fbpx
ಸಮಾಚಾರ

ಏಪ್ರಿಲ್ 02: ನಾಳೆಯ ಪಂಚಾಂಗ ಮತ್ತು ದಿನ ಭವಿಷ್ಯ

ಏಪ್ರಿಲ್ 2, 2021 ಶುಕ್ರವಾರ
ವರ್ಷ : 1942 ಶಾರ್ವರಿ
ತಿಂಗಳು : ಫಾಲ್ಗುಣ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ಪಂಚಮೀ 8:14 am ಷಷ್ಠೀ 5:58 am
ನಕ್ಷತ್ರ : ಜ್ಯೇಷ್ಠ 3:43 am
ಯೋಗ : ವ್ಯತಿಪಾತ 11:40 pm
ಕರಣ : ತೈತುಲ 8:14 am ಗರಿಜ 7:02 pm

Time to be Avoided
ರಾಹುಕಾಲ : 10:52 am – 12:23 pm
ಯಮಗಂಡ : 3:25 pm – 4:56 pm
ದುರ್ಮುಹುರ್ತ : 8:44 am – 9:33 am, 12:47 pm – 1:36 pm
ವಿಷ : 10:33 am – 12:02 pm, 12:00 am – 3:43 am
ಗುಳಿಕ : 7:49 am – 9:20 am

Good Time to be Used
ಅಮೃತಕಾಲ : 7:30 pm – 9:00 pm
ಅಭಿಜಿತ್ : 11:58 am – 12:47 pm

Other Data
ಸೂರ್ಯೋದಯ : 6:15 am
ಸುರ್ಯಾಸ್ತಮಯ : 6:31 pm
ರವಿರಾಶಿ : ಮೀನ
ಚಂದ್ರರಾಶಿ : ವೃಶ್ಚಿಕ upto 27:43+

 

 

 
 

ಮೇಷ (Mesha)

 

ಜವಾಬ್ದಾರಿಯನ್ನು ನಿರ್ವಹಿಸಿ, ಅಡೆತಡೆಗಳನ್ನು ಎದುರಿಸಿ ನಿಲ್ಲುವಂತಹ ಶಕ್ತಿಯು ಇಂದು ತನ್ನಿಂದ ತಾನೇ ಲಭಿಸುವುದು. ಹಣಕಾಸಿನ ಸ್ಥಿತಿಯು ಉತ್ತಮವಾಗಿದ್ದು, ನಿಮ್ಮ ಬಹುದಿನದ ಕನಸು ನನಸಾಗುವುದು.

 

ವೃಷಭ (Vrushabha)

ನಿಮ್ಮ ಆಂತರಿಕ ವಿಚಾರಗಳನ್ನು ಯಾರ ಮುಂದೂ ಬಹಿರಂಗ ಮಾಡದಿರಿ. ಇದರಿಂದ ನೀವು ಅಪಹಾಸ್ಯಕ್ಕೆ ಗುರಿ ಆಗುವಿರಿ. ನಿಮ್ಮ ಮನೋಕಾಮನೆಗಳು ಕೈಗೂಡುವುದರಿಂದ ಇತರರು ನಿಮ್ಮನ್ನು ಕುರಿತು ಅಸೂಯೆ ಪಡುವರು.

 

ಮಿಥುನ (Mithuna)

ನಿಮ್ಮನ್ನು ತೊಂದರೆಗೆ ಸಿಲುಕಿಸುವ ಹಲವು ಯೋಜನೆಗಳನ್ನು ಖಂಡಿತ ಹಾಕಿಕೊಳ್ಳದಿರಿ. ಇರುವ ಕಾರ್ಯಕ್ಷೇತ್ರದಲ್ಲಿಯೇ ಮನಸ್ಸಿಟ್ಟು ಕಾರ್ಯ ಮಾಡಿರಿ. ಯಶಸ್ಸು ನಿಮ್ಮದಾಗುವುದು. ಆಂಜನೇಯ ಸ್ತೋತ್ರವನ್ನು ಮರೆಯದಿರಿ.

 

ಕರ್ಕ (Karka)

ಸಂಕಲ್ಪಿತ ಕಾರ್ಯ ಯೋಜನೆಗಳಿಗೆ ಅಡೆತಡೆ ಉಂಟಾಗುವ ಸಾಧ್ಯತೆ. ಹಣಕಾಸಿನ ಪರಿಸ್ಥಿತಿ ಬಿಗಡಾಯಿಸುವುದು. ಗುರು-ಹಿರಿಯರ ಜೊತೆ ವಿರೋಧ ಸಲ್ಲದು. ಸ್ನೇಹಿತರು ನಿಮ್ಮನ್ನು ಕುರಿತು ಅಪಹಾಸ್ಯ ಮಾಡುವ ಸಂದರ್ಭವಿರುತ್ತದೆ.

 

ಸಿಂಹ (Simha)

ನಿಮಗಿಂದು ಹೊಸ ಹೊಸ ಸತ್ವಪರೀಕ್ಷೆಗಳು ಎದುರಾಗುವುದು. ಮನೆಯ ಸದಸ್ಯರಲ್ಲಿನ ಭಿನ್ನಾಭಿಪ್ರಾಯವನ್ನು ಬಗೆಹರಿಸುವುದೋ ಅಥವಾ ಕಚೇರಿ ಕೆಲಸದಲ್ಲಿನ ಸಹೋದ್ಯೋಗಿಗಳು ಮಾಡುವ ಟೀಕೆಗೆ ಉತ್ತರಿಸುವುದೋ ಗೊಂದಲವಾಗುವುದು.

