fbpx
ಸಮಾಚಾರ

ಕವಿತಾ ಗೌಡ, ಚಂದನ್ ಕುಮಾರ್ ನಿಶ್ಚಿತಾರ್ಥದ ಸಂಭ್ರಮ: ಫೋಟೋಗಳು ಇಲ್ಲಿವೆ

ಕಿರುತೆರೆಯ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದ ಚಂದನ್ ಕುಮಾರ್ ಮತ್ತು ಕವಿತಾ ಗೌಡ ಜೋಡಿ ಇದೀಗ ರಿಯಲ್ ಲೈಫ್​ನಲ್ಲಿಯೂ ಒಂದಾಗಿದೆ. ಗುರುವಾರ ನಗರದ ಖಾಸಗಿ ಸಭಾಂಗಣದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತಾರ್ಥ ನೆರವೇರಿಸಿಕೊಂಡು ತಮ್ಮ ಬಹುವರ್ಷಗಳ ಪ್ರೀತಿಗೆ ಅಧಿಕೃತ ಮುದ್ರೆ ಒತ್ತಿದ್ದಾರೆ.

 

 

ಕಿರುತೆರೆ ಪ್ರೇಕ್ಷಕರ ವಲಯದಲ್ಲಿ ಸಖತ್​ ಜನಪ್ರಿಯವಾಗಿದ್ದ ‘ಲಕ್ಷ್ಮೀ ಬಾರಮ್ಮ’ ಸೀರಿಯಲ್​ನಲ್ಲಿ ಚಂದನ್​ ಕುಮಾರ್​ ಮತ್ತು ಕವಿತಾ ಜೋಡಿಯಾಗಿ ನಟಿಸಿದ್ದರು. ಆಗಿನಿಂದಲೇ ಅವರಿಬ್ಬರ ನಡುವೆ ಸ್ನೇಹ ಚಿಗುರಿತ್ತು. ನಂತರದ ದಿನಗಳಲ್ಲಿ ಅವರಿಬ್ಬರ ಆಪ್ತತೆ ಹೆಚ್ಚಾಯಿತು. ಆದರೆ ಎಂದೂ ಕೂಡ ಅವರು ತಮ್ಮ ಪ್ರೀತಿ ಬಗ್ಗೆ ಬಾಯಿ ಬಿಟ್ಟಿರಲಿಲ್ಲ. ಹಾಗಿದ್ದರೂ ನೆಟ್ಟಿಗರಿಗೆ ಗುಮಾನಿ ಶುರುವಾಗಿತ್ತು.

 

 

ಇತ್ತೀಚೆಗೆ ಹೊಸ ಪೋಸ್ಟ್​ ಹಾಕಿಕೊಳ್ಳುವ ಮೂಲಕ ಎಂಗೇಜ್​ಮೆಂಟ್​ ಮಾಡಿಕೊಳ್ಳುತ್ತೇನೆ ಎಂದಿದ್ದರು. ಅಂತೆಯೇ ಏಪ್ರಿಲ್​ 1ರಂದೇ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಇನ್ನು ಈ ಜೋಡಿಯ ಮಾಡುವೆ ಇದೇ ಮೇ ತಿಂಗಳಿನಲ್ಲಿ ನಡೆಯಲಿದೆ ಎಂದು ಹೇಳಲಾಗಿದ್ದು ಇನ್ನೂ ಅಧಿಕೃತ ದಿನಾಂಕ ಹೊರಬಿದ್ದಿಲ್ಲ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top