fbpx
ಸಮಾಚಾರ

ಏಪ್ರಿಲ್ 05: ಇಂದಿನ ಪಂಚಾಂಗ ಮತ್ತು ದಿನ ಭವಿಷ್ಯ

ಏಪ್ರಿಲ್ 5, 2021 ಸೋಮವಾರ
ವರ್ಷ : 1942 ಶಾರ್ವರಿ
ತಿಂಗಳು : ಫಾಲ್ಗುಣ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ನವಮೀ 2:18 am
ನಕ್ಷತ್ರ : ಉತ್ತರಾಷಾಢ 2:05 am
ಯೋಗ : ಶಿವ 4:54 pm
ಕರಣ : ತೈತುಲ 2:34 pm ಗರಿಜ 2:18 am

Time to be Avoided
ರಾಹುಕಾಲ : 7:48 am – 9:19 am
ಯಮಗಂಡ : 10:50 am – 12:22 pm
ದುರ್ಮುಹುರ್ತ : 12:46 pm – 1:35 pm, 3:12 pm – 4:01 pm
ವಿಷ : 10:05 am – 11:41 am, 12:00 am – 7:47 am
ಗುಳಿಕ : 1:53 pm – 3:25 pm

Good Time to be Used
ಅಮೃತಕಾಲ : 7:41 pm – 9:17 pm
ಅಭಿಜಿತ್ : 11:57 am – 12:46 pm

Other Data
ಸೂರ್ಯೋದಯ : 6:13 am
ಸುರ್ಯಾಸ್ತಮಯ : 6:31 pm
ರವಿರಾಶಿ : ಮೀನ
ಚಂದ್ರರಾಶಿ : ಧನುಸ್ upto 08:02

 

 

 

ಮೇಷ (Mesha)

 

ನಿಮ್ಮ ದೌರ್ಬಲ್ಯಗಳ ಉಪಯೋಗವನ್ನು ಅನ್ಯರು ಮಾಡಿಕೊಳ್ಳುವರು. ಹಾಗಾಗಿ ನಿಮ್ಮ ಸ್ವಂತ ವಿಷಯಗಳನ್ನು ಎಲ್ಲರ ಮುಂದೆ ಪ್ರಸ್ತಾಪ ಮಾಡುವುದು ಸರಿಯಲ್ಲ. ಹೊಸತನವೇ ಬದುಕಿನ ಯಶಸ್ಸಿನ ಮಂತ್ರ. ಇದರಿಂದ ನಿಮಗೆ ಲಾಭವಾಗುವುದು.

 

ವೃಷಭ (Vrushabha)

ಸಾಧನೆಗೆ ಸಾಧ್ಯತೆಗಳು ಹೇರಳವಾಗಿರುತ್ತದೆ. ಯಾವುದೇ ಕಾರಣಕ್ಕೂ ಜಡತ್ವ ಬೇಡ. ಬಾಳಸಂಗಾತಿಯ ವಿಶ್ವಾಸ ಪಡೆದು ಆಕೆಯ ಇಷ್ಟಾ-ನಿಷ್ಟಗಳನ್ನು ತಿಳಿದು ಅವಳನ್ನು ಸಂತೋಷ ಪಡಿಸಿರಿ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.

 

ಮಿಥುನ (Mithuna)

ನಿತ್ಯದ ರಗಳೆಗಳ ನಡುವೆ ಬಹುದಿನಗಳ ಕನಸು ನನಸಾಗಲಿದೆ. ದಿನದ ವೇಳಾಪಟ್ಟಿಯಲ್ಲಿ ಸಕಾರಾತ್ಮಕ ಅಂಶಗಳನ್ನು ಗುರುತು ಮಾಡಿಕೊಳ್ಳಿರಿ. ಸಂಗಾತಿಯ ಸಕಾಲದ ಮುನ್ನೆಚ್ಚರಿಕೆಯಿಂದ ಮನೆಯಲ್ಲಿ ಸಂತಸ ವಾತಾವರಣ ಮೂಡುವುದು.

