fbpx
ಸಮಾಚಾರ

ಡೆಲ್ಲಿ ಕ್ಯಾಪಿಟಲ್ಸ್‌ಗೆ ಭಾರಿ ಆಘಾತ: ಸ್ಟಾರ್ ಆಟಗಾರನಿಗೆ ಕೊರೊನಾ ಪಾಸಿಟಿವ್

14ನೇ ಆವೃತ್ತಿಯ ಇಂಡಿಯನ ಪ್ರೀಮಿಯರ್ ಲೀಗ್‌ (ಐಪಿಎಲ್‌) ಆರಂಭಕ್ಕೂ ಮುನ್ನವೇ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಹಿನ್ನಡೆಯ ಸಂಗತಿಯೊಂದು ಕೇಳಿ ಬಂದಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದ ಎಂಟು ಮಂದಿ ಸಿಬ್ಬಂದಿಗೆ ಕೋವಿಡ್‌-19 ಪಾಸಿಟಿವ್‌ ಬಂದ ಬೆನ್ನಲ್ಲೆ ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಪಿನ್‌ ಆಲ್‌ರೌಂಡರ್‌ ಅಕ್ಷರ್‌ ಪಟೇಲ್‌ಗೂ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ

 

 

ಏ.10 ರಂದು ಮುಂಬೈನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ವಿರುದ್ಧ ನಡೆಯುವ ತಮ್ಮ ಮೊದಲನೇ ಪಂದ್ಯಕ್ಕೆ ಇನ್ನೂ ಕೇವಲ ಏಳು ದಿನಗಳು ಮಾತ್ರ ಬಾಕಿ ಇವೆ. ಇದರ ನಡುವೆ ಅಕ್ಷರ್ ಪಟೇಲ್‌ಗೆ ಕೋವಿಡ್‌-19 ಸೋಂಕು ತಗುಲಿರುವುದು ಡೆಲ್ಲಿ ಕ್ಯಾಪಿಟಲ್ಸ್‌ಗೆ ಭಾರಿ ಹಿನ್ನಡೆಯನ್ನು ತಂದೊಡ್ಡಿದೆ. “ಅನಿರೀಕ್ಷಿತವಾಗಿ ಅಕ್ಷರ್ ಪಟೇಲ್‌ಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದ್ದು, ಅವರು ಐಸೋಲೇಷನ್‌ಗೆ ಒಳಗಾಗಿ ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸುತ್ತಿದ್ದಾರೆ,” ಎಂದು ವರದಿಯಾಗಿದೆ.

ಇದಕ್ಕೂ ಮೊದಲು ಕೆಕೆಆರ್ ಬ್ಯಾಟ್ಸ್ ಮನ್ ನಿತಿಶ್ ರಾಣಾಗೆ ಕೊರೋನಾ ಸೋಂಕು ತಗುಲಿದ ಬಳಿಕ ಇದೀಗ ಅಕ್ಷರ್ ಪಟೇಲ್ ಗೆ ಪಾಸಿಟಿವ್ ಪತ್ತೆಯಾಗಿದೆ. ಆದಾಗ್ಯೂ, ರಾಣಾ ಅವರಿಗೆ ಗುರುವಾರ ನಡೆದ ಪರೀಕ್ಷೆ ವರದಿಯಲ್ಲಿ ನೆಗೆಟಿವ್ ಬಂದಿದೆ.

ಕೋವಿಡ್-19 ಪಾಸಿಟಿವ್ ಬಂದ ಆಟಗಾರರು ಜೀವ- ಸುರಕ್ಷತಾ ಪರಿಸರಹ ಹೊರಗಡೆ ಪ್ರದೇಶದಲ್ಲಿ ಕನಿಷ್ಠ 10 ದಿನಗಳ ಕಾಲ ಐಸೋಲೇಷನ್ ನಲ್ಲಿ ಇರಬೇಕಾಗುತ್ತದೆ. ತಂಡದ ವೈದ್ಯರು ನಿಯಮಿತವಾಗಿ ನಿಗಾ ವಹಿಸಬೇಕು, ಐಸೋಲೇಷನ್ ವೇಳೆಯಲ್ಲಿ ಸೋಂಕು ತೀವ್ರಗೊಂಡಾಗ ಕೂಡಲೇ ಆಸ್ಪತ್ರೆಗೆ ದಾಖಲಾಗುವಂತೆ ಬಿಸಿಸಿಐ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top