fbpx
ಸಮಾಚಾರ

ಬಿಗ್ ಬಾಸ್ 8 : ನಾಲ್ಕನೇ ವಾರ ಬಿಗ್ ಮನೆಯಿಂದ ಮತ್ತೊಬ್ಬ ಸೆಲೆಬ್ರಿಟಿ ಔಟ್

ಬಿಗ್​ ಬಾಸ್​ ಕನ್ನಡ ಸೀಸನ್​ 8ರ ನಾಲ್ಕನೇ ವಾರದ ಎಲಿಮಿನೇಷನ್​ ಪ್ರಕ್ರಿಯೆ ಮುಗಿದಿದೆ. ನಟಿ ಚಂದ್ರಕಲಾ ಮೋಹನ್​ ಅವರು ದೊಡ್ಮನೆಯಿಂದ ಎಲಿಮಿನೇಟ್​ ಆಗಿದ್ದಾರೆ. ಪುಟ್ಟಗೌರಿ ಮದುವೆ ಧಾರಾವಾಹಿಯ ಅಜ್ಜಮ್ಮ ಪಾತ್ರದ ಮೂಲಕ್ಷೇ ಹೆಚ್ಚು ಫೇಮಸ್​ ಆಗಿದ್ದ ಚಂದ್ರಕಲಾ ಅವರು ಬಿಗ್​ ಬಾಸ್​ ಆಟ ಮುಂದುವರಿಸಲು ಸೋತಿದ್ದಾರೆ. ಡೊಡ್ಮನೆಯಲ್ಲಿ ನಾಲ್ಕು ವಾರಗಳ ಕಾಲ ಅವರು ಪೈಪೋಟಿ ನೀಡಿದ್ದರು.

ಎಲಿಮಿನೆಷನ್​ಗೆ ನಾಮಿನೇಟ್​ ಮಾಡಲು ಪ್ರತಿ ಬಾರಿ ಸ್ಪರ್ಧಿಗಳಿಗೆ ಅವಕಾಶ ನೀಡಲಾಗುತ್ತಿತ್ತು. ಆದರೆ, ಈ ಬಾರಿ ಈ ಅವಕಾಶವನ್ನು ಬಿಗ್​ ಬಾಸ್​ ಕಿತ್ತುಕೊಂಡಿದ್ದರು. ಕ್ಯಾಪ್ಟನ್​ ಆಗಿದ್ದ ಅರವಿಂದ್ ಕೆ.ಪಿ. ಅವರನ್ನು ಹೊರತುಪಡಿಸಿ ಉಳಿದ 13 ಸ್ಪರ್ಧಿಗಳು ನೇರವಾಗಿ ನಾಮಿನೇಟ್​ ಆಗಿದ್ದರು. ನಿಧಿ ಸುಬ್ಬಯ್ಯ, ದಿವ್ಯಾ ಸುರೇಶ್​, ದಿವ್ಯಾ ಉರುಡುಗ, ಚಂದ್ರಕಲಾ, ವೈಷ್ಣವಿ, ಶುಭಾ ಪೂಂಜಾ, ಪ್ರಶಾಂತ್​ ಸಂಬರಗಿ, ರಾಜೀವ್​, ಮಂಜು ಪಾವಗಡ, ವಿಶ್ವ, ರಘು ಗೌಡ, ಶಮಂತ್​ ಬ್ರೋ ಗೌಡ, ಶಂಕರ್​ ಅಶ್ವತ್ಥ್​ ಡೇಂಜರ್​ ಜೋನ್​ನಲ್ಲಿದ್ದರು.

ಮಂಜು ಪಾವಗಡ. ದಿವ್ಯಾ ಉರುಡುಗ, ಶುಭಾ, ನಿಧಿ, ವೈಷ್ಣವಿ, ದಿವ್ಯಾ ಸುರೇಶ್, ರಘು, ರಾಜೀವ್​ ಶನಿವಾರವೇ ಸೇಫ್​ ಆಗಿದ್ದರು. ಭಾನುವಾರ ಪ್ರಶಾಂತ್​ ಸಂಬರಗಿ, ವಿಶ್ವ, ಶಮಂತ್​ ಬ್ರೋ ಗೌಡ, ಶಂಕರ್​ ಅಶ್ವತ್ಥ್​ ಸೇಫ್​ ಆದರು, ನಂತರ ಚಂದ್ರಕಲಾ ಬಿಗ್​ ಬಾಸ್​ ಮನೆಯಿಂದ ಹೊರ ಬಂದರು.

ಉಳಿದಂತೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ಒಟ್ಟು 17 ಜನರ ಪೈಕಿ ಚಂದ್ರಕಲಾ ಸೇರಿದಂತೆ ನಾಲ್ವರು ಮನೆಯಿಂದ ಹೊರ ಬಂದಿದ್ದಾರೆ. ಮೊದಲ ವಾರ ಟಿಕ್‍ಟಾಕ್ ಸ್ಟಾರ್ ಧನುಶ್ರೀ, ಎರಡನೇ ವಾರ ನಿರ್ಮಲಾ ಚೆನ್ನಪ್ಪ ಔಟ್ ಆಗಿದ್ದಾರೆ. ಮೂರನೇ ವಾರದ ಗೀತಾ ಭಾರತಿ ಭಟ್ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top