fbpx
ಸಮಾಚಾರ

ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಅಶೋಕ್ ದಿಂಡಾ ಮೇಲೆ ಮಾರಕ ದಾಳಿ

ಟೀಂ ಇಂಡಿಯಾ ವೇಗಿ ಅಶೋಕ್ ದಿಂಡಾ ಕ್ರಿಕೆಟ್ ಕರಿಯರ್ ಹಲವು ಏಳು ಬೀಳುಗಳನ್ನು ಕಂಡಿದೆ. ದೇಶಿ ಕ್ರಿಕೆಟ್‌ನಲ್ಲಿ ಮಿಂಚಿದ ದಿಂಡಾ ಫೆಭ್ರವರಿ 2, 2021ರಲ್ಲಿ ವಿದಾಯ ಘೋಷಿಸಿದ್ದರು. ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ ಬೆನ್ನಲ್ಲೇ ದಿಂಡಾ, ಬಿಜೆಪಿ ಸೇರಿಕೊಂಡು ಹೊಸ ಇನ್ನಿಂಗ್ಸ್ ಆರಂಭಿಸಿದ್ದರು. ಪಶ್ಚಿಮ ಬಂಗಾಳ ಚುನಾವಣೆಗೆ ಸ್ಪರ್ಧಿಸುತ್ತಿರುವ ದಿಂಡಾ ಮಾರಣಾಂತಿಕ ಹಲ್ಲೆಗೆ ಒಳಗಾಗಿದ್ದಾರೆ.

ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಅಶೋಕ್ ದಿಂಡಾ ಅವರು SUV ಜೀಪಿನಲ್ಲಿ ವಾಪಸ್ಸಾಗುತ್ತಿದ್ದರು. ಸಂಜೆ 4.30 pm ವೇಳೆ ವೆಲ್ಡಿಂಗ್ ಲಾಠಿ, ರಾಡ್ ಗಳನ್ನು ಹಿಡಿದು ಬಂದ ನೂರಾರು ಗೂಂಡಾಗಳು ದಂಡಾ ಅವರಿದ್ದ ಕಾರಿನ ಮೇಲೆ ದಾಳಿ ನಡೆಸಿರುವುದಾಗಿ ಅವರ ಮ್ಯಾನೇಜರ್ ಹೇಳಿದ್ದಾರೆ. ದಾಳಿಗೆ ಬಂದವರು ನೂರಾರು ಕಲ್ಲುಗಳನ್ನೂ ಎಸೆದಿದ್ದಾರೆ. ಅವರ ದಾಳಿಯಿಂದ ಮಾಜಿ ಕ್ರಿಕೆಟಿಗ ದಿಂಡಾ ಅವರ ಭುಜಕ್ಕೆ ಗಾಯವಾಗಿದೆ ಎಂದು ದಿಂಡಾ ಮ್ಯಾನೇಜರ್ ಹೇಳಿದ್ದಾರೆ. ‘ನಾವು ರೋಡ್‌ಶೋನಿಂದ ವಾಪಸ್ಸಾಗುತ್ತಿದ್ದಾಗ ಸರಿಯಾಗಿ ಮೋಯ್ನ ಬಝಾರ್ ಬಳಿ ಈ ಘಟನೆ ನಡೆದಿದೆ,’ ಎಂದು ಮ್ಯಾನೇಜರ್ ಪಿಟಿಐಗೆ ಹೇಳಿದ್ದಾರೆ.

ಈ ದಾಳಿಯ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿದ ಅಶೋಕ್ ದಿಂಡಾ, ಹಲ್ಲೆಗೆ ತೃಣಮೂಲ ಕಾಂಗ್ರೆಸ್ ಅನ್ನು ದೂಷಿಸಿದ್ದಾರೆ. “”ಸಂಜೆ 4ರ ಸುಮಾರಿಗೆ ತಮ್ಮ ಬೆಂಗಾವಲು ಪಡೆಯ ಮೇಲೆ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಮೊಯ್ನಾದ ಬಿಡಿಒ ಬಳಿ ಟಿಎಂಸಿ ಕಾರ್ಯಕರ್ತರು ತಮ್ಮನ್ನು ಸುತ್ತುವರೆದು ಹಲ್ಲೆ ಮಾಡಿದ್ದಾರೆ” ಎಂದು ದಿಂಡಾ ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top