 

ಕನ್ಯಾರಾಶಿ (Kanya)

ಗ್ರಹಗತಿಗಳು ಇಂದು ನಿಮಗೆ ಪೂರ್ಣ ಸಹಕಾರ ಕೊಡದೆ ಇರುವುದರಿಂದ ನಿಮ್ಮ ಪೂರ್ವ ಯೋಜಿತಕಾರ್ಯಗಳಲ್ಲಿ ಹಿನ್ನಡೆ ಉಂಟಾಗುವುದು. ನಿರಾಶರಾಗದೆ ಮರಳಿ ಯತ್ನವ ಮಾಡಿರಿ ಒಳಿತಾಗುವುದು, ಎಲ್ಲ ಸಮಸ್ಯೆಗಳಿಗೂ ಪರಿಹಾರ ಇರುತ್ತದೆ. ಹಾಗಾಗಿ ಚಿಂತಿಸಬೇಡಿ.

 

ತುಲಾ (Tula)

ನಿಮ್ಮದೇ ಆದ ಕೆಲವೊಂದು ಯೋಜನೆಗಳು ಕೆಲವು ಬಗೆಯ ಬದಲಾವಣೆಗಳೊಂದಿಗೆ ಯಶಸ್ಸು ಪಡೆಯಲಿವೆ. ಈದಿನ ಸಂತಸದ ಸುದ್ದಿ ಕೇಳುವಿರಿ. ಹಣಕಾಸಿನ ತೊಂದರೆ ಇರುವುದಿಲ್ಲ. ಆದರೆ ಅಗತ್ಯಕ್ಕೆ ತಕ್ಕಷ್ಟು ಖರ್ಚು ಮಾಡಿರಿ.

 

ವೃಶ್ಚಿಕ (Vrushchika)

ಜೀವನದಲ್ಲಿ ಒಂಟಿತನ ಎಂದು ಕೊರಗದಿರಿ. ನಿಮ್ಮ ನಿಷ್ಠುರ ಮಾತುಗಳೇ ನಿಮ್ಮನ್ನು ಬಂಧು ಬಳಗದವರಿಂದ ದೂರ ಇರಿಸಿರುವುದು. ಹಾಗಾಗಿ ಕಾಲಕ್ಕೆ ತಕ್ಕಂತೆ ನೀವೂ ಬದಲಾಗಬೇಕಿದೆ. ಸಂಗಾತಿಯ ಬಗ್ಗೆ ಹೆಚ್ಚಿನ ಕೋಪತಾಪ ಒಳ್ಳೆಯದಲ್ಲ.

 

ಧನು ರಾಶಿ (Dhanu)

ಅಧಿಕ ಖರ್ಚುಗಳು ಹಲವು ರೀತಿಯ ಒತ್ತಡಗಳನ್ನು ತರುವ ಸಾಧ್ಯತೆ ಇದೆ. ಈಗ ಕೆಲಸ ಮಾಡುತ್ತಿರುವ ಕಚೇರಿಯಲ್ಲಿ ಸಹೋದ್ಯೋಗಿಗಳ ಅಸಹಕಾರದಿಂದಾಗಿ ಉಸಿರು ಕಟ್ಟುವ ವಾತಾವರಣ. ಹಾಗಂತ ಇರುವ ಕೆಲಸಕ್ಕೆ ರಾಜೀನಾಮೆ ನೀಡದಿರಿ.

 

ಮಕರ (Makara)

ಉದ್ಯೋಗಕ್ಕಾಗಿ ನಡೆದ ತೀವ್ರ ಪ್ರಯತ್ನವೂ ಸಫಲವಾಗುವುದಿಲ್ಲ. ಮನೆ ದೇವರ ಪ್ರಾರ್ಥನೆ ಮಾಡುವುದರಿಂದ ಒಳಿತಾಗುವುದು. ಜೀವನ ನಿರ್ವಹಣೆಗೆ ತೊಂದರೆ ಆಗುವುದಿಲ್ಲ. ತಾಂತ್ರಿಕ ವರ್ಗದವರಿಗೆ ಉತ್ತಮ ದಿನ.

 

ಕುಂಭರಾಶಿ (Kumbha)

ಗಂಡ ಹೆಂಡತಿಯರಲ್ಲಿನ ಮನಸ್ತಾಪ ಕಡಿಮೆ ಆಗುವುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡು ಬರುವುದು. ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ ಗಳಿಸಲು ಗುರುವಿನ ಆಶೀರ್ವಾದ ಪಡೆಯಿರಿ. ಆರ್ಥಿಕ ಸ್ಥಿತಿ ಸಾಧಾರಣವಾಗಿರುತ್ತದೆ.

 

ಮೀನರಾಶಿ (Meena)

ದೂರದ ಪ್ರಯಾಣ ಒದಗಿ ಬರಲಿದೆ. ಅಂದುಕೊಂಡದ್ದನ್ನು ಮಾಡಲು ಹಿರಿಯರಿಂದ ಒಪ್ಪಿಗೆ ದೊರೆಯುವುದು. ಮಕ್ಕಳ ಹಠಮಾರಿತನವು ನಿಮಗೆ ಕೋಪವನ್ನುಂಟು ಮಾಡುವುದು. ಅನಗತ್ಯ ಖರ್ಚು-ವೆಚ್ಚಗಳಿಗೆ ಕಡಿವಾಣ ಹಾಕಿರಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top