fbpx
ಸಮಾಚಾರ

ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿಕೊಟ್ಟ “ಖುಷಿ ಯಾರಿಗೆ ಬೇಡ” ಖ್ಯಾತಿಯ ಧೂಮಪಾನ ನಿಷೇಧದ ಜಾಹಿರಾತಿನ ಹುಡುಗಿ

ಸಾಮಾನ್ಯವಾಗಿ ಜಾಹಿರಾತುಗಳು ನೋಡುಗರಿಗೆ ಕಿರಿಕಿರಿ ಉಂಟುಮಾಡಿದರೂ ಕೆಲವು ಜಾದು ಮಾಡಿದಂತೆ ನೋಡುಗರ ಮನಸಿನಲ್ಲೇ ಉಳಿದುಕೊಂಡುಬಿಡುತ್ತವೆ ಅವುಗಳ ಸಾಲಿಗೆ ಪ್ರತಿ ಥಿಯೇಟರ್’ಗಳಲ್ಲೂ ಸಿನಿಮಾ ಪ್ರಾರಂಭವಾಗುವುದಕ್ಕೂ ಮುನ್ನ ಪ್ರಸಾರವಾಗುವ “ಧೂಮ್ರಪಾನ ಮಾಡದಿರಿ ಮಾಡಲು ಬಿಡದಿರಿ” ಎಂಬ ಘೋಷವಾಕ್ಯದ ಧೂಮಪಾನ ಮಾಡಬಾರದು ಎಂದು ಸಂದೇಶ ಸಾರುವ ಜಾಹಿರಾತು ಕೂಡ ಒಂದು.. ಈಗ ಏಕೆ ಆ ವಿಚಾರ ಅಂತೀರಾ? ವಿಷ್ಯ ಇದೆ. ಆ ಜಾಹಿರಾತುವಿನಲ್ಲಿ ಒಂದು ಪುಟ್ಟ ಹುಡುಗಿ ಇರ್ತಾಳಲ್ಲ ಆಕೆ ಈಗ ಬೆಳೆದಿದ್ದು? ಸದ್ಯ ಈಕೆ ಸಿನಿಮಾ ಹೀರೋಯಿನ್ ಆಗುತ್ತಿದ್ದಾಳೆ ಅದೂ ಕೂಡ ನಮ್ಮ ಕನ್ನಡ ಚಿತ್ರಕ್ಕೆ!

 

 

ಅದರಲ್ಲಿ ಕಾಣಿಸಿಕೊಂಡಿದ್ದ ಪುಟಾಣಿಯ ಹೆಸರು ಸಿಮ್ರಾನ್‌. ಅದೇ ಸಿಮ್ರಾನ್‌ ಈಗ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಕನ್ನಡದ ಸಿನಿಮಾವೊಂದಕ್ಕೆ ಸಿಮ್ರಾನ್ ಈಗ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಅಂದಹಾಗೆ, ಅವರ ಪೂರ್ಣ ಹೆಸರು ಸಿಮ್ರಾನ್ ನಾಟೇಕರ್‌! ಮೂಲತಃ ಮುಂಬೈನವರಾದ ಸಿಮ್ರಾನ್ ಸಾಕಷ್ಟು ಜಾಹೀರಾತುಗಳಲ್ಲಿ ಅಭಿನಯಿಸಿದ್ದಾರೆ. ಇದೇ ಮೊದಲ ಬಾರಿಗೆ ‘ಬರ್ಕ್ಲಿ’ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಕನ್ನಡ ಸಿನಿರಂಗ ಪ್ರವೇಶಿಸಿದ್ದಾರೆ.

ಈ ಹಿಂದೆ ಕರಿಯ, ಗಣಪ, ಕರಿಯ ೨, ಅದ್ದೂರಿ ಚಿತ್ರಗಳನ್ನು ನಿರ್ಮಿಸಿರುವ ಅನುಭವ ಆನೇಕಲ್ ಬಾಲರಾಜ್ ಅವರಿಗಿದೆ. ಈಗ ಅವರು ಬರ್ಕ್ಲಿ ಚಿತ್ರವನ್ನು ನಿರ್ಮಾಣ ಮಾಡುವ ಜವಾಬ್ದಾರಿ ಹೊತ್ತಿದ್ದಾರೆ. ವಸಿಷ್ಠ ಸಿಂಹ ಅಭಿನಯದ ಕಾಲಚಕ್ರ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿರುವ ಸುಮಂತ್ ಕ್ರಾಂತಿ ಈ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಇವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರೋದು ವಿಶೇಷ. ಗಣಪ, ಕರಿಯ 2 ಚಿತ್ರಗಳಲ್ಲಿ ನಟಿಸಿ ಖ್ಯಾತಿಗಳಿಸಿರುವ ಸಂತೋಷ್ ಬಾಲರಾಜ್ ಈ ಚಿತ್ರಕ್ಕೆ ಹೀರೋ. ಚರಣರಾಜ್, ಖ್ಯಾತ ನಟಿ ಶೃತಿ, ಬಲ ರಾಜವಾಡಿ , ಬುಲೆಟ್ ಪ್ರಕಾಶ್ ಮುಂತಾದವರ ತಾರಾಬಳಗ ಈ ಚಿತ್ರದಲ್ಲಿದೆ.

“ನಾನು ಇತ್ತೀಚೆಗೆ ಥಿಯೇಟರ್ ನಲ್ಲಿ ಸಿನಿಮಾವೊಂದನ್ನು ನೋಡುತ್ತಿದ್ದಾಗ ಧೂಮಪಾನದ ಜಾಹೀರಾತಿನಲ್ಲಿ ಕಂಡ ಆ ಹುಡುಗಿ ಈಗ ಹೇಗಿರಬಹುದು ಅಂತ ಹುಡುಕಿದಾಗ ಆಕೆ ಹೆಸರು, ಊರು ಎಲ್ಲಾ ವಿಚಾರಗಳು ತಿಳಿಯಿತು… ಇವಳನ್ನು ನಮ್ಮ ಚಿತ್ರಕ್ಕೆ ಯಾಕೆ ಹೀರೋಯಿನ್ ಆಗಿ ಮಾಡಬಾರದು ಎಂದು ಯೋಚಿಸಿ ನಾನೇ ಮುಂಬೈಗೆ ಹೋಗಿ ಸಿಮ್ರಾನ್ ನಟೇಕರ್ ಬಳಿ ಮಾತುಕತೆ ನಡೆಸಿದೆ.. ಆದರೆ ಈಗಾಗಲೇ ಆಕೆ ಒಂದೆರೆಡು ಕತೆಗಳನ್ನು ಕೇಳಿ ಒಪಿಕೊಂಡಿಬಿಟ್ಟಿದ್ದಳು, ನಂತರ ಅವರ ತಾಯಿಯನ್ನು ಭೇಟಿ ಮಾಡಿ ನಾನೇ ಕತೆ ಹೇಳಿದ ನಂತರ ಕತೆಯನ್ನು ಅವರು ತುಂಬಾ ಇಷ್ಟ ಪಟ್ರು. ನನ್ನ ಚಿತ್ರವನ್ನು ಒಪ್ಪಿಕೊಂಡರು.’ ಎನ್ನುತ್ತಾರೆ ನಿರ್ದೇಶಕ ಸುಮಂತ್ ಕ್ರಾಂತಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top