fbpx
ಸಮಾಚಾರ

ಏಪ್ರಿಲ್ 03: ಇಂದಿನ ಪಂಚಾಂಗ ಮತ್ತು ದಿನ ಭವಿಷ್ಯ

ಏಪ್ರಿಲ್ 3, 2021 ಶನಿವಾರ
ವರ್ಷ : 1942 ಶಾರ್ವರಿ
ತಿಂಗಳು : ಫಾಲ್ಗುಣ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ಸಪ್ತಮೀ 4:12 am
ನಕ್ಷತ್ರ : ಮೂಲ 2:38 am
ಯೋಗ : ವರಿಘ 8:58 pm
ಕರಣ : ವಿಷ್ಟಿ 5:01 pm ಬಾವ 4:12 am

Time to be Avoided
ರಾಹುಕಾಲ : 9:20 am – 10:51 am
ಯಮಗಂಡ : 1:54 pm – 3:25 pm
ದುರ್ಮುಹುರ್ತ : 6:17 am – 7:06 am, 7:06 am – 7:55 am
ವಿಷ : 11:22 am – 12:53 pm, 12:00 am – 2:38 am
ಗುಳಿಕ : 6:17 am – 7:49 am

Good Time to be Used
ಅಮೃತಕಾಲ : 8:32 pm – 10:03 pm
ಅಭಿಜಿತ್ : 11:58 am – 12:47 pm

Other Data
ಸೂರ್ಯೋದಯ : 6:14 am
ಸುರ್ಯಾಸ್ತಮಯ : 6:31 pm
ರವಿರಾಶಿ : ಮೀನ
ಚಂದ್ರರಾಶಿ : ಧನುಸ್

 

 

 

ಮೇಷ (Mesha)

 

ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಕಚೇರಿಯ ಕೆಲಸ ಕಾರ್ಯಗಳು ಯಾವುದೇ ಅಡೆತಡೆಯಿಲ್ಲದೆ ಸರಾಗವಾಗಿ ನಡೆಯುವುದು. ಸಾಮಾಜಿಕವಾಗಿ ಮಾನ ಸನ್ಮಾನಗಳು ಆಗುವವು. ನಿಮ್ಮ ಮನೆತನದ ಗೌರವ ಹೆಚ್ಚಲಿದೆ. ಹಣಕಾಸು ವಿವಿಧ ರೀತಿಯಿಂದ ಒದಗಿ ಬರುವುದು.

 

ವೃಷಭ (Vrushabha)

ಭೂಮಿಗೆ ಸಂಬಂಧಿಸಿದ ಮಾತುಕತೆಯಲ್ಲಿ ನಿಮ್ಮದೇ ಜಯ. ಆರೋಗ್ಯದ ಸಲುವಾಗಿ ಆದಿತ್ಯ ಹೃದಯ ಪಾರಾಯಣ ಮಾಡಿರಿ. ಮತ್ತು ದಿನವೂ ತಪ್ಪದೆ ಸೂರ್ಯ ನಮಸ್ಕಾರವನ್ನು ಮಾಡಿರಿ. ಸಂಗಾತಿಯ ಸಲಹೆಯನ್ನು ಸ್ವೀಕರಿಸುವುದು ಉತ್ತಮ.

 

ಮಿಥುನ (Mithuna)

ಆರೋಗ್ಯವೇ ಭಾಗ್ಯ. ಆರೋಗ್ಯದ ಕಡೆ ಅಲಕ್ಷ್ಯ ಸಲ್ಲದು. ಬಂಧುಬಾಂಧವರ ಮತ್ತು ಹಿತೈಷಿಗಳ ಮಾತನ್ನು ಆಲಿಸಿರಿ. ಈ ದಿನ ಹಣವು ಬಂದ ವೇಗದಲ್ಲಿಯೇ ಖರ್ಚಾಗಿ ಹೋಗುವ ಸಂದರ್ಭವಿರುತ್ತದೆ.

 

ಕರ್ಕ (Karka)

ಯಾವಾಗಲೂ ಎಲ್ಲರೊಂದಿಗೆ ಬೆರೆಯುವ ಸಹವಾಸಪ್ರಿಯರು. ಮತ್ತು ಮಾತಿನ ಮೋಡಿಯಿಂದ ಜನರನ್ನು ಬಹಳ ಬೇಗ ನಿಮ್ಮತ್ತ ಸೆಳೆದುಕೊಳ್ಳುವಿರಿ. ನೀವು ಇಂದು ವಿವಿಧ ಬಗೆಯ ಜನರ ಸಂಪರ್ಕದಿಂದ ಸಂತೋಷಪಡುವಿರಿ. ಹಿತೈಷಿಗಳಿಂದ ಮನಸ್ಸಿಗೆ ನೆಮ್ಮದಿ ಉಂಟಾಗುವುದು.

 

ಸಿಂಹ (Simha)

ಆರ್ಥಿಕವಾಗಿ ಅತ್ಯಂತ ಸುಭದ್ರ ಸ್ಥಿತಿಯನ್ನು ಇಂದು ತಲುಪಲಿದ್ದೀರಿ. ನಿಮಗೆ ಬರಬೇಕಾದ ಹಣವು ನಿಮ್ಮ ಕೈಸೇರುವುದು. ಐಷಾರಾಮಿ ವಸ್ತುಗಳ ಖರೀದಿಗಿಂತ ಉಳಿತಾಯ ಮಾಡುವುದು ಕ್ಷೇಮಕರ. ಆರೋಗ್ಯವು ಕೂಡಾ ಉತ್ತಮವಾಗಿರುವುದು.

