ಬಂದು ಸೇರಿದ್ದು ಮಲ್ಲೇಶ್ವರದ ಕಾರ್ಪೋರೇಷನ್​ ಗರ್ಲ್ಸ್​ ಹೈಸ್ಕೂಲ್​ಗೆ. ನಂತರ ಇದೇ ವರ್ಷದ ಕೊನೆಯಲ್ಲಿ ನನ್ನ ಮೊದಲ ಸಿನಿಮಾ ಆಸೆ ಗೊಬ್ಬ ಮೀಸೆ ಗೊಬ್ಬ ಚಿತ್ರಕ್ಕೆ ಆಯ್ಕೆಯಾಗಿ ನನ್ನ ಸಿನಿಜೀವನ ಶುರುವಾಯಿತು” ಎಂದು ಶ್ರುತಿ ಫೋಟೋ ಕೆಳೆಗೆ ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top