fbpx
ಸಮಾಚಾರ

ಹಸೆ ಮಣೆ ಏರೋಕೆ ಸಿದ್ದವಾದ ಜೋಡಿ: ಇಂದು ಚಂದನ್- ಕವಿತಾ ವಿವಾಹ ನಿಶ್ಚಿತಾರ್ಥ

ಈ ಹಿಂದೆ ಲಕ್ಷ್ಮೀ ಬಾರಮ್ಮ ಸೀರಿಯಲ್ ನಲ್ಲಿ ಜೋಡಿಯಾಗಿ ನಟಿ ಖ್ಯಾತಿ ಗಳಿಸಿದ್ದ ನಟಿ ಕವಿತಾ ಗೌಡ ಹಾಗೂ ನಟ ಚಂದನ್ ಕುಮಾರ್ ಜೋಡಿ ಇದೀಗ ನಿಜ ಜೀವನದಲ್ಲೂ ಜೋಡಿಯಾಗಲು ಹೊರಟಿದ್ದಾರೆ. ಹೌದು.. ನಟಿ ಕವಿತಾ ಗೌಡ ಹಾಗೂ ನಟ ಚಂದನ್ ಕುಮಾರ್ ಮದುವೆಗೆ ಸಿದ್ಧರಾಗಿದ್ದು ಈ ಬಗ್ಗೆ ಸ್ವತಃ ನಟ ಚಂದನ್ ಕುಮಾರ್ ತಮ್ಮ ಫೇಸ್ ಬುಕ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

 

 

ವರ್ಷಗಳಿಂದ ಈ ಜೋಡಿ ಪ್ರೀತಿ ಮಾಡುತ್ತಿದೆ ಎಂದು ಹೇಳಲಾಗಿತ್ತು. ಈ ಬಗ್ಗೆ ಪ್ರಶ್ನೆ ಮಾಡಿದ್ದರೂ ಕೂಡ ಚಂದನ್ ಹಾಗೂ ಕವಿತಾ ನಾವಿಬ್ಬರೂ ಸ್ನೇಹಿತರು ಅಂತೆಲ್ಲ ಹೇಳಿದ್ದರು. ಇನ್ನು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡು ಚಂದನ್ ವ್ಯಂಗ್ಯ ಮಾಡಿದ್ದರು. ಇಷ್ಟೆಲ್ಲ ಆದನಂತರ ಈಗ ಚಂದನ್ ಕುಮಾರ್ ಅವರು ‘ಏಪ್ರಿಲ್ 1ಕ್ಕೆ ನಾವು ಮೂರ್ಖರಾಗುತ್ತಿದ್ದೇವೆ’ ಎಂಬ ಬರಹವಿರುವ ಕವಿತಾ ಗೌಡ ಜೊತೆಗಿನ ಫೋಟೋ ಹಂಚಿಕೊಂಡು ಪೋಸ್ಟ್ ಮಾಡಿದ್ದಾರೆ.

ಹಾಗಾದ್ರೆ ಇಂದು(ಏಪ್ರಿಲ್ 01) ಚಂದನ್ ಹಾಗೂ ಕವಿತಾ ಮದುವೆಯಾಗುತ್ತಿದ್ದಾರೆಯೋ ಅಥವಾ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆಯೋ ಇನ್ನೂ ತಿಳಿದಿಲ್ಲ. ಮೂಲಗಳ ಪ್ರಕಾರ ಇಂದು ಚಂದನ್​-ಕವಿತಾ ಎಂಗೇಜ್ಮೆಂಟ್​​ ನಡೆಯಲಿದ್ದು, ಆಪ್ತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಶಾಸ್ತ್ರಗಳು ನೆರವೇರಲಿವೆ ಅಂತ ನ್ಯೂಸ್​ ಫಸ್ಟ್​ಗೆ ಮೂಲಗಳು ತಿಳಿಸಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top