 

ಕನ್ಯಾರಾಶಿ (Kanya)

ಮಹತ್ವದ ಯೋಜನೆಯೊಂದನ್ನು ಪೂರ್ಣಗೊಳಿಸಲು ಒಳ್ಳೆಯ ತಿಳಿವಳಿಕೆವುಳ್ಳ ಸ್ನೇಹಿತನನ್ನು ಆಯ್ಕೆ ಮಾಡಿಕೊಳ್ಳುವಿರಿ. ಕೆಲವರು ನಿಮ್ಮ ಕೆಲಸ ಕಾರ್ಯಗಳಲ್ಲಿ ಅನಾವಶ್ಯಕ ಮೂಗು ತೂರಿಸಿಕೊಂಡು ಬರುವರು. ಅವರ ಬಗ್ಗೆ ಹೆಚ್ಚಿನ ಗಮನ ಕೊಡದೆ ಇರುವುದು ಒಳ್ಳೆಯದು.

 

ತುಲಾ (Tula)

ಜನರೊಂದಿಗೆ ವ್ಯವಹರಿಸುವಾಗ ಎಚ್ಚರ ಇರಲಿ. ವಿಶೇಷವಾಗಿ ಮಾತಿನ ಮೇಲೆ ನಿಗಾ ಇಡಿ. ಮಾತೇ ಮುತ್ತು ಮಾತೇ ಶತ್ರು ಎನ್ನುವಂತೆ ಕೆಲವೊಮ್ಮೆ ನೀವು ಆಡುವ ಮಾತು ವಿಕೋಪಕ್ಕೆ ಹೋಗುವುದು. ಕೌಟುಂಬಿಕವಾಗಿ ನೆಮ್ಮದಿಯ ದಿನ.

 

ವೃಶ್ಚಿಕ (Vrushchika)

ನಿಮ್ಮ ಬಾಳಸಂಗಾತಿಯ ಆರೋಗ್ಯದಲ್ಲಿ ಚೇತರಿಕೆ ಕಂಡುಬರುವುದು. ಮಕ್ಕಳು ನಿಮಗೆ ಸಂತಸ ನೀಡಲಿದ್ದಾರೆ. ಕೌಟುಂಬಿಕ ನೆಮ್ಮದಿ ನಿಮಗೆ ಹರ್ಷವನ್ನುಂಟು ಮಾಡಲಿದೆ. ಗುರು ಹಿರಿಯರ ಆಶೀರ್ವಾದವನ್ನು ಪಡೆಯಿರಿ.

 

ಧನು ರಾಶಿ (Dhanu)

ನೀವು ಈ ದಿನ ಹಮ್ಮಿಕೊಳ್ಳುವ ಕಾರ್ಯಗಳಲ್ಲಿ ಅಡೆತಡೆ ಉಂಟಾಗುವುದರಿಂದ ಮಹತ್ತರ ಕಾರ್ಯಗಳನ್ನು ಮುಂದೂಡುವುದು ಒಳ್ಳೆಯದು. ಬಾಕಿ ಬರಬೇಕಾಗಿದ್ದ ಹಣಕಾಸು ಕೂಡಾ ಈದಿನ ನಿಮ್ಮ ಕೈಸೇರದೆ ಇರುವ ಸಾಧ್ಯತೆ. ಕುಲದೇವರನ್ನು ಭಜಿಸಿರಿ.

 

ಮಕರ (Makara)

ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಕಚೇರಿಯ ಕೆಲಸ ಕಾರ್ಯಗಳು ಯಾವುದೇ ಅಡೆತಡೆಯಿಲ್ಲದೆ ಸರಾಗವಾಗಿ ನಡೆಯುವುದು. ಸಾಮಾಜಿಕವಾಗಿ ಮಾನ ಸನ್ಮಾನಗಳು ಆಗುವವು. ನಿಮ್ಮ ಮನೆತನದ ಗೌರವ ಹೆಚ್ಚಲಿದೆ. ಹಣಕಾಸು ವಿವಿಧ ರೀತಿಯಿಂದ ಒದಗಿ ಬರುವುದು.

 

ಕುಂಭರಾಶಿ (Kumbha)

ಕೆಲವರಿಗೆ ವೃತ್ತಿಯಲ್ಲಿ ಬದಲಾವಣೆ ಇಲ್ಲವೆ ಮನೆ ಬದಲಿಸುವ ಯೋಚನೆ ಬರುವುದು. ಮಾಡುವ ಕೆಲಸದಲ್ಲಿ ಶ್ರದ್ಧೆಯಿರಲಿ. ನಿಮ್ಮ ಚಿಂತನೆ ಧನಾತ್ಮಕವಾಗಿದ್ದಷ್ಟು ಹೆಚ್ಚು ಲಾಭವನ್ನು ಹೊಂದಬಲ್ಲಿರಿ. ಆರ್ಥಿಕ ಮುಗ್ಗಟ್ಟು ಉಂಟಾಗುವುದು.

 

ಮೀನರಾಶಿ (Meena)

ವಿವಾಹಕ್ಕೆ ಯೋಗ್ಯ ವಧು-ವರರಿಗೆ ಕಂಕಣಭಾಗ್ಯ ಕೂಡಿಬರುವುದು. ಇಲ್ಲವೆ ಮದುವೆ ಮಾತುಕತೆಗಳು ಫಲಪ್ರದವಾಗುವುದು. ನೂತನ ಗೆಳೆಯರ ಭೇಟಿಯು ಜೀವನದ ಉತ್ಸಾಹವನ್ನು ಹೆಚ್ಚಿಸುವುದು. ಹಣವು ಬಂದ ವೇಗದಲ್ಲಿಯೇ ಖರ್ಚಾಗಿ ಹೋಗುವ ಸಂದರ್ಭವಿರುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top