fbpx
ಸಮಾಚಾರ

ಕಬ್ಜ ಶೂಟಿಂಗ್ ವೇಳೆ ಉಪೇಂದ್ರಗೆ ಪೆಟ್ಟು: ತಲೆಗೆ ಬಡಿಯಿತು ಸಹ ನಟ ಬೀಸಿದ ರಾಡ್

ಬಹುನಿರೀಕ್ಷಿತ ಕಬ್ಜ ಚಿತ್ರದ ಶೂಟಿಂಗ್ ವೇಳೆ ನಟ ಉಪೇಂದ್ರ ಅವರಿಗೆ ಪೆಟ್ಟು ಬಿದ್ದಿರುವುದಾಗಿ ವರದಿಯಾಗಿದೆ. ಚಿತ್ರೀಕರಣದ ವೇಳೆ ಸಹ ನಟ ಬೀಸಿದ ರಾಡ್ ಅಚಾನಕ್​ ಆಗಿ ರಿಯಲ್ ಸ್ಟಾರ್ ಉಪೇಂದ್ರ ಅವರ ತಲೆಗೆ ಬಡಿದು ಏಟಾಗಿದೆ. ತಲೆಗೆ ಗಾಯವಾದರೂ ಅರ್ಧಕ್ಕೆ ಶೂಟಿಂಗ್ ನಿಲ್ಲಿಸದ ಉಪೇಂದ್ರ, ಶೂಟಿಂಗ್​ ಪೂರ್ಣಗೊಳಿಸುವ ಮೂಲಕ ಸಿನಿಮಾ ಮೇಲಿನ ತಮ್ಮ ಬದ್ಧತೆ ಮತ್ತು ಪ್ರೀತಿಯನ್ನು ಸಾಬೀತು ಮಾಡಿದರು.

ಕಬ್ಬಿಣದ ರಾಡ್​ನಿಂದ ಉಪ್ಪಿಗೆ ಹೊಡೆಯುವ ಸೀನ್ ಚಿತ್ರೀಕರಿಸಲಾಗುತ್ತಿತ್ತು. ಈ ವೇಳೆ ಫೈಟರ್ ಹಿಂದಿನಿಂದ ಬೀಸಿದ ಚೂಪಾದ ರಾಡ್​​ನಿಂದ ಉಪ್ಪಿ ತಪ್ಪಿಸಿಕೊಳ್ಳುವಾಗ, ಅದು ಮಿಸ್ ಆಗಿ​​ ಅವರ ತಲೆಗೆ ತಾಗಿದೆ. ಅದೃಷ್ಟವಶಾತ್​ ಉಪೇಂದ್ರಗೆ ಯಾವುದೇ ಗಂಭೀರ ಗಾಯವಾಗಿಲ್ಲ. ಕೆಲ ಕಾಲ ಸುಧಾರಿಸಿಕೊಂಡು ಮತ್ತೆ ಉಪೇಂದ್ರ ಶೂಟಿಂಗ್​ನಲ್ಲಿ ಭಾಗಿಯಾದರು ಎಂದು ತಿಳಿದುಬಂದಿದೆ.

ಕಬ್ಜ ಬಹು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, ಆರ್ .ಚಂದ್ರು ಅವರು ನಿರ್ದೇಶಿಸುತ್ತಿದ್ದಾರೆ. ಸ್ಟಂಟ್ ಮಾಸ್ಟರ್ ರವಿವರ್ಮ ರವರ ನಿರ್ದೇಶನದಲ್ಲಿ ಸಾಹಸ ಚಿತ್ರೀಕರಣ ನಡೆಯುತ್ತಿತ್ತು. ಈ ಚಿತ್ರದಲ್ಲಿ ನಟ ಕಿಚ್ಚ ಸುದೀಪ್​ ಸಹ ವಿಶೇಷ ಪಾತ್ರದಲ್ಲಿ ನಟಿಸಲಿದ್ದಾರೆಂಬ ಸುದ್ದಿ ಈಗಾಗಲೇ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ದುಪ್ಪಟ್ಟಾಗಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top