fbpx
ಸಮಾಚಾರ

‘LBW ಅಂಪೈರ್ಸ್ ಕಾಲ್‌’ ನಿಯಮದಲ್ಲಿ ಕೊಂಚ ಬದಲಾವಣೆ: 3 ಮಹತ್ವದ ಬದಲಾವಣೆಗೆ ಮುಂದಾದ ಐಸಿಸಿ

ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಸೇರಿದಂತೆ ವಿಶ್ವದ ಹಲವು ಅಗ್ರ ಕ್ರಿಕೆಟಿಗರಿಂದ ಆಕ್ಷೇಪ ವ್ಯಕ್ತವಾಗಿದ್ದರೂ, ಅಂಪೈರ್‌ ತೀರ್ಪು ಮೇಲ್ಮನವಿ ಪದ್ಧತಿ (ಡಿಆರ್‌ಎಸ್‌) ವ್ಯವಸ್ಥೆಯಲ್ಲಿ ‘ಅಂಪೈರ್ಸ್ ಕಾಲ್‌’ ನಿಯಮ ರದ್ದುಗೊಳಿಸದಿರಲು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ನಿರ್ಧರಿಸಿದೆ. ಆದರೆ ಎಲ್‌ಬಿಡಬ್ಲ್ಯು ಮೇಲ್ಮನವಿ ವಿಚಾರದಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ.

 

 

ಐಸಿಸಿ ಕ್ರಿಕೆಟ್ ಕಮಿಟಿ ಮುಖ್ಯಸ್ಥ, ಭಾರತದ ಮಾಜಿ ನಾಯಕ-ಕನ್ನಡಿಗ ಅನಿಲ್ ಕುಂಬ್ಳೆ ಮುಂದಾಳತ್ವದಲ್ಲಿ ಬುಧವಾರ ಐಸಿಸಿ ಸಭೆ ನಡೆದಿದೆ. ಈ ಸಭೆಯಲ್ಲಿ ಡಿಆರ್‌ಎಸ್‌ಗೆ ಸಂಬಂಧಿಸಿ ಮಹತ್ವದ ತೀರ್ಮಾನಗಳನ್ನು, ಬದಲಾವಣೆಗಳನ್ನು ತಿಳಿಸಲಾಗಿದೆ. ಸಭೆಯಲ್ಲಿ ಅಂಪೈರ್ಸ್ ಕಾಲ್ ಮುಂದುವರೆಸಲು ಮತ್ತು ಸ್ಟಂಪ್‌ನ ಎತ್ತರ ಹೆಚ್ಚಿಸಲು ತೀರ್ಮಾನ ಕೈಗೊಳ್ಳಲಾಗಿದೆ.

ಮೂರು ಬದಲಾವಣೆಗಳು:
1.ಹಾಲಿ ನಿಯಮದ ಪ್ರಕಾರ ಎಲ್‍ಬಿಡಬ್ಲ್ಯುಗೆ ಸಂಬಂಧಿಸಿದಂತೆ ಡಿಆರ್‍ಎಸ್ ತೆಗೆದುಕೊಳ್ಳುವಾಗ ಚೆಂಡು ಬೇಲ್ಸ್‌ನ ಕೆಳಭಾಗಕ್ಕೆ ಬಡಿಯುವಂತಿದ್ದರೆ ಆಗ ಅದು ಅಂಪೈರ್ಸ್ ಕಾಲ್ ವ್ಯಾಪ್ತಿಗೆ ಬರುತ್ತದೆ. ಆದರೆ ಈಗ ಚೆಂಡು ಬೇಲ್ಸ್ ಮೇಲ್ಭಾಗಕ್ಕೆ ಬಡಿಯುತ್ತದೆ ಎಂದು ಖಾತ್ರಿಯಾದರೂ ಅದನ್ನು ಅಂಪೈರ್ಸ್ ಕಾಲ್ ವ್ಯಾಪ್ತಿಗೆ ಸೇರಿಸಲು ಮುಂದಾಗಿದೆ.

2. ಎಲ್‍ಬಿಡಬ್ಲ್ಯುಗೆ ಸಂಬಂಧಿಸಿ ಅಂಪೈರ್‌ಗೆ ಮನವಿ ಸಲ್ಲಿಸುವುದಕ್ಕೂ ಮೊದಲು ಬ್ಯಾಟ್ಸ್‌ಮನ್‌ ನಾನು ಹೊಡೆತಕ್ಕೆ ಮುಂದಾಗಿದ್ದೇನೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ಅವಕಾಶ ನೀಡಲಾಗಿದೆ.

3. ಬ್ಯಾಟ್ಸ್‌ಮನ್‌ಗಳು ರನ್ ಓಡುವ ಸಂದರ್ಭದಲ್ಲಿ ಕ್ರೀಸ್ ಮುಟ್ಟಿದ್ದಾರೋ ಇಲ್ಲವೋ ಎನ್ನುವುದನ್ನು 3ನೇ ಅಂಪೈರ್ ಖಚಿತ ಪಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಒಂದು ವೇಳೆ ಓಡುವ ಭರದಲ್ಲಿ ಕ್ರೀಸ್‍ಮುಟ್ಟದೇ ಇದ್ದಾಗ 3ನೇ ಅಂಪೈರ್ ಫೀಲ್ಡ್ ಅಂಪೈರ್ ಜೊತೆ ಸಂವಹನ ನಡೆಸಿ ರನ್ ಕಡಿತಗೊಳಿಬಹುದಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top