fbpx
ಸಮಾಚಾರ

ಏಪ್ರಿಲ್ 04: ನಾಳೆಯ ಪಂಚಾಂಗ ಮತ್ತು ದಿನ ಭವಿಷ್ಯ

ಏಪ್ರಿಲ್ 4, 2021 ಭಾನುವಾರ
ವರ್ಷ : 1942 ಶಾರ್ವರಿ
ತಿಂಗಳು : ಫಾಲ್ಗುಣ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ಅಷ್ಟಮೀ 2:59 am
ನಕ್ಷತ್ರ : ಪೂರ್ವಾಷಾಢ 2:05 am
ಯೋಗ : ಪರಿಘ 6:43 pm
ಕರಣ : ಬಾಲವ 3:31 pm ಕುಲವ 2:59 am

Time to be Avoided
ರಾಹುಕಾಲ : 4:56 pm – 6:27 pm
ಯಮಗಂಡ : 12:22 pm – 1:53 pm
ದುರ್ಮುಹುರ್ತ : 4:50 pm – 5:39 pm
ವಿಷ : 12:01 pm – 1:35 pm
ಗುಳಿಕ : 3:25 pm – 4:56 pm

Good Time to be Used
ಅಮೃತಕಾಲ : 9:24 pm – 10:58 pm
ಅಭಿಜಿತ್ : 11:58 am – 12:46 pm

Other Data
ಸೂರ್ಯೋದಯ : 6:13 am
ಸುರ್ಯಾಸ್ತಮಯ : 6:31 pm
ರವಿರಾಶಿ : ಮೀನ
ಚಂದ್ರರಾಶಿ : ಧನುಸ್

 

 

 

ಮೇಷ (Mesha)

 

ನಿಮ್ಮ ಪ್ರತಿಭೆಯಿಂದ ಜನರ ಗಮನ ಸೆಳೆದು ಯಶಸ್ಸನ್ನು ಹೊಂದಲು ಒಳ್ಳೆಯ ಅವಕಾಶಗಳು ಇವೆ. ನಿಮ್ಮ ನಿರೀಕ್ಷೆಯಂತೆಯೆ ಎಲ್ಲ ಸಾಗುವುದರಿಂದ ಮನಸ್ಸಿಗೆ ಸಂತೋಷವುಂಟಾಗುತ್ತದೆ. ಹಣಕಾಸಿನ ಸ್ಥಿತಿ ಉತ್ತಮವಾಗಿದೆ.

 

ವೃಷಭ (Vrushabha)

ನೀವು ನಿಮ್ಮ ಮಾತಿನ ಚಾತುರ್ಯದ ಮೂಲಕ ಜನರ ಗಮನ ಸೆಳೆಯುವಿರಿ. ಇದರಿಂದ ನಿಮ್ಮ ಹಿಂಬಾಲಕರು ಹೆಚ್ಚಾಗುವರು. ಹಾಗಂತ ಅಹಂಕಾರ ಪಡುವುದು ಒಳ್ಳೆಯದಲ್ಲ. ಇದು ಕಲಿಯುಗ ಕಲಿಯುತ್ತಲೇ ಇರಬೇಕಾಗುವುದು.

 

ಮಿಥುನ (Mithuna)

ಈದಿನದ ನಿಮ್ಮ ಮನೋಕಾಮನೆಗಳು ಯಶಸ್ಸಿನತ್ತ ಸಾಗುವುದು. ಪರಿಶ್ರಮದಿಂದ ಧನಸಂಪಾದನೆಗೆ ಮುಂದಾಗಿರಿ. ದೈವಬಲದ ದೆಸೆಯಿಂದ ಹೆಚ್ಚಿನ ಅನುಕೂಲವಾಗುವುದು. ವಿದ್ಯಾರ್ಥಿಗಳು ಸಾಕಷ್ಟು ಓದಿನ ಕಡೆ ಗಮನ ಹರಿಸಬೇಕು.

 

ಕರ್ಕ (Karka)

ನಿಮ್ಮ ಮನೋಧೈರ್ಯವನ್ನು ಕೆಡಿಸುವಂತಹ ಅನ್ಯರ ಮಾತುಗಳನ್ನು ಬೇಗನೆ ನಂಬದಿರಿ. ಮನಸ್ಸಿನ ಸಂತುಲವನ್ನು ಕಾಯ್ದುಕೊಂಡರೆ ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ಕೇವಲ ಔಷಧಿಗಳಿಂದ ಖಾಯಿಲೆ ವಾಸಿಯಾಗುವುದಿಲ್ಲ. ಅದರ ಬಗ್ಗೆ ನಂಬಿಕೆಯೂ ಬೇಕು.

 

ಸಿಂಹ (Simha)

ಜವಾಬ್ದಾರಿಯನ್ನು ನಿರ್ವಹಿಸಿ, ಅಡೆತಡೆಗಳನ್ನು ಎದುರಿಸಿ ನಿಲ್ಲುವಂತಹ ಶಕ್ತಿಯು ಇಂದು ತನ್ನಿಂದ ತಾನೇ ಲಭಿಸುವುದು. ಹಣಕಾಸಿನ ಸ್ಥಿತಿಯು ಉತ್ತಮವಾಗಿದ್ದು, ನಿಮ್ಮ ಬಹುದಿನದ ಕನಸು ನನಸಾಗುವುದು.

 

ಕನ್ಯಾರಾಶಿ (Kanya)

ಯಾರದೋ ಸಹಾಯ ಬರಬಹುದು ಎಂಬ ಅತಿಯಾದ ನಿರೀಕ್ಷೆಯಲ್ಲಿಯೇ ಈದಿನದ ಬಹುಪಾಲು ಸಮಯ ವ್ಯರ್ಥವಾಗುವುದು. ಹಾಗಾಗಿ ಅವರ ನಿರೀಕ್ಷೆ ಮಾಡದೆ ಅನ್ಯರ ಸಹಾಯವನ್ನು ಪಡೆಯಿರಿ ಒಳಿತಾಗುವುದು.

 

ತುಲಾ (Tula)

ವಿವಾದಗಳನ್ನು ಸೃಷ್ಟಿ ಮಾಡುವಂತಹ ವಿಚಾರಗಳ ಪ್ರತಿಪಾದನೆಗೆ ಖಂಡಿತವಾಗಿ ಮುಂದಾಗದಿರಿ. ಒಬ್ಬರ ಆಂತರಿಕ ವಿಷಯವನ್ನು ಮತ್ತೊಬ್ಬರ ಮುಂದೆ ಹೇಳಿ ಮಧುರ ಬಾಂಧವ್ಯವನ್ನು ಹಾಳು ಮಾಡಿಕೊಳ್ಳದಿರಿ. ಆದಷ್ಟು ಮೌನ ವಹಿಸಿ.

 

ವೃಶ್ಚಿಕ (Vrushchika)

ಸ್ವಾರ್ಥ ಇರುವುದು ತಪ್ಪೇನಲ್ಲ. ಆದರೆ ನಿಮ್ಮ ಸ್ವಾರ್ಥದಿಂದ ಅನ್ಯರಿಗೆ ತೊಂದರೆ ಆಗದಿರಲಿ. ಮನಸ್ಸಿನ ತುಮುಲಗಳನ್ನು ಹತೋಟಿಗೆ ತಂದುಕೊಳ್ಳಲು ಶಿವಪಂಚಾಕ್ಷ ರಿ ಮಂತ್ರವನ್ನು ಪಠಿಸಿ ಮತ್ತು ಮಾತಾ ದುರ್ಗಾದೇವಿಯ ದರ್ಶನ ಪಡೆಯಿರಿ.

 

ಧನು ರಾಶಿ (Dhanu)

ನಿಮ್ಮ ಏಕಾಗ್ರತೆ ಹಾಗೂ ಕಠಿಣ ಪರಿಶ್ರಮಗಳಿಂದ ನಿಮ್ಮ ಮೇಲಿನ ಅಧಿಕಾರಿಗಳಿಗೆ ಹೆಚ್ಚಿನ ಸಂತೋಷ ಲಭ್ಯವಾಗಲಿದೆ. ಇದರಿಂದ ಅವರು ನಿಮಗೆ ಗುರುತರವಾದ ಜವಾಬ್ದಾರಿಯನ್ನು ನಿಭಾಯಿಸಲು ನೇಮಿಸುವರು.

 

ಮಕರ (Makara)

ನೀವು ಸಾಮಾಜಿಕವಾಗಿ ನಡೆಸಲಿರುವಂತಹ ಚಟುವಟಿಕೆಗಳಿಂದ ಒತ್ತಡವಿದ್ದರು ಅದು ಸಂತೋಷವನ್ನುಂಟು ಮಾಡುವುದು. ಜ್ಞಾನದ ಸಂವರ್ಧನೆಗಳಿಗಾಗಿ ಪ್ರವಾಸವನ್ನು ಕೈಗೊಳ್ಳುವಿರಿ. ಇದಕ್ಕೆ ಪೂರಕವಾಗಿ ಹಣಕಾಸು ಬರುವುದು.

 

ಕುಂಭರಾಶಿ (Kumbha)

ಬದಲಾವಣೆಯ ಮಾರ್ಗವನ್ನು ಬಯಸುವಿರಿ. ಕೆಲವು ಉತ್ತಮ ಗೆಳೆಯರು ನಿಮಗೆ ಸರಿಯಾದ ಮಾರ್ಗದರ್ಶನ ನೀಡುವರು. ನಿಮ್ಮ ಬರಹಗಳಿಗೆ ಜನರಿಂದ ಮೆಚ್ಚುಗೆ ವ್ಯಕ್ತವಾಗುವುದು ಮತ್ತು ಕೆಲವು ನಿಗೂಢ ವಿಚಾರಗಳು ನಿಮಗೆ ಗೋಚರಿಸುವುದು.

 

ಮೀನರಾಶಿ (Meena)

ಹಿರಿಯರ ಕೃಪಾಶೀರ್ವಾದಗಳ ಫಲವಾಗಿ ಹೆಚ್ಚಿನದನ್ನು ಗಳಿಸಲು ನಿಮಗೆ ಉತ್ತಮವಾದ ಅವಕಾಶಗಳು ಲಭ್ಯವಾಗಲಿದೆ, ನಿಮ್ಮ ಅಪರೂಪದ ಪ್ರತಿಭೆಯನ್ನು ಜನರು ಗುರುತಿಸುವ ಅದೃಷ್ಟದ ಕಾಲಘಟ್ಟವು ನಿಮ್ಮ ಪಾಲಿಗಿದೆ. ಹಾಗಾಗಿ ಮುನ್ನುಗ್ಗಿ ಕೆಲಸ ಕಾರ್ಯಗಳನ್ನು ಹಮ್ಮಿಕೊಳ್ಳಿ. ಜಯವಿರುವವರಿಗೆ ಭಯವಿಲ್ಲ ಎಂಬುದನ್ನು ಅರಿಯಿರಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top