fbpx
ಸಮಾಚಾರ

ಮೃತ ಮಗನ ಫೊಟೊದೊಂದಿಗೆ ‘ಯುವರತ್ನ’ ವೀಕ್ಷಿಸಿದ ಕುಟುಂಬ: ಭಾವುಕರಾದ ನಟ ಪುನೀತ್‌

ಪುನೀತ್ ರಾಜ್‍ಕುಮಾರ್ ಅವರ ಅಪ್ಪಟ ಅಭಿಮಾನಿ ಮಗನನ್ನು ಕಳೆದುಕೊಂಡು ದುಃಖದ ಮಡುವಿನಲ್ಲಿದ್ದ ಕುಟುಂಬ ಭಾನುವಾರ ಅವನ ಫೋಟೋ ಇಟ್ಟುಕೊಂಡು, ಆತನ ಹೆಸರಲ್ಲಿ ಟಿಕೆಟ್ ಪಡೆದು ಸಿನಿಮಾ ನೋಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ದಕ್ಕೆ ನಟ ಪುನೀತ್ ರಾಜ್‍ಕುಮಾರ್ ತುಂಬಾ ಭಾವುಕರಾಗಿದ್ದು, ಮನಸ್ಸು ಭಾರವಾಯಿತು ಎಂದು ಹೇಳಿದ್ದಾರೆ.

 

 

ಈ ಘಟನೆಯಿಂದ ಭಾವುಕರಾಗಿರುವ ಪುನೀತ್‌ ರಾಜ್‌ಕುಮಾರ್‌, ‘ಮೈಸೂರಿನ ಮುರಳಿಧರ್ ಹಾಗು ಕುಟುಂಬದವರು ಅವರ ದಿವಂಗತ ಪುತ್ರ ಹರಿಕೃಷ್ಣನ್ ಫೋಟೋ ಜೊತೆಗೆ ಯುವರತ್ನ ಸಿನಿಮಾ ನೋಡಿರುವ ದೃಶ್ಯಗಳನ್ನು ನೋಡಿ ನನ್ನ ಮನಸ್ಸು ಭಾರವಾಯಿತು. ಬಾಲಕ ಹರಿಕೃಷ್ಣನ್ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಪ್ರಾರ್ಥಿಸಿದ್ದಾರೆ.

ಹರಿಕೃಷ್ಣನ್‌, ಪುನೀತ್‌ ಅವರ ಅಪ್ಪಟ ಅಭಿಮಾನಿಯಾಗಿದ್ದರು. ಯುವರತ್ನ ಚಿತ್ರವನ್ನು ನೋಡಬೇಕು ಎಂಬ ಆಸೆ ಹೊಂದಿದ್ದರು. ಆದರೆ ಚಿತ್ರ ಬಿಡುಗಡೆಗೂ ಮುನ್ನ ಅವರು ಸಾವನ್ನಪ್ಪಿದ್ದರು. ಹೀಗಿದ್ದರೂ, ಮಗನ ಆಸೆಯನ್ನು ಪಾಲಕರು ಈಡೇರಿಸಿದ್ದಾರೆ. ಮೈಸೂರಿನ ಡಿಆರ್‌ಸಿ ಮಲ್ಟಿಪ್ಲೆಕ್ಸ್‌ನಲ್ಲಿ, ಮೃತಪಟ್ಟ ಮಗನಿಗೂ ಒಂದು ಟಿಕೆಟ್‌ ಖರೀದಿಸಿ, ಆ ಆಸನದಲ್ಲಿ ಮಗನ ಭಾವಷಿತ್ರವನ್ನು ಇಟ್ಟು ಚಿತ್ರವನ್ನು ಪಾಲಕರು ಕುಟುಂಬ ಸಮೇತವಾಗಿ ಆನಂದಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top