fbpx
ಸಮಾಚಾರ

BBK8 :ಬಿಗ್​ ಬಾಸ್​ ಮನೆಗೆ ವೈಲ್ಡ್​ ಕಾರ್ಡ್​ ಎಂಟ್ರಿ; ಯಾರದು? ಇಲ್ಲಿದೆ ಮಾಹಿತಿ

ಬಿಗ್ ಬಾಸ್ ಸೀಸನ್ 8 ಶುರುವಾಗಿ 30 ದಿನಗಳೇ ಆಗಿದ್ದು, ಯಶಸ್ವಿಯಾಗಿ ನಡೆಯುತ್ತಿದೆ. ಎಂದಿನಂತೆ ಸುದೀಪ್ ನಿರೂಪಣೆ ಎಲ್ಲರ ಫೇವರಿಟ್ ಆಗಿದ್ದು, ಕಿಚ್ಚನ ನಿರೂಪಣೆಗೆ ಔಟ್ ಆಫ್ ಔಟ್ ಸಿಕ್ಕಿದೆ. ಹಾಗೂ ಬಿಗ್ ಬಾಸ್ ಮನೆಯಲ್ಲಿರುವ ಎಲ್ಲಾ ಸ್ಪರ್ಧಿಗಳು ಈಗ ಜನರಿಗೆ ಚಿರಪರಿಚಿತರಾಗಿ ಹೋಗಿದ್ದು, ಕೆಲ ಬಿಗ್ ಬಾಸ್ ಸ್ಪರ್ದಿಗಳು ಎಲ್ಲರ ಫೇವರಿಟ್ ಆಗಿದ್ದಾರೆ. ಹೀಗಿರುವಾಗ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿದೆ.

 

 

ಬಿಗ್​ ಬಾಸ್​ ಮನೆಯಲ್ಲಿ ಇತ್ತೀಚೆಗಷ್ಟೇ ವೈಲ್ಡ್​ ಕಾರ್ಡ್​ ಎಂಟ್ರಿ ಬಗ್ಗೆ ಚರ್ಚೆ ಆಗಿತ್ತು. ಮನೆ ಒಳಗೆ ಬಂದವರನ್ನು ಪ್ರಶಾಂತ್​ ಸಂಬರಗಿ ತಮ್ಮೆಡೆ ಸೆಳೆದುಕೊಳ್ಳುತ್ತಾರೆ ಎನ್ನುವ ಮಾತು ಕೂಡ ಕೇಳಿ ಬಂದಿತ್ತು. ಈ ವಿಚಾರ ಇಟ್ಟುಕೊಂಡು ಮನೆಯವರೆಲ್ಲ ಜೋಕ್​ ಮಾಡಿಕೊಂಡು ನಕ್ಕಿದ್ದರು. ಇದಾದ ಬೆನ್ನಲ್ಲೇ ಬಿಗ್​ ಬಾಸ್​ ಮನೆಗೆ ವೈಲ್ಡ್​ ಕಾರ್ಡ್​ ಎಂಟ್ರಿ ಆಗಿದೆ.

ಬಿಗ್​ ಬಾಸ್​ ಮನೆಗೆ ಬಂದ ಹೊಸ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ ಎಂಬ ಮಾಹಿತಿ ಕೇಳಿಬಂದಿದೆ. ಪತ್ರಿಕೋದ್ಯಮದಿಂದ ತಮ್ಮ ವೃತ್ತಿ ಆರಂಭಿಸಿದ ಅವರು ನಂತರ ಚಿತ್ರರಂಗದಲ್ಲಿ ನಟ, ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರು. ಪ್ರಶಾಂತ್ ಸಂಭರ್ಗಿ ಅವರ ರೀತಿಯೇ ಚಂದ್ರಚೂಡ್ ಅವರು ಕೂಡ ಮಾತಿನಲ್ಲಿ ಎತ್ತಿದ ಕೈ. ತಮ್ಮ ವಾಕ್ಚಾತುರ್ಯದಿಂದಲೇ ಎದುರಾಗಿಗಳ ಮುಂದೆ ವಾದಗಳನ್ನ ಗೆಲ್ಲುವ ಚಂದ್ರಚೂಡ್ ಅವರು ಅಷ್ಟೇ ಜ್ಞಾನಿಯಾಗಿದ್ದಾರೆ.

ಹಾಗಾಗಿ ಚಕ್ರವರ್ತಿ ಚಂದ್ರಚೂಡ್‌ ಬಿಗ್‌ಬಾಸ್ ಮನೆಗೆ ಹೋದರೆ ಮಾತಿನಲ್ಲಿ ಪ್ರಶಾಂತ್ ಸಂಭರ್ಗಿ ಅವರಿಗೆ ಸ್ಪರ್ಧೆ ನೀಡಲಿದ್ದಾರೆ ಎನ್ನುವ ಲೆಕ್ಕಾಚಾರ ಅದಾಗಲೇ ಶುರುವಾಗಿದೆ. ಇಬ್ಬರ ನಡುವೆ ಒಂದಷ್ಟು ಮಾತಿನ ಸಮರವನ್ನ ನಿರೀಕ್ಷಿಸಬಹುದು. ಬಿಗ್ ಬಾಸ್ ಮನೆಯೊಳಕ್ಕೆ ವೈಲ್ಡ್ ಕಾರ್ಡ್ ಸ್ಪರ್ದಿ ಎಂಟ್ರಿ ಆಗಿರುವ ಎಪಿಸೋಡ್ ನ ಪ್ರೋಮೋಗಳು ಸದ್ಯ ಸದ್ಯ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿದ್ದು ವೀಕ್ಷಕರ ಕುತೂಹಲ ಹೆಚ್ಚಿಸಿದೆ. ಚಕ್ರವರ್ತಿ ಚಂದ್ರಚೂಡ್‌ ಬಿಗ್‌ಬಾಸ್‌ ಮನೆಗೆ ಆಗಮನದಿಂದ ಬಿಗ್‌ಬಾಸ್‌ ಮನೆಯಲ್ಲಿ ಏನೆಲ್ಲಾ ಬದಲಾವಣೆ ಆಗಲಿದ್ಯೋ ನೋಡೋಣ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top