fbpx
ಸಮಾಚಾರ

RCB ತಂಡಕ್ಕೆ ಭಾರಿ ಆಘಾತ: ಮತ್ತೊಬ್ಬ ಸ್ಟಾರ್ ಆಟಗಾರನಿಗೆ ಕೊರೋನಾ ಪಾಸಿಟಿವ್

ಐಪಿಎಲ್‌ನ 14 ನೇ ಆವೃತ್ತಿ ಪ್ರಾರಂಭವಾಗಲು ಐದು ದಿನಗಳು ಉಳಿದಿವೆ. ಆದರೆ ಆರಂಭಕ್ಕೂ ಮುನ್ನವೇ IPLಗೆ ಕೊರೊನಾ ಕಾಟ ಹೆಚ್ಚಾಗಿದೆ. ಚೆನ್ನೈ ಸೂಪರ್ ಕಿಂಗ್ಸ್, ಕೋಲ್ಕತಾ ನೈಟ್ ರೈಡರ್ಸ್, ದೆಹಲಿ ಕ್ಯಾಪಿಟಲ್ಸ್ ನಂತರ, ಈಗ ವಿರಾಟ್ ಕೊಹ್ಲಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊರೊನಾ ದಾಳಿಗೆ ತುತ್ತಾಗಿದೆ. ಆರ್‌ಸಿಬಿಯ ಸ್ಟಾರ್ ಯುವ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್​ಗೆ ಕೋವಿಡ್ ಪಾಸಿಟಿವ್ ಕಂಡುಬಂದಿದೆ. ದೇವದತ್ ಅವರನ್ನು ತಂಡದ ಉಳಿದ ಆಟಗಾರರಿಂದ ಬೇರ್ಪಡಿಸಿ ಪ್ರತ್ಯೇಕಿಸಲಾಗಿದೆ.

 

 

ಏಪ್ರಿಲ್ 3ರ ಭಾನುವಾರ ದೇವದತ್ ಪಡಿಕ್ಕಲ್‌ಗೆ ಕೊರೊನಾವೈರಸ್ ಪಾಸಿಟಿವ್ ಬಂದಿರುವುದಾಗಿ ವರದಿಯಾಗಿತ್ತು. ಅಸಲಿಗೆ ಪಡಿಕ್ಕಲ್‌ಗೆ ಮಾರ್ಚ್ 22ರಂದೇ ಸೋಂಕು ತಗುಲಿದ್ದಾಗಿ ತಿಳಿದು ಬಂದಿದೆ. ಆರ್‌ಸಿಬಿ ಫ್ರಾಂಚೈಸಿ ಇದನ್ನು ತಿಳಿಸಿದೆ. ಅಲ್ಲದೆ ಪಡಿಕ್ಕಲ್ ಶೀಘ್ರ ತಂಡ ಸೇರಿಕೊಳ್ಳಲಿರುವ ಮುನ್ಸೂಚನೆ ನೀಡಿದೆ.

ಎಎನ್‌ಐ ಜೊತೆ ಮಾತನಾಡಿದ ಆರ್‌ಸಿಬಿ, ‘ಮಾರ್ಚ್ 22ರಂದು ಕೋವಿಡ್-19 ಪಾಸಿಟಿವ್ ಬಂದಿರುವ ಬ್ಯಾಟ್ಸ್‌ಮನ್‌ ದೇವದತ್ ಪಡಿಕ್ಕಲ್ ಅವರ ಆರ್‌ಟಿ-ಪಿಸಿಆರ್ ಪರೀಕ್ಷೆ ನೆಗೆಟಿವ್ ಬಂದರೆ ಅವರು ಆರ್‌ಸಿಬಿ ಬಯೋಬಬಲ್ ಸೇರಿಕೊಳ್ಳಲು ಫಿಟ್ ಆಗಲಿದ್ದಾರೆ. ಅವರು ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಮುಂಬರಲಿರುವ ಐಪಿಎಲ್‌ಗಾಗಿ ಆರ್‌ಸಿಬಿ ತಂಡದಲ್ಲಿ ಶೀಘ್ರ ಕಾಣಿಸಿಕೊಳ್ಳಲಿದ್ದಾರೆ,’ ಎಂದು ಮಾಹಿತಿ ನೀಡಿದೆ.

ಪಡಿಕ್ಕಲ್ ಕಳೆದ ಆವೃತ್ತಿಯಲ್ಲಿ ಆರ್ ಸಿಬಿಗೆ ದೊಡ್ಡ ಸ್ಟಾರ್ ಆಗಿ ಕಾಣಿಸಿಕೊಂಡಿದ್ದರು. ಟಾಪ್ ಆರ್ಡರ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಆರ್ ಸಿಬಿ ಪ್ಲೇ ಆಫ್ ತಲುಪುವಂತೆ ಮಾಡುವಲ್ಲಿ ಪಡಿಕ್ಕಲ್ ಅವರ ಪಾತ್ರ ದೊಡ್ಡದಿದೆ. ಅವರ ಅಲಭ್ಯ ಆರ್ ಸಿಬಿಗೆ ದೊಡ್ಡ ಹೊಡೆತ ಬೀಳುವ ಸಾಧ್ಯತೆಯಿದೆ. ಸದ್ಯ ಪಡಿಕ್ಕಲ್ ಕ್ವಾರಂಟೈನ್ ನಲ್ಲಿರುವುದರಿಂದ ಏಪ್ರಿಲ್ 9 ರಂದು ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ನಡುವಣದ ಉದ್ಘಾಟನಾ ಪಂದ್ಯದಲ್ಲಿ ಆಡುವ ಅನುಮಾನವಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top