fbpx
ಸಮಾಚಾರ

ಕೊರಗಜ್ಜನ ಕಾಣಿಕೆ ಹುಂಡಿಗೆ ಕಾಂಡೋಮ್ ಹಾಕಿದ್ದ ದುಷ್ಕರ್ಮಿ ರಕ್ತಕಾರಿ ಸಾವು: ಇನ್ನಿಬ್ಬರು ಪೊಲೀಸ್ ವಶಕ್ಕೆ

ಕರಾವಳಿಯ ದೈವಗಳು ಮತ್ತೆ ತಮ್ಮ ಕಾರಣಿಕ ಶಕ್ತಿಯನ್ನು ತೋರಿಸಿವೆ. ದೈವಸ್ಥಾನದ ಕಾಣಿಕೆ ಹುಂಡಿಗೆ ಅಪಚಾರ ಎಸಗಿದವರು ಕೋಲಾದಲ್ಲಿ ಶರಣಾಗಿದ್ದಾರೆ. ಮಂಗಳೂರಿನ ಎಮ್ಮೆಕೆರೆಯ ಕೋಟೆದ ಬಬ್ಬುಸ್ವಾಮಿ ದೈವಸ್ಥಾನದ ಕಾಣಿಕೆ ಹುಂಡಿಗೆ ಕಾಂಡೋಮ್, ಅಶ್ಲೀಲ ಬರಹದ ಚೀಟಿ ಹಾಕಿ ದುಷ್ಕರ್ಮಿಗಳು ಅಪಚಾರ ಎಸಗಿದ್ದರು.

ಕೊರಗಜ್ಜ ದೈವಸ್ಥಾನವನ್ನು ಅಪವಿತ್ರಗೊಳಿಸಿದ ಪ್ರಕರಣದ ಆರೋಪಿ ಜೋಕಟ್ಟೆಯ ನವಾಜ್‌ ಈಚೆಗೆ ಅನಾರೋಗ್ಯದಿಂದ ಮೃತಪಟ್ಟಿದ್ದು, ಇನ್ನಿಬ್ಬರು ಆರೋಪಿಗಳಾದ ಜೋಕಟ್ಟೆಯ ರಹೀಂ ಮತ್ತು ತೌಫಿಕ್‌ ಬುಧವಾರ ಇಲ್ಲಿನ ಎಮ್ಮೆಕರೆ ದೈವಸ್ಥಾನದಲ್ಲಿ ಸ್ವತಃ ತಪ್ಪೊಪ್ಪಿಗೆ ನೀಡಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

ದೈವಾರಾಧನೆಯ ‘ಸ್ವಾಮಿ ಕೊರಗಜ್ಜ’ ದೈವಸ್ಥಾನಗಳು ಕರಾವಳಿಯಲ್ಲಿ ಹಲವು ಇದ್ದು, ಕಾರ್ಣಿಕ (ಮಹಿಮೆ) ಕ್ಷೇತ್ರಗಳು ಎಂದೇ ಪ್ರಸಿದ್ಧಿ ಪಡೆದಿವೆ. ಈ ಪೈಕಿ ಕೆಲವು ಕ್ಷೇತ್ರಗಳ ಕಾಣಿಕೆ ಹುಂಡಿಗೆ ಅಶ್ಲೀಲ ಬರಹ, ಆಕ್ಷೇಪಾರ್ಹ ವಸ್ತುಗಳನ್ನು ಹಾಕಲಾಗಿತ್ತು. ಎಮ್ಮೆಕೆರೆ ‘ನೇಮೋತ್ಸವ’ (ಆರಾಧನಾ ಮಹೋತ್ಸವ)ಕ್ಕೆ ಬುಧವಾರ ಸ್ವತಃ ಬಂದ ರಹೀಂ ಮತ್ತು ತೌಫಿಕ್‌ ತಪ್ಪೊಪ್ಪಿಗೆ ನೀಡಿದ್ದಾರೆ.

 

ಈ ಬಗ್ಗೆ ಮಾಹಿತಿ ನೀಡಿರುವ ನಗರ ಪೊಲೀಸ್‌ ಕಮಿಷನರ್ ಶಶಿಕುಮಾರ್ ಎನ್., ‘ಸ್ವಾಮಿ ಕೊರಗಜ್ಜ ದೈವಸ್ಥಾನಗಳನ್ನು ಅಪವಿತ್ರಗೊಳಿಸಿದ ಬಗ್ಗೆ ಕಳೆದ ಮೂರು ತಿಂಗಳಲ್ಲಿ ನಗರದ ಪಾಂಡೇಶ್ವರ, ಉಳ್ಳಾಲ ಮತ್ತು ಕದ್ರಿ ಪೊಲೀಸ್‌ ಠಾಣೆಗಳಲ್ಲಿ ಐದು ಪ್ರಕರಣಗಳು ದಾಖಲಾಗಿದ್ದವು. ರಹೀಂ ಹಾಗೂ ತೌಫಿಕ್ ಕೆಲ ದಿನಗಳ ಹಿಂದೆ ಎಮ್ಮೆಕೆರೆ ದೈವಸ್ಥಾನದ ಪೂಜಾರಿ (ಅರ್ಚಕ) ಅವರನ್ನು ಸಂಪರ್ಕಿಸಿದ್ದು, ಬುಧವಾರ ತಪ್ಪೊಪ್ಪಿಗೆ ನೀಡಿದ್ದಾರೆ. ಬಳಿಕ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಲಾಗುತ್ತಿದೆ’ ಎಂದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top