fbpx
ಸಮಾಚಾರ

“ನೀನಿಲ್ಲದೆ ನನ್ನ ಸಿನಿ ಪಯಣ ಅಪೂರ್ಣ” ರಕ್ಷಿತಾಗೆ ಪ್ರೀತಿಯ ಶುಭಾಶಯ ಕೋರಿದ ರಮ್ಯಾ

ರಮ್ಯಾ ಮತ್ತು ರಕ್ಷಿತಾ ಸ್ಯಾಂಡಲ್‌ವುಡ್‌ಗೆ ಬಹುತೇಕ ಒಟ್ಟಿಗೇ ಎಂಟ್ರಿ ಕೊಟ್ಟು ಒಟ್ಟೊಟ್ಟಿಗೇ ಟಾಪ್ ನಟಿಯರಾಗಿ ಬೆಳೆದವರು. ರಮ್ಯಾ ಮತ್ತು ರಕ್ಷಿತಾ ನಡುವೆ ನಂಬರ್ ಒನ್ ಯಾರು ಎಂಬ ಚರ್ಚೆ ಕೂಡ ಆಗಾಗ ಚಿತ್ರರಂಗದಲ್ಲಿ ನಡೆಯುತ್ತಿತ್ತು. ಇದೇ ಸಮಯದಲ್ಲಿ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುತ್ತಿರಲಿಲ್ಲ ಎನ್ನುವುದು ಸಹ ಗುಟ್ಟಾಗಿ ಉಳಿದಿಲ್ಲ. ಆದರೀಗ ಇಬ್ಬರು ಸ್ನೇಹಿತರಾಗಿದ್ದಾರೆ. ಅಲ್ಲದೆ ಇಂದು ರಕ್ಷಿತಾ ಹುಟ್ಟುಹಬ್ಬಕ್ಕೆ ರಮ್ಯಾ ವಿಶ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.

 

 

ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್‍ಗೆ ಸ್ಯಾಂಡಲ್‍ವುಡ್ ಕ್ವೀನ್ ರಮ್ಯಾ ವಿಶೇಷ ಫೋಟೋ ಹಂಚಿಕೊಂಡು ಶುಭಾಶಯ ತಿಳಿಸಿದ್ದಾರೆ. ರಕ್ಷಿತಾಗೆ ಹುಟ್ಟುಹಬ್ಬದ ಶುಭಾಶಯಗಳು. ನೀವು ಇಲ್ಲದೇ ನನ್ನ ಸಿನಿಮಾ ಪ್ರಯಾಣ ಅಪೂರ್ಣ. ಆ ದಿನಗಳೇ ತುಂಬಾ ಸುಂದರ. ಇಂದು ಮತ್ತು ಯಾವಾಗಲೂ ಎಲ್ಲರ ಪ್ರೀತಿಗೆ ನಿಮಗೆ ಸಿಗಲಿ ಎಂದು ಹಾರೈಸುತ್ತೇನೆ. ಈ ದಿನ ಮತ್ತಷ್ಟು ಸುಂದರವಾಗಿರಲಿ ಎಂದು ಹಾರೈಸಿದ್ದಾರೆ. ಇಬ್ಬರು ಜೊತೆಯಾಗಿ ಕುಳಿತು ಕ್ಲಿಕ್ಕಿಸಿಕೊಂಡಿರುವ ಹಳೆಯ ಫೋಟೋವನ್ನ ರಮ್ಯಾ ಶೇರ್ ಮಾಡಿಕೊಂಡಿದ್ದಾರೆ.

ಪುನೀತ್ ರಾಜ್‌ಕುಮಾರ್ ನಟನೆಯ ‘ಅಪ್ಪು’ ಸಿನಿಮಾದಿಂದ ರಕ್ಷಿತಾ ಎಂಟ್ರಿ ಕೊಟ್ಟರೆ, ಪುನೀತ್ ನಟನೆಯ 2ನೇ ಸಿನಿಮಾ ‘ಅಭಿ’ಯಿಂದ ರಮ್ಯಾ, ನಟಿಯಾಗಿ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದರು. ಆರಂಭದಲ್ಲಿ ಈ ಇಬ್ಬರು ನಟಿಯರ ನಡುವೆ ಎಲ್ಲವೂ ಸರಿ ಇಲ್ಲ ಎಂಬಂತಹ ಮಾತುಗಳು ಕೇಳಿಬಂದಿದ್ದವು. ಆದರೆ ‘ತನನಂ ತನನಂ’ ಚಿತ್ರದಲ್ಲಿ ಇಬ್ಬರು ಒಟ್ಟಿಗೆ ನಟಿಸಿ, ಎಲ್ಲರ ಗಮನಸೆಳೆದರು. ಈಗಲೂ ಅವರಿಬ್ಬರ ನಡುವೆ ಒಳ್ಳೆಯ ಒಡನಾಟ ಇದೆ. ಅದಕ್ಕೆ ರಕ್ಷಿತಾಗೆ ರಮ್ಯಾ ತಿಳಿಸಿರುವ ಈ ಶುಭಾಶಯವೇ ಸಾಕ್ಷಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top