fbpx
ಸಮಾಚಾರ

ಶತಕ ಭಾರಿಸಿದಾಗಲೆಲ್ಲಾ ರಾಹುಲ್ ಕಿವಿ ಮುಚ್ಚಿ ಸಂಭ್ರಮಿಸುವುದು ಏಕೆ? ಕಾರಣ ತಿಳಿಸಿದ ಕನ್ನಡಿಗ

ಕನ್ನಡಿಗ ಕೆಎಲ್ ರಾಹುಲ್ ಪ್ರತಿ ಬಾರಿ ಶತಕ ಬಾರಿಸಿದ ಬಳಿಕ ತಮ್ಮದೇ ಆದ ರೀತಿಯಲ್ಲಿ ಸಂಭ್ರಮಿಸುತ್ತಾರೆ. ಶತಕದ ಬಳಿಕ ಕಣ್ಣು ಮತ್ತು ಕಿವಿಯನ್ನು ಮುಚ್ಚುವ ಮೂಲಕ ವಿಭಿನ್ನವಾದ ರೀತಿಯಲ್ಲಿ ಕೆಎಲ್ ರಾಹುಲ್ ಅವರು ತಮ್ಮ ಶತಕದ ಸಂಭ್ರಮಾಚರಣೆ ಮಾಡುತ್ತಾರೆ. ರಾಹುಲ್ ಈ ರೀತಿಯೇ ಏಕೆ ಶತಕವನ್ನು ಸಂಭ್ರಮಿಸುತ್ತಾರೆ ಅಂತ ತಿಳ್ಕೊಬೇಕಾ? ಮುಂದೆ ಓದಿ

ಮೊನ್ನೆ ಇಂಗ್ಲೆಂಡ್ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ ಶತಕ ಗಳಿಸಿದಾಗಲೂ ರಾಹುಲ್‌ ಡ್ರೆಸಿಂಗ್‌ ರೂಮ್‌ ಕಡೆಗೆ ತಿರುಗಿ ಎರಡೂ ಕಿವಿಗಳನ್ನು ಮುಚ್ಚಿ ವಿಶೇಷವಾಗಿ ಸಂಭ್ರಮಿಸಿದರು. ಇದನ್ನು ಗಮನಿಸಿದ್ದ ಕಾಮೆಂಟೇಟರ್‌ ಮುರಳಿ ಕಾರ್ತಿಕ್ ಇನಿಂಗ್ಸ್‌ ಬ್ರೇಕ್‌ ವೇಳೆ ರಾಹುಲ್‌ ಅವರನ್ನು ಈ ವಿಶೇಷ ಸಂಭ್ರಮಾಚರಣೆಗೆ ಕಾರಣ ಏನು? ಎಂದು ಪ್ರಶ್ನೆ ಮಾಡಿದ್ದರು.

“ಹೊರಗಿನ ಶಬ್ಧಗಳಿಗೆ ಕೊವಿಗೊಡಬಾರದು ಎಂಬುದು ಇದರ ಹಿಂದಿನ ಸರಳ ಅರ್ಥ. ಕೆಲವೊಮ್ಮೆ ಹೊರಗಿನಿಂದ ಬರುವ ಕೆಲ ಮಾತುಗಳು ನಮ್ಮನ್ನು ವಿಚಲಿತರನ್ನಾಗಿಸುತ್ತಿದೆ. ಈ ಋಣಾತ್ಮಕ ಶಬ್ಧಗಳಿಗೆ ಕಿವಿಗೊಡದೆ ಆಟದ ಕಡೆಗೆ ಗಮನ ನೀಡಬೇಕು ಎಂಬುದಷ್ಟೇ ಇದರ ಹಿಂದಿನ ಅರ್ಥವಾಗಿದೆ,” ಎಂದು ರಾಹುಲ್‌ ತಮ್ಮ ವಿಶೇಷ ಸಂಭ್ರಮಾಚರಣೆಯ ಬಗ್ಗೆ ಹೇಳಿಕೊಂಡಿದ್ದಾರೆ.

ಅಂದಹಾಗೆ ಟಿ20 ಸರಣಿಯಲ್ಲಿ ಸತತ ವೈಫಲ್ಯ ಅನುಭವಿಸಿ ಕೊನೇ ಪಂದ್ಯಕ್ಕೆ ತಂಡದಿಂದಲೂ ಹೊರಬಿದ್ದಿದ್ದ ಕನ್ನಡಿಗ ಕೆಎಲ್ ರಾಹುಲ್, ಪ್ರವಾಸಿ ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕದ ಮೂಲಕ ಟೀಕಾಕಾರರಿಗೆ ದಿಟ್ಟ ಉತ್ತರ ನೀಡಿದ್ದರು. ಮೊದಲ ಏಕದಿನದಲ್ಲಿ ಅಜೇಯ 62 ರನ್ ಬಾರಿಸಿದ್ದ ರಾಹುಲ್ ಈ ಬಾರಿ ಸರಿಸುಮಾರು ಒಂದು ವರ್ಷದ ಬಳಿಕ ಮೂರಂಕಿ ತಲುಪಿದ ಸಾಧನೆ ಮಾಡಿದರು. ಈ ವೇಳೆ ಅವರು ಎರಡೂ ಕಿವಿ ಮುಚ್ಚಿಕೊಂಡು ಸಂಭ್ರಮಿಸಿದ್ದು, ಕ್ರಿಕೆಟ್ ಪ್ರೇಮಿಗಳಲ್ಲಿ ಕುತೂಹಲ ಸೃಷ್ಟಿಸಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top