 

ಕರ್ಕ (Karka)

ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆ ಕಂಡುಬರುವುದು. ಹಾಗಂತ ನಿರಾಳರಾಗದಿರಿ. ದಾರಿಯಲ್ಲಿನ ಏರು-ತಗ್ಗುಗಳನ್ನು ಸರಿಪಡಿಸುವತ್ತ ಶ್ರಮ ವಹಿಸಿ. ಅರ್ಥಾತ್‌ ತುರ್ತಾಗಿ ಪಾವತಿಸಬೇಕಾದ ಸಾಲದ ಮರುಪಾವತಿ ಮಾಡಿರಿ ಒಳಿತಾಗುವುದು.ಈದಿನ ಮಹತ್ವದ ನಿರ್ಣಯವನ್ನು ತೆಗೆದುಕೊಳ್ಳುವಿರಿ. ಇದರಿಂದ ನಿಮ್ಮ ಕುಟುಂಬದ ಸದಸ್ಯರು ಹರ್ಷಚಿತ್ತರಾಗುವರು.

 

ಸಿಂಹ (Simha)

ನಿಮ್ಮ ಸ್ನೇಹಿತರು ಸಕಾಲದಲ್ಲಿ ಸಹಾಯ ಮಾಡುವುದರಿಂದ ನಿಮ್ಮ ಸಮಸ್ಯೆಗಳು ಪರಿಹಾರವಾಗುವುದು. ಕಚೇರಿಯಲ್ಲಿ ಹೊಸ ತಂತ್ರದ ಪ್ರಯೋಗ ಮಾಡುವಿರಿ ಮತ್ತು ಅದರಲ್ಲಿ ಯಶಸ್ಸು ಹೊಂದುವಿರಿ, ಕೌಟುಂಬಿಕ ಜೀವನದಲ್ಲೂ ಸಂತಸ ಕಂಡುಬರುವುದು. ಮನೆಯ ಹಿರಿಯರ ಆರೋಗ್ಯದ ಕಡೆ ಗಮನ ಹರಿಸಿರಿ.

 

ಕನ್ಯಾರಾಶಿ (Kanya)

ಉದ್ರೇಕ, ಕೋಪಗಳನ್ನು ಸೃಷ್ಟಿಸುವ ಜನರೇ ಬಹುತೇಕ ಇಂದು ನಿಮ್ಮ ಎದುರಾಗುವರು. ಆದಷ್ಟು ತಾಳ್ಮೆ ಕಳೆದುಕೊಳ್ಳದೆ ಗುರುವಿನ ಮೊರೆ ಹೋಗಿ. ಗುರುವಿನ ಸಕಾಲಿಕ ಹಿತನುಡಿಯಿಂದ ಈದಿನದ ಕಾರ್ಯದಲ್ಲಿ ಯಶಸ್ಸು ಹೊಂದುವಿರಿ.

 

ತುಲಾ (Tula)

ವ್ಯವಹಾರದ ವಿಚಾರದಲ್ಲಿ ಅವಸರ ತೋರಬೇಡಿ. ಸಾವಧಾನದ ಹೆಜ್ಜೆಗಳನ್ನು ಇಡುವುದರಿಂದ ಯಶಸ್ವಿ ಉದ್ಯಮಿ ಆಗುವಿರಿ. ಸಮಾಜದಲ್ಲಿ ಕೀರ್ತಿ ಗೌರವಗಳು ಕಂಡು ಬರುವುದು. ಕುಲದೇವರ ಸ್ಮರಣೆ ಮಾಡಿರಿ.

 

ವೃಶ್ಚಿಕ (Vrushchika)

ಆತ್ಮಸ್ಥೈರ್ಯದಿಂದ ಮಾಡುವ ಕೆಲಸ ಕಾರ್ಯಗಳಿಂದ ಯಶಸ್ಸು ಹೊಂದುವಿರಿ. ಸ್ನೇಹಿತರು ನಿಮ್ಮನ್ನು ಸಂದರ್ಶಿಸುವರು. ಮನೆಯ ಹಿರಿಯರ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುವುದು. ಆರ್ಥಿಕ ಸ್ಥಿತಿ ಉತ್ತಮ.

 

ಧನು ರಾಶಿ (Dhanu)

ಈದಿನ ಎಲ್ಲ ಕೆಲಸಗಳು ಸರಾಗವಾಗಿ ನಡೆಯುವ ಸಾಧ್ಯತೆ ಇರುತ್ತದೆ. ಬೆಳಗಿನಿಂದ ಸಂಜೆಯವರೆಗೆ ಸಿಹಿ ಸುದ್ದಿಯನ್ನು ಕೇಳುವಿರಿ. ಗುರು-ಹಿರಿಯರನ್ನು ನೆನೆದು ಇವತ್ತಿನ ಕೆಲಸ ಆರಂಭಿಸಿ ಒಳಿತಾಗುವುದು.

 

ಮಕರ (Makara)

ಅನಗತ್ಯ ಮಾತುಗಳು ಸಂಬಂಧವನ್ನು ಕೆಡಿಸುವುದು. ಹಾಗಾಗಿ ಮಾತನಾಡುವಾಗ ಎಚ್ಚರಿಕೆ ಇರಲಿ. ಹೊಸ ಕೆಲಸ ಕಾರ್ಯಗಳ ಆರಂಭಕ್ಕೂ ಮುನ್ನ ಮನೆದೇವರ ಮತ್ತು ಗುರುಹಿರಿಯರ ಆಶೀರ್ವಾದ ಪಡೆಯಿರಿ.

 

ಕುಂಭರಾಶಿ (Kumbha)

ನೀವು ಈ ಹಿಂದೆ ಅಸಡ್ಡೆ ಮಾಡಿದ ವ್ಯಕ್ತಿಯಿಂದಲೇ ಇಂದು ನಿಮಗೆ ಗೌರವ, ಆದರಗಳು ದೊರೆಯುವುದು. ಹಾಗಾಗಿ ಸ್ನೇಹ ವೃದ್ಧಿಸುವುದು. ಹಣಕಾಸಿನ ಸ್ಥಿತಿ ಉತ್ತಮವಾಗುವುದು.ಕೆಲಸ ಕಾರ್ಯಗಳಲ್ಲಿನ ನ್ಯೂನತೆಗಳನ್ನು ದಿಢೀರನೆ ಒಪ್ಪಿಕೊಳ್ಳದಿರಿ. ಸಾರ್ವಜನಿಕವಾಗಿ ಕುಳಿತು ಚಿಂತಿಸಿ ಎಲ್ಲಿ ಲೆಕ್ಕ ತಪ್ಪಾಗಿದೆ ಎಂದು ತಿಳಿದು ಬರುವುದು.

 

ಮೀನರಾಶಿ (Meena)

ಆರೋಗ್ಯದ ವಿಚಾರದಲ್ಲಿ ಹೆಚ್ಚಿನ ಎಚ್ಚರವಿರಲಿ. ಭಾಗ್ಯದ ವಿಚಾರದಲ್ಲಿ ಅನುಕೂಲವಾಗುವುದು. ಧನಾತ್ಮಕ ಚಿಂತನೆಯಿಂದ ಈದಿನ ಒಳಿತನ್ನು ಕಾಣುವಿರಿ. ಗುರು-ಹಿರಿಯರನ್ನು ಗೌರವಿಸಿ. ಗುರುವಿನ ಸ್ತೋತ್ರ ಪಠಿಸಿರಿ, ಕೋಪವು ಅನರ್ಥಕ್ಕೆ ದಾರಿ ಎಂಬುದು ಈ ಹಿಂದೆ ಹಲವು ಬಾರಿ ನಿಮಗೆ ಮನವರಿಕೆ ಆಗಿರುವುದು. ತಾಳ್ಮೆಯಿಂದಿರಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top