fbpx
ಸಮಾಚಾರ

ಬಿಗ್ ಬಾಸ್ 8 : ಐದನೇ ವಾರ ಬಿಗ್ ಮನೆಯಿಂದ ಮತ್ತೊಬ್ಬ ಸೆಲೆಬ್ರಿಟಿ ಔಟ್

ಐದನೇ ವಾರ ಮನೆಯಿಂದ ಯಾರು ಹೊರ ಹೋಗ್ತಾರೆ ಅನ್ನೋ ತವಕಕ್ಕೆ ತೆರೆ ಬಿದ್ದಿದೆ. ಮನೆಯ ಹಿರಿಯ ಸ್ಪರ್ಧಿ ಶಂಕರ್ ಅಶ್ವಥ್ ಈ ಬಿಗ್‍ಬಾಸ್ ನಿಂದ ಹೊರ ಬಂದಿದ್ದಾರೆ. ಮನೆಯೊಳಗೆ ಕಾಲಿಡುವಾಗ ಬಹಳ ಉತ್ಸಾಹದಿಂದಲೇ ಎಂಟ್ರಿ ಕೊಟ್ಟಿದ್ದ ಶಂಕರ್ ಅಶ್ವತ್ಥ್, ಐದೇ ವಾರಕ್ಕೆ ತಮ್ಮ ಜರ್ನಿಯನ್ನು ಮುಕ್ತಾಯಗೊಳಿಸಿದ್ದಾರೆ!

 

 

ನಿಧಿ ಸುಬ್ಬಯ್ಯ, ಶಮಂತ್ ಗೌಡ, ನಿಧಿ ಸುಬ್ಬಯ್ಯ, ಅರವಿಂದ್ ಮತ್ತು ಶಂಕರ್ ಅಶ್ವಥ್ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದರು. ಅಂತಿಮವಾಗಿ ಶಂಕರ್ ಅಶ್ವಥ್ ಹೊರ ಬಂದಿದ್ದು, ಕಳೆದ ವಾರ ಕೇಳಿ ಬಂದಿದ್ದ ಗಾಳಿ ಸುದ್ದಿಗಳಿಗೆ ಪೂರ್ಣ ವಿರಾಮ ಬಿದ್ದಿದೆ. ನಾಲ್ಕನೇ ವಾರ ಎಲಿಮಿನೇಟ್ ಆಗಿದ್ದ ಚಂದ್ರಕಲಾ ಮೋಹನ್ ಪ್ರಕಾರ ತಮ್ಮ ನಂತರ ನಿಧಿ ಔಟ್ ಆಗ್ತಾರೆ ಎಂದು ಗೆಸ್ ಮಾಡಿದ್ದರು.

ಮನೆಯಿಂದ ಹೊರ ಬಂದ ಬಳಿಕ ಮಾತನಾಡಿದ ಶಂಕರ್ ಅಶ್ವಥ್, 35 ದಿನ ಸಾಕಾಯ್ತಾ ಅನ್ನಿಸಲ್ಲ. ಆದ್ರೆ ಮನೆಯಲ್ಲಿ ಮನಸ್ಸಿದೆ. ಶಕ್ತಿ ಮೀರಿ ನೀಡಿದ ಟಾಸ್ಕ್ ಮಾಡಿದೆ. ನನಗೆ ಸ್ಪೈನಲ್ ಕಾರ್ಡ್ ಆಪರೇಷನ್ ಆಗಿದೆ. ಟಾಸ್ಕ್ ವೇಳೆ ಏನಾದ್ರೂ ಆದ್ರೆ ಅನ್ನೋ ಭಯ. 82 ವಯಸ್ಸಿನ ತಾಯಿ ಇದ್ದಾರೆ. ಹೆಂಡ್ತಿ ಇದ್ದಾರೆ. ಇವರಿಗೆಲ್ಲ ನಾನು ಭಾರ ಆಗ್ತೀನಿ ಅನ್ನೋ ಭಯ ಶುರುವಾಗಿತ್ತು ಎಂದರು.

ಉಳಿದಂತೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ಒಟ್ಟು 17 ಜನರ ಪೈಕಿ ಶಂಕರ್ ಅಶ್ವತ್ ಸೇರಿದಂತೆ ಐವರು ಮನೆಯಿಂದ ಹೊರ ಬಂದಿದ್ದಾರೆ. ಮೊದಲ ವಾರ ಟಿಕ್‍ಟಾಕ್ ಸ್ಟಾರ್ ಧನುಶ್ರೀ, ಎರಡನೇ ವಾರ ನಿರ್ಮಲಾ ಚೆನ್ನಪ್ಪ ಔಟ್ ಆಗಿದ್ದಾರೆ. ಮೂರನೇ ವಾರದ ಗೀತಾ ಭಾರತಿ ಭಟ್, ಹಾಗೂ ನಾಲ್ಕನೇ ವಾರದಲ್ಲಿ ಚಂದ್ರಕಲಾ ಮೋಹನ್ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದರು. ಇನ್ನು ಐದನೇ ವಾರ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ರೂಪದಲ್ಲಿ ಚಕ್ರವರ್ತಿ ಚಂದ್ರಚೂಡ್ ಅವರು